ನಮ್ಮ ಮೆಟ್ರೋ ಹಳಿ ಮೇಲೆ ಜಿಗಿದ ಯುವಕ! ರೈಲಿನ ಕೆಳಗೆ ಸಿಲುಕಿ ಪರದಾಟ

Update: 2024-09-17 10:47 GMT
ನಮ್ಮ ಮೆಟ್ರೋ
Click the Play button to listen to article

ನಮ್ಮ ಮೆಟ್ರೋ ಜ್ಞಾನ ಭಾರತಿ ನಿಲ್ದಾಣದಲ್ಲಿ ಯುವಕನೊಬ್ಬ ಮೆಟ್ರೋ ಹಳಿಗೆ ಜಿಗಿದಿದ್ದು, ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿಗಳು ಆತನ ರಕ್ಷಣೆ ಮಾಡಿದ್ದಾರೆ.

ನಿಲ್ದಾಣದಲ್ಲಿ ನಿಂತಿದ್ದ ಯುವಕ ಏಕಾಏಕಿ ರೈಲಿನ ಟ್ರ್ಯಾಕ್‌ಗೆ ಜಿಗಿದಿದ್ದಾನೆ. ಈ ಸಂದರ್ಭದಲ್ಲಿ ರೈಲು ಆಗಮಿಸಿದ್ದು, ಟ್ಯಾಕ್‌ನ ಕೆಳ ಭಾಗದಲ್ಲಿ ಮಲಗಿದ್ದಾನೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ತುರ್ತು ನಿರ್ವಹಣಾ ಗುಂಡಿಯನ್ನು ಒತ್ತಿ ವಿದ್ಯುತ್‌ ಸರಬರಾಜನ್ನು ಸ್ಥಗಿತ ಮಾಡಿದ್ದಾರೆ. ರೈಲಿನ ಕೆಳಗೆ ಸಿಲುಕಿದ ಯುವಕ ಹೊರ ಬರಲಾರದೇ ಪರದಾಟ ನಡೆಸಿದ್ದಾನೆ. ಕೊನೆಗೆ ಸಿಬ್ಬಂದಿಗಳು ಆತನನ್ನು ಟ್ರ್ಯಾಕ್‌ನಿಂದ ಮೇಲಕ್ಕೆ ಎತ್ತಿದ್ದಾರೆ.

ಈ ಬಗ್ಗೆ ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದ್ದು, "ಮಂಗಳವಾರ ಮಧ್ಯಾಹ್ನ 2.13ಕ್ಕೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ರೈಲು ಸಮೀಪಿಸುತ್ತಿರುವಾಗ ಸುಮಾರು 30 ವರ್ಷ ವಯಸ್ಸಿನ ಬಿಹಾರ ಮೂಲದ ಸಿದ್ದಾರ್ಥ್ ಎಂಬ ವ್ಯಕ್ತಿ ಟ್ರ್ಯಾಕ್ ಮೇಲೆ ಹಾರಿದ್ದಾನೆ. ಘಟನೆಯ ನಂತರ ತಕ್ಷಣವೇ ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ ಇಟಿಎಸ್ ಅನ್ನು ಸ್ಟೇಷನ್ ಕಂಟ್ರೋಲರ್ ಮತ್ತು ತಂಡವು ಬಳಸಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿ ವ್ಯಕ್ತಿಯನ್ನು ರಕ್ಷಿಸಲಾಗಿದೆ " ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಟ್ರ್ಯಾಕ್‌ ಮೇಲೆ ಜಿಗಿದವನಿಗೆ ಯಾವುದೇ ಗಾಯಗಳು ವರದಿಯಾಗಿಲ್ಲ. ಮಧ್ಯಾಹ್ನ 2.13 ರಿಂದ 2.30ರವರೆಗೆ ಅಂದರೆ 17 ನಿಮಿಷ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಈ ವೇಳೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬದಲು ಮೈಸೂರು ರಸ್ತೆ ಮೆಟ್ರೋ ನಿಲ್ದಾಣದವರೆಗೆ 2 ರೈಲುಗಳು ಶಾರ್ಟ್ ಲೂಪ್‌ನಲ್ಲಿ ಕಾರ್ಯನಿರ್ವಹಿಸಿದವು. ಸಂಪೂರ್ಣ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳು 14.31 ಗಂಟೆಗೆ ಪುನರಾರಂಭಿಸಲಾಯಿತು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Similar News