ಅಂಕೋಲಾ ಶಿರೂರು ಗುಡ್ಡ ಕುಸಿತ: 8 ನೇ ಮೃತದೇಹ ಪತ್ತೆ
ತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ಮೃತ ದೇಹ ಪತ್ತೆಯಾಗಿದ್ದು, ಇದರಿಂದ ಒಟ್ಟು ಸಾವಿನ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ಮೃತ ದೇಹ ಪತ್ತೆಯಾಗಿದ್ದು, ಇದರಿಂದ ಒಟ್ಟು ಸಾವಿನ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ
ಮಂಗಳವಾರ ಬೆಳಗ್ಗೆ ಗಂಗಾವಳಿ ನದಿ ಸಂಗಮದ ಮಂಜುಗುಣಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಈಗಾಗಲೇ ಏಳು ಮೃತದೇಹ ಪತ್ತೆಯಾಗಿತ್ತು. ಈ ಮೃತ ದೇಹದ ಕೈಯಲ್ಲಿ ಬಳೆ ಮತ್ತು ಸೊಂಟದ ಮೇಲಿನ ಬಟ್ಟೆಯ ಮೇಲೆ ಪತ್ತೆ ಮಾಡಲಾಗಿದೆ. ಗಂಗಾವಳಿ ನದಿ ತೀರದ ಉಳುವರೆ ಗ್ರಾಮದ ಸಣ್ಣಿ ಗೌಡ ಎನ್ನುವ ಮಹಿಳೆ ನಾಪತ್ತೆಯಾಗಿದ್ದರು. ಮೃತದೇಹ ಆಕೆಯದ್ದೇ? ಎಂದು ಅವಳ ಕುಟುಂಬದವರು ಪತ್ತೆ ಮಾಡಬೇಕಿದೆ. ಉಳಿದವರ ಮೃತದೇಹ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನಲ್ಲಿರುವ ಶಿರೂರಿನಲ್ಲಿ ಏಳು ದಿನಗಳ ಹಿಂದೆ ಗುಡ್ಡಕುಸಿದ ಘಟನೆಯಲ್ಲಿ 10 ಮಂದಿ ನಾಪತ್ತೆಯಾಗಿದ್ದು ಇದೀಗ ಎಂಟು ಜನರ ಶವಗಳು ಪತ್ತೆಯಾಗಿವೆ. ಆದರೆ, ಕೇರಳ ಮೂಲದ ಬೆಂಜ್ ಲಾರಿ ಚಾಲಕ ಅರ್ಜುನ್ ಸಹಿತ ನಾಪತ್ತೆಯಾದ ಪತ್ತೆ ಕಾರ್ಯಕ್ಕೆ ಎನ್ ಡಿ ಆರ್ ಎಫ್ ನ 29 ಸದಸ್ಯರು ಮತ್ತು ಎಸ್ ಡಿ ಆರ್ ಎಫ್ ನ 34 ಸದಸ್ಯರು ಶೋಧ ಕಾರ್ಯ ಮುಂದುವರಿಸಿದ್ದಾರೆ.