ಗಡಿಯಾಚೆಗಿನ ವ್ಯಾಪಾರ ಅಭಿವೃದ್ಧಿಯತ್ತ ಏಷ್ಯಾ-ಅರಬ್ ವಾಣಿಜ್ಯ ಮಂಡಳಿ ದಿಟ್ಟ ಹಜ್ಜೆ

ವಾಣಿಜ್ಯ ಮಂಡಳಿಯು ಏಷ್ಯಾ ಮತ್ತು ಅರಬ್‌ ದೇಶಗಳ ನಡುವೆ ಆರ್ಥಿಕ ಸಹಕಾರ ಬಲಪಡಿಸುವ ಉದ್ದೇಶ ಹೊಂದಿರುವ ವಾಣಿಜ್ಯ ಮತ್ತು ವ್ಯಾಪಾರ ವೇದಿಕೆಯಾಗಿದೆ. ಇದು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವ್ಯಾಪಾರ ಪಾಲುದಾರಿಕೆ ಉತ್ತೇಜಿಸುತ್ತದೆ.

Update: 2025-09-24 08:24 GMT

ಏಷ್ಯಾ ಅರಬ್‌ ವಾಣಿಜ್ಯ ಮಂಡಳಿ ಆಯುಕ್ತ ಡಾ ಕೆ.ಜೆ. ಪುರುಷೋತ್ತಮ್

Click the Play button to listen to article

ಭಾರತ ಮತ್ತು ಬಹ್ರೆನ್ ನಡುವಿನ ದ್ವಿಪಕ್ಷೀಯ ಆರ್ಥಿಕ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಸ್ಥಾಪಿಸಿರುವ ಏಷ್ಯಾ-ಅರಬ್ ವಾಣಿಜ್ಯ ಮಂಡಳಿಗೆ ಗೌರವ ವಾಣಿಜ್ಯ ಆಯುಕ್ತರನ್ನಾಗಿ ಡಾ.ಕೆ.ಜೆ.ಪುರುಷೋತ್ತಮ್ ಅವರನ್ನು ಆಯ್ಕೆ ಮಾಡಲಾಗಿದೆ. 

ಬಹ್ರೆನ್ ರಾಯಭಾರ ಕಚೇರಿ, ಪ್ರಮುಖ ಪ್ರಾದೇಶಿಕ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಏಷ್ಯಾ-ಅರಬ್ ವಾಣಿಜ್ಯ ಮಂಡಳಿಯು ಗಡಿಯಾಚೆಗಿನ ವ್ಯಾಪಾರ ಸೌಲಭ್ಯ, ಹೂಡಿಕೆ ಪ್ರಚಾರ ಮತ್ತು ಉದ್ಯಮಶೀಲತೆ  ಕೇಂದ್ರೀಕರಿಸಿದೆ. 

ಮಧ್ಯಪ್ರಾಚ್ಯದಾದ್ಯಂತ ಭಾರತದ ಆರ್ಥಿಕ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಮುಖ ಕೇಂದ್ರವಾಗಿ ಇದು ಕಾರ್ಯನಿರ್ವಹಿಸಲಿದೆ.  ಅಂತಾರಾಷ್ಟ್ರೀಯ ಗಡಿಗಳಲ್ಲಿ ಸುಸ್ಥಿರ ಆರ್ಥಿಕ ಅಭಿವೃದ್ಧಿ ಮುನ್ನಡೆಸುವ ಸಾಮರ್ಥ್ಯಕ್ಕಾಗಿ  ಡಾ. ಪುರುಷೋತ್ತಮ್ ಅವರನ್ನು ನೇಮಕ ಮಾಡಲಾಗಿದೆ. 

ಏನಿದು ಏಷ್ಯಾ-ಅರಬ್‌ ವಾಣಿಜ್ಯ ಮಂಡಳಿ ?

ಏಷ್ಯಾ -ಅರಬ್‌ ವಾಣಿಜ್ಯ ಮಂಡಳಿಯು ಏಷ್ಯಾ ಮತ್ತು ಅರಬ್‌ ದೇಶಗಳ ನಡುವೆ ಆರ್ಥಿಕ ಸಹಕಾರ ಬಲಪಡಿಸುವ ಉದ್ದೇಶದಿಂದ ಸ್ಥಾಪಿಸಿರುವ ವೇದಿಕೆಯಾಗಿದೆ. ಇದು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವ್ಯಾಪಾರ ಪಾಲುದಾರಿಕೆ ಉತ್ತೇಜಿಸಲಿದೆ. ಹೂಡಿಕೆ, ಸಾಂಸ್ಕೃತಿಕ ವಿನಿಮಯವನ್ನು ಸುಗಮಗೊಳಿಸಲಿದೆ.

ಸರ್ಕಾರಗಳು, ವ್ಯಾಪಾರಿಗಳು ಹಾಗೂ ಹೂಡಿಕೆದಾರರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಈ ಮಂಡಳಿಯು 32 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರತಿನಿಧಿಗಳನ್ನು ಒಳಗೊಂಡಿದೆ. 

