'ಸಿಂದೂರ'ದ ಕಡುಗೆಂಪಿನಲ್ಲಿ ಪ್ರತೀಕಾರ ತೀರಿಸಿದ ಭಾರತ: ಮಹಿಳೆಯರ ಶಾಪಕ್ಕೆ ಬಲಿಯಾದರೇ ಪಾಕ್ ಉಗ್ರರು?

ಪಹಲ್ಗಾಮ್ ದಾಳಿಯಲ್ಲಿ ಉಗ್ರರ ಗುಂಡೇಟಿಗೆ ಹಲವರು ಬಲಿಯಾಗಿದ್ದು, ಸಾಕಷ್ಟು ಮಹಿಳೆಯರು ಗಂಡನನ್ನು ಕಳೆದುಕೊಂಡಿದ್ದರು. ಈ ಮೂಲಕ ಅವರು ಸಿಂದೂರ ಅಳಿಸುವಂತೆ ಮಾಡಲಾಗಿತ್ತು ಅದಕ್ಕೆ ಪ್ರತಿಯಾಗಿ ಭಾರತ ಪಾಕ್​ ಮೇಲೆ ದಾಳಿ ನಡೆಸಿದೆ.;

Update: 2025-05-07 14:06 GMT

 ಹದಿನೈದು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್​ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 26 ಮಂದಿ ಮೃತಪಟ್ಟಿದ್ದರು. ಈ ದಾಳಿಯಲ್ಲಿ ಪುರುಷರೇ ಗುರಿಯಾಗಿದ್ದರು. ಹೀಗಾಗಿ ಸಾಕಷ್ಟು ಮಹಿಳೆಯರು ತಮ್ಮ ಗಂಡಂದಿರನ್ನು ಕಳೆದುಕೊಂಡಿದ್ದರು.    

ಇದಕ್ಕೆ ಪ್ರತಿಕಾರವಾಗಿ ಮೇ 6ರ  ಮಧ್ಯರಾತ್ರಿ, ಭಾರತೀಯ ವಾಯುಪಡಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದೆ. ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿದ ಈ ದಾಳಿಯಲ್ಲಿ ಒಂಬತ್ತು ಸ್ಥಳಗಳಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇಂಥದ್ದೊಂದು ಕಾರ್ಯಾಚರಣೆಗೆ ಭಾರತ ಸರ್ಕಾರ ಹೆಸರೊಂದನ್ನು ಹುಡುಕವಾಗ ಸಮಂಜಸ ಎನಿಸಿದ್ದು 'ಆಪರೇಷನ್ ಸಿಂದೂರ'. ಯಾಕೆಂದರೆ ಪಹಲ್ಗಾಮ್​ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟ ಪುರುಷರ ಪತ್ನಿಯರು ವಿಧವೆಯರಾಗಿದ್ದರು. ಅವರ ಹಣೆ ಮೇಲಿನ ಕುಂಕುಮ ಅಳಿಸಿ ಹೋಗಿತ್ತು. ಹೀಗಾಗಿ ಈ ಕಾರ್ಯಾಚರಣೆಗೆ 'ಆಪರೇಷನ್​ ಸಿಂದೂರ್​' ಎಂದು ಹೆಸರಿಡಲಾಗಿದೆ.  

ಆಪರೇಷನ್ ಸಿಂದೂರ್ ಅಂದರೆ ಏನು?

ಭಾರತೀಯ ಸಂಸ್ಕೃತಿಯಲ್ಲಿ ಸಿಂದೂರಕ್ಕೆ ಅಪಾರ ಪ್ರಾಮುಖ್ಯತೆ ಇದೆ. ಇದನ್ನು ವಿವಾಹಿತ ಮಹಿಳೆಯರಿಗೆ ಗೌರವದ ಸಂಕೇತವೆಂದು ಪರಿಗಣಿಸಲಾಗಿದೆ. ಆದರೆ ಪಹಲ್ಗಾಮ್ ದಾಳಿಯಲ್ಲಿ  ಹೊಸದಾಗಿ ಮದುವೆಯಾದ ಅನೇಕ ಜೋಡಿಗಳು ಅವರ ಕಣ್ಣೆದುರೇ ಗಂಡನನ್ನು ಕಳೆದುಕೊಂಡರು. ಈ ಮಹಿಳೆಯರ ಗೌರವಾರ್ಥವಾಗಿ ʻಆಪರೇಷನ್ ಸಿಂದೂರ್ʼ ಎಂದು ಹೆಸರಿಸಲಾಯಿತು. ಈ ಕಾರ್ಯಾಚರಣೆಯು ಭಯೋತ್ಪಾದಕರಿಗೆ ಪಾಠ ಕಲಿಸುವುದರ ಜೊತೆಗೆ, ಈ ಕುಟುಂಬಗಳಿಗೆ ನ್ಯಾಯ ಒದಗಿಸಿದೆ. 

'ಆಪರೇಷನ್ ಸಿಂದೂರ್' ಗಿಂತ ಉತ್ತಮ ಹೆಸರು ಬೇರೆ ಯಾವುದಿಲ್ಲ

ಪಹಲ್ಗಾಮ