MahaKumbh Stampede | ಬೆಳಗಾವಿ ದಂಪತಿಗೆ ಗಾಯ, ಉಳಿದ ಎಲ್ಲರೂ ಸುರಕ್ಷಿತ

MahaKumbh Stampede ಬೆಳಗಾವಿ ನಗರದ ಶೆಟ್ಟಿ ಗಲ್ಲಿ ನಿವಾಸಿಗಳಾದ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ದಂಪತಿ ಕಾಲ್ತುಳಿತದ ವೇಳೆ ಪ್ರತ್ಯೇಕವಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.;

Update: 2025-01-29 07:17 GMT
ಬೆಳಗಾವಿಯ ಅರುಣ್‌ ಹಾಗೂ ಕಾಂಚನಾ

MahaKumbh Stampede: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ʼಮಹಾಕುಂಭ ಮೇಳʼದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ದಂಪತಿ ಸೇರಿ ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ ನಗರದ ಶೆಟ್ಟಿ ಗಲ್ಲಿ ನಿವಾಸಿಗಳಾದ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ದಂಪತಿ ಕಾಲ್ತುಳಿತದ ವೇಳೆ ಪ್ರತ್ಯೇಕವಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ಈ ಇಬ್ಬರು ಭಾನುವಾರ ಮಹಾಕುಂಭ ಮೇಳಕ್ಕೆ ತೆರಳಿದ್ದರು.

ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಕಾಂಚನಾ-ಅರುಣ್‌ ದಂಪತಿಯ ಪುತ್ರ ಓಂಕಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನು ಬೆಳಗಾವಿಯ ಕೆಲವು ಬಿಜೆಪಿ ಕಾರ್ಯಕರ್ತರು ಕೂಡ ಕುಂಭ ಮೇಳಕ್ಕೆ ತೆರಳಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಬೆಳಗಾವಿ ಬಿಜೆಪಿ ಕಚೇರಿಯ ಉಸ್ತುವಾರಿ ಅಶೋಕ ಬಿಳಿಸಿಕೊಪ್ಪ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಬೆಳಗಾವಿಯಿಂದ ಅಂದಾಜು 147 ಜನರು ಮಹಾಕುಂಭ ಮೇಳಕ್ಕೆ ತೆರಳಿರುವ ಮಾಹಿತಿ ಇದೆ. ಒಂದಿಬ್ಬರಿಗೆ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಬಿಜೆಪಿ ಕಾರ್ಯಕರ್ತೆಯರು, ಇತರರು ಕೂಡ ಕುಂಭಮೇಳಕ್ಕೆ ತೆರಳಿದ್ದಾರೆ ಎಂದು ಹೇಳಿದರು.

Tags:    

Similar News