ವಾಣಿಜ್ಯ ಮಂಡಳಿ ಉದ್ದೇಶಗಳು

ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಸಮುದಾಯ ಬೆಂಬಲಿಸುವ ಮೂಲಕ ಆರ್ಥಿಕ ಸೇತುವೆ ನಿರ್ಮಿಸುವುದು ಮತ್ತು ಸಾಂಸ್ಕೃತಿಕ ಸಂಬಂಧ ಉತ್ತೇಜಿಸುವುದು ವೇದಿಕೆಯ ಪ್ರಮುಖ ಉದ್ದೇಶವಾಗಿದೆ. ಅಂತರರಾಷ್ಟ್ರೀಯ ಹೂಡಿಕೆದಾರರಿಗೆ ಅಗತ್ಯವಿರುವ ಸಂಪನ್ಮೂಲ ಒದಗಿಸುವುದು ಮತ್ತು ಹೂಡಿಕೆಯ ಹರಿವನ್ನು ಸುಗಮಗೊಳಿಸುವುದನ್ನು ಮಂಡಳಿಯು ನಿರ್ವಹಿಸಲಿದೆ.  

ವೇದಿಕೆಯಡಿ ಬರುವ ಏಷ್ಯಾ-ಅರಬ್‌ ದೇಶಗಳು

ಏಷ್ಯಾ ಅರಬ್‌ ವಾಣಿಜ್ಯ ಮಂಡಳಿಯ ವ್ಯಾಪ್ತಿಯಲ್ಲಿ ಏಷ್ಯನ್ ದೇಶಗಳಾದ ಭಾರತ, ಮಲೇಷ್ಯಾ, ಕಜಕಿಸ್ತಾನ್, ಒಮಾನ್, ಸೌದಿ ಅರೇಬಿಯಾ. ಅರಬ್ ದೇಶಗಳಾದ, ಕುವೈತ್, ಸೌದಿ ಅರೇಬಿಯಾ, ಯುಎಇ, ಒಮಾನ್ ಹಾಗೂ ಇತರ ಅಂತಾರಾಷ್ಟ್ರೀಯ ದೇಶಗಳಾದ ಫ್ರಾನ್ಸ್, ಇಟಲಿ, ಪೋಲೆಂಡ್, ರಷ್ಯಾ ಹಾಗೂ ಬ್ರಿಟನ್‌ ರಾಷ್ಟ್ರಗಳು ಸೇರಿವೆ.

ಭಾರತದಿಂದ ರಫ್ತಾಗುವ ಪ್ರಮುಖ ಉತ್ಪನ್ನಗಳು

ಭಾರತದ ಟಾಪ್ 10 ರಫ್ತುಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು, ಆಭರಣಗಳು ಮತ್ತು ರತ್ನಗಳು, ಜವಳಿ ಮತ್ತು ಬಟ್ಟೆಗಳು, ಔಷಧಗಳು, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ತಂತ್ರಜ್ಞಾನ ಮತ್ತು ಉಪಕರಣಗಳು, ಕಬ್ಬಿಣ ಮತ್ತು ಉಕ್ಕು, ವಾಹನಗಳು, ಡೈರಿ ಉತ್ಪನ್ನಗಳು, ಚಹಾ ಸೇರಿದಂತೆ ವಿವಿಧ ಉತ್ಪನ್ನಗಳು ಸೇರಿವೆ.

ಪ್ರಮುಖ ರಫ್ತು ದೇಶಗಳು

ಭಾರತದ ಪ್ರಮುಖ ರಫ್ತು ದೇಶಗಳೆಂದರೆ ಅಮೆರಿಕ, ಯುಎಇ, ನೆದರ್‌ಲ್ಯಾಂಡ್ಸ್, ಚೀನಾ, ಬಾಂಗ್ಲಾದೇಶ, ಸಿಂಗಾಪುರ, ಬ್ರೆಜಿಲ್, ಯುಕೆ, ಸೌದಿ ಅರೇಬಿಯಾ, ಇಂಡೋನೇಷ್ಯಾ, ಜರ್ಮನಿ ಮತ್ತು ಹಾಂಗ್ ಕಾಂಗ್ ಸೇರಿದಂತೆ ವಿವಿಧ ದೇಶಗಳ ಸೇರಿವೆ.

ಬೆಂಗಳೂರಿನಲ್ಲೂ ಇದೆ ಕಚೇರಿ

ಏಷ್ಯಾ-ಅರಬ್‌ ದೇಶಗಳ ಒಂದು ಕಚೇರಿಯು ಬೆಂಗಳೂರಿನ ಆರ್‌.ಟಿ. ನಗರದಲ್ಲಿದ್ದು, ಭಾರತ ಮತ್ತು ಅರಬ್‌ ದೇಶಗಳ ನಡುವಿನ ವಾಣಿಜ್ಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ.

Tags:    

Similar News