ಹೆಬ್ಬಾಳದ ಎಸ್ಟೀಮ್‌ ಮಾಲ್‌ನಿಂದ ಜಿಕೆವಿಕೆವರೆಗೆ ಮತ್ತೊಂದು ಟನಲ್‌ ರಸ್ತೆ: ಡಿ.ಕೆ.ಶಿವಕುಮಾರ್‌

ಹೆಬ್ಬಾಳದ ನಾಗಾವರ ಕಡೆ ಹಾಗೂ ಎಸ್ಟೀಮ್ ಮಾಲ್‌ನಿಂದ ವಿಶ್ವವಿದ್ಯಾಲಯವರೆಗೆ ಹೊಸ ಟನಲ್ ರಸ್ತೆ ಮಾಡಲಾಗುವುದು. ಈ ಬಗ್ಗೆ ಸದ್ಯದಲ್ಲೇ ಸಂಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.;

Update: 2025-08-06 06:50 GMT

ಹೆಬ್ಬಾಳದ ಎಸ್ಟೀಮ್‌ ಮಾಲ್‌ನಿಂದ ಜಿಕೆವಿಕೆ ವಿಶ್ವವಿದ್ಯಾಲಯದವರೆಗಿನ 1.5 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಹೆಬ್ಬಾಳದ ನಾಗಾವರ ಕಡೆ ಹಾಗೂ ಎಸ್ಟೀಮ್ ಮಾಲ್‌ನಿಂದ ವಿಶ್ವವಿದ್ಯಾಲಯವರೆಗೆ ಹೊಸ ಟನಲ್ ರಸ್ತೆ ಮಾಡಲಾಗುವುದು. ಈ ಬಗ್ಗೆ ಸದ್ಯದಲ್ಲೇ ಸಂಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ವೇಳೆ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದ್ದಾರೆ. ಎಸ್ಟೀಮ್‌ ಮಾಲ್‌ನಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸಂಪರ್ಕಿಸುವ ಮುಖ್ಯ ಟನಲ್ ರಸ್ತೆ ಪ್ರತ್ಯೇಕವಾದದು. ಎಸ್ಟೀಮ್‌ ಮಾಲ್‌ನಿಂದ ಜಿಕೆವಿಕೆವರೆಗೆ 1.5 ಕಿಮೀ ಉದ್ದದ ಟನಲ್ ರಸ್ತೆ ಹೊಸ ಯೋಜನೆ.  ಇದನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ. 

ಪ್ರಯಾಣಿಕರ ಸಂಖ್ಯೆ ಹಾಗೂ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಹೊಸ ಟನಲ್‌ ರಸ್ತೆಗೆ ನಿರ್ಧರಿಸಲಾಗಿದೆ. ಆ.10 ರಂದು ಪ್ರಧಾನಿ ಮೋದಿ ಅವರು ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಕಾರಣಾಂತರಗಳಿಂದ ನಿಗದಿಯಷ್ಟು ಮೆಟ್ರೋ ರೈಲುಗಳು ಬಂದಿಲ್ಲ. ಚೀನಾದಿಂದ ಒಂದಷ್ಟು ರೈಲುಗಳನ್ನು ತೆಗೆದುಕೊಂಡಿದ್ದರು. ಆದರೆ, ಅವುಗಳಲ್ಲಿ ದೋಷಗಳಿದ್ದವು. ಈಗ ಅರುಣಾಚಲ ಪ್ರದೇಶದ ಇಟಾನಗರ ಸೇರಿದಂತೆ ಇತರೆಡೆಯಿಂದ ರೈಲುಗಳು ಬರಬೇಕು. ಅಲ್ಲಿಂದ‌‌ ಬಂದ ನಂತರ ರೈಲು ಕಾರ್ಯಾಚರಣೆ ಅವಧಿ ಹೆಚ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಳದಿ ಮಾರ್ಗ ಪೂರ್ಣಗೊಳಿಸಲು ಕಾರಣಕರ್ತರಾದ ಎಲ್ಲಾ ಅಧಿಕಾರಿಗಳು, ಗುತ್ತಿಗೆದಾರರು, ಕಾರ್ಮಿಕರನ್ನು ಸರ್ಕಾರದ ವತಿಯಿಂದ ಅಭಿನಂದಿಸುತ್ತೇವೆ. ಬಿಎಂಆರ್‌ಸಿಎಲ್‌ನ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ವರ್ ರಾವ್ ಅವರು ಹಾಗೂ ಅನೇಕ ಸಿಬ್ಬಂದಿ ಇದಕ್ಕಾಗಿ ದುಡಿದಿದ್ದಾರೆ ಹೇಳಿದ್ದಾರೆ. 

Tags:    

Similar News