ಶಿವಮೊಗ್ಗದಲ್ಲಿ ಸಾಕು ಬೆಕ್ಕು ಕಚ್ಚಿ ರೇಬಿಸ್‌ ಕಾಯಿಲೆ: ಮಹಿಳೆ ಸಾವು

ಮನೆಯಲ್ಲಿ ಸಾಕಿದ ಬೆಕ್ಕು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ಸಂಭವಿಸಿದೆ. 50 ವರ್ಷ ವಯಸ್ಸಿನ ಗಂಗೀಬಾಯಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.;

Update: 2024-08-09 12:14 GMT
ಶಿವಮೊಗ್ಗದಲ್ಲಿ ಸಾಕು ಬೆಕ್ಕು ಕಚ್ಚಿ ರೇಬಿಸ್‌ ಕಾಯಿಲೆ:  ಮಹಿಳೆ ಸಾವು
ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ್ದಾರೆ.
Click the Play button to listen to article

ಮನೆಯಲ್ಲಿ ಸಾಕಿದ ಬೆಕ್ಕು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ಸಂಭವಿಸಿದೆ. 50 ವರ್ಷ ವಯಸ್ಸಿನ ಗಂಗೀಬಾಯಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.

ಎರಡು ತಿಂಗಳ ಹಿಂದೆ ಬೆಕ್ಕೊಂದು ಮಹಿಳೆಗೆ ಕಚ್ಚಿತ್ತು. ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್ ಕಾಯಿಲೆಗೆ ಮಹಿಳೆ ತುತ್ತಾಗಿದ್ದಳು. ಮೊದಲು ತರಲಘಟ್ಟದ ಕ್ಯಾಂಪ್​ನಲ್ಲಿರುವ ಯುವನೋರ್ವನ ಮೇಲೆ ದಾಳಿ ಮಾಡಿತ್ತು. ಬಳಿಕ ಮಹಿಳೆಯ ಮೇಲೂ ದಾಳಿ ಮಾಡಿದೆ. ಮಹಿಳೆ ಕಾಲಿಗೆ ಕಚ್ಚಿದ ಕಾರಣ ಐದು ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಒಂದು ಇಂಜೆಕ್ಷನ್ ಪಡೆದು  ಚೇತರಿಕೆ ಕಂಡ ಹುಮ್ಮಸ್ಸಿನಲ್ಲಿ ಮಹಿಳೆ ಇಂಜೆಕ್ಷನ್​​  ತೆಗೆದುಕೊಳ್ಳುವುದನ್ನು ನಿರ್ಲಕ್ಷಿಸಿದ್ದಳು.

ಹುಷಾರಾದ ಬಳಿಕ ಮಹಿಳೆ ನಾಟಿ ಮಾಡಲು ಹೊರಟಿದ್ದಾರೆ. ನೀರಿಗೆ ಇಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ರೇಬಿಸ್​ನಿಂದಾಗಿ ಅನಾರೋಗ್ಯ ಕಾಡಿದ ಪರಿಣಾಮ ಗಂಗೀಬಾಯಿ ಸಾವನ್ನಪ್ಪಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿ ಬೆಕ್ಕು ಕಚ್ಚಿದರೂ ರೇಬಿಸ್ ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Tags:    

Similar News