ಬೆಂಗಳೂರಿನಲ್ಲಿ ಸ್ಥಗಿತಗೊಂಡಿದ್ದ ಬೌನ್ಸ್ ಸ್ಕೂಟಿ ಬಾಡಿಗೆ ಸೇವೆ ಪುನರಾರಂಭ

ಮೂರು ವರ್ಷದ ಹಿಂದೆ ಕೋವಿಡ್ ಸಂಕಷ್ಟದಲ್ಲಿ ಹೆಲ್ಮೆಟ್ ಕಳ್ಳತನ, ಬೈಕ್ ಪಾರ್ಕಿಂಗ್, ಡ್ಯಾಮೇಜ್ ಹೀಗೆ ಹಲವು ಸಮಸ್ಯೆಗಳಿಂದಾಗಿ ಈ ಬೈಕ್ ಬಾಡಿಗೆ ಸೇವೆ ನಿಲ್ಲಿಸಲಾಗಿತ್ತು. ಇದೀಗ ಹೊಸ ನಿಯಮಗಳೊಂದಿಗೆ ಸೇವೆ ಪುನರಾರಂಭಿಸಲಾಗಿದೆ.;

Update: 2025-07-11 07:33 GMT

ಬೌನ್ಸ್ ಬೈಕ್ 

ಬೆಂಗಳೂರಿನಲ್ಲಿ ಬೈಕ್‌ ಟಾಕ್ಸಿ ನಿಷೇಧದ ಬೆನ್ನಲ್ಲೇ ಇದೀಗ ಮೂರು ವರ್ಷದ ಹಿಂದೆ ಸ್ಥಗಿತಗೊಂಡಿದ್ದ ಬೌನ್ಸ್ ಸ್ಕೂಟಿ (Bounce Scooty) ಬಾಡಿಗೆ ಸೇವೆ ಮತ್ತೆ ಆರಂಭಿಸಲಾಗಿದೆ.

ಕರ್ನಾಟಕ ಸಾರಿಗೆ ಇಲಾಖೆಯ ‘‘ರೆಂಟ್ ಎ ಮೋಟರ್ ಸೈಕಲ್‌ಸ್ಕೀಮ್- 1987’’ ರ ಅಡಿಯಲ್ಲಿ ಅನುಮತಿ ಪಡೆದು ಈ ಸ್ಕೂಟಿ ಸೇವೆ ನೀಡಲಾಗುತ್ತಿದೆ.

ಈ ಬಾಡಿಗೆ ಸ್ಕೂಟಿಗಳು ಬೌನ್ಸ್ ಎಲೆಕ್ಟ್ರಿಕ್ ಸ್ಕೂಟಿಗಳಾಗಿದ್ದು,ಮೊದಲ ಹಂತದಲ್ಲಿ ಗಿಗ್ ವರ್ಕರ್ಸ್​​ಗೆ ಬಾಡಿಗೆ ಕೊಡಲಾಗುತ್ತಿದೆ. ಈಗಾಗಲೇ ನಗರದಲ್ಲಿ ಒಂದು ಸಾವಿರ ಸ್ಕೂಟಿಗಳು ರಸ್ತೆಗಿಳಿಯಲು ಸಿದ್ಧವಾಗಿವೆ.

ಒಂದು ದಿನಕ್ಕೆ 240-280 ರಂತೆ ಬಾಡಿಗೆ ಇರುತ್ತದೆ. ಕನಿಷ್ಠ ಮೂರು ದಿನಗಳಿಗೆ ಬುಕ್ಕಿಂಗ್ ಮಾಡಬೇಕಾಗುತ್ತದೆ. ಜೆ.ಪಿ‌.ನಗರ, ಹೂಡಿ, ಯಲಹಂಕ, ಆರ್.ಆರ್ ನಗರ, ಹೆಚ್.ಎಸ್.ಆರ್ ಲೇಔಟ್ ಗಳಲ್ಲಿ ಹಬ್ ಮಾಡಲಾಗಿದೆ.

ಮೂರು ವರ್ಷದ ಹಿಂದೆ ಕೋವಿಡ್ ಸಂಕಷ್ಟದಲ್ಲಿ ಹೆಲ್ಮೆಟ್ ಕಳ್ಳತನ, ಬೈಕ್ ಪಾರ್ಕಿಂಗ್, ಡ್ಯಾಮೇಜ್ ಹೀಗೆ ಹಲವು ಸಮಸ್ಯೆಗಳಿಂದಾಗಿ ಬೌನ್ಸ್ ಬೈಕ್ ಬಾಡಿಗೆ ಸೇವೆ ನಿಲ್ಲಿಸಲಾಗಿತ್ತು. ಇದೀಗ ಹೊಸ ನಿಯಮಗಳೊಂದಿಗೆ ಸೇವೆ ಪುನರಾರಂಭಿಸಲಾಗಿದೆ.

ಬೈಕ್ ಬಾಡಿಗೆಗೆ ಪಡೆಯುವವರು ಯಾವ ಹಬ್​​ನಿಂದ ತೆಗೆದುಕೊಂಡು ಹೋಗುತ್ತಾಯೋ ಅದೇ ಹಬ್​ಗೆ ಅವಧಿ ಮುಗಿದ ನಂತರ ತಂದು ನಿಲ್ಲಿಸಬೇಕಾಗುತ್ತದೆ. 

ಬೌನ್ಸ್ ಸ್ಕೂಟಿ ಸೇವೆಯಿಂದ ಬೆಂಗಳೂರಿನಲ್ಲಿ ದೈನಂದಿನ ಪ್ರಯಾಣಿಕರಿಗೆ, ವಿಶೇಷವಾಗಿ ಗಿಗ್ ವರ್ಕರ್ಸ್‌ಗಳಿಗೆ ಅನೂಕೂಲಕರವಾಗಲಿದೆ. 

Tags:    

Similar News