KIAL | ಕೆಟ್ಟುನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ : ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ
ಎಂಜಿನ್ ರಿಪೇರಿಯಿಂದಾಗಿ ಕೆಟ್ಟು ನಿಂತಿದ್ದ ಇಂಡಿಗೋ ವಿಮಾನಕ್ಕೆ ಬೇರೊಂದು ವಿಮಾನಕ್ಕೆ ಸಿಬ್ಬಂದಿಯನ್ನು ಬಿಟ್ಟು ಬರುತ್ತಿದ್ದ ಟಿಟಿ ವಾಹನ ಡಿಕ್ಕಿ ಹೊಡೆದ ಘಟನೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.;
ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಟ್ಟು ನಿಂತಿದ್ದ ವಿಮಾನಕ್ಕೆ ಟಿ.ಟಿ ವಾಹನ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ಕೂಡಲೆಳೆ ಅಂತರದಲ್ಲಿ ಭಾರೀ ದುರಂತ ತಪ್ಪಿದೆ.
ಎಂಜಿನ್ ರಿಪೇರಿಯಿಂದಾಗಿ ಇಂಡಿಗೋ ವಿಮಾನ ಕೆಟ್ಟು ನಿಂತಿತ್ತು. ಬೇರೊಂದು ವಿಮಾನಕ್ಕೆ ಸಿಬ್ಬಂದಿಯನ್ನು ಬಿಟ್ಟು ಬರುತ್ತಿದ್ದ ಟಿಟಿ ವಾಹನ ಕೆಟ್ಟು ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ.
ದಿಕ್ಕಿಯ ರಭಸಕ್ಕೆ ಟಿಟಿ ವಾಹನದ ಟಾಪ್ ನಜ್ಜುಗೂಜ್ಜಾಗಿದೆ. ಅದೃಷ್ಟವಶತ್ ಟಿಟಿ ವಾಹನದ ಚಾಲಕ ಪ್ರಾಣಪಯದಿಂದ ಪಾರಾಗಿದ್ದಾರೆ.
ಚಾಲಕನ ಅಜಾಗರೂಕತೆಯಿಂದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ಇಲಾಖೆ ತನಿಖೆ ಆರಂಭಿಸಿದೆ.
ಇಂಡಿಗೋ A320 ವಿಮಾನವನ್ನು 2022 ರಿಂದಲೂ ಎಂಜಿನ್ ಸಮಸ್ಯೆಯಿಂದ ಪಾರ್ಕಿಂಗ್ ನಲ್ಲಿ ನಿಲುಗಡೆ ಆಗಿತ್ತು. ಗ್ರೌಂಡ್ ಹ್ಯಾಂಡ್ಲಿಂಗ್ ಕಂಪನಿಯಾದ ಗ್ಲೋಬ್ ಗ್ರೌಂಡ್ ಇಂಡಿಯಾ ನಿಯೋಜಿಸಿದ್ದ ಟೆಂಪೋ ಟ್ರಾವೆಲರ್‌ನ ಚಾಲಕ ನಿದ್ರೆಯ ಮಂಪರಿನಲ್ಲಿ ವಿಮಾನಕ್ಕೆ ಡಿಕ್ಕಿ ಹೊಡೆಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆಕಾಶ್ ಏರ್ ಸಿಬ್ಬಂದಿಯನ್ನು ಕಚೇರಿ ಮತ್ತು ವಿಮಾನ ಬೇಗಳ ನಡುವೆ ಸಾಗಿಸಲು ವಾಹನ ಬಳಸಲಾಗುತ್ತಿತ್ತು.
ಮತ್ತೊಂದು ಪ್ರಕರಣದಲ್ಲಿ ಕಾರೊಂದು ರನ್ ವೇ ನಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆದರೆ, ಯಾವುದೇ ಸಮಸ್ಯೆಯಾಗಿಲ್ಲ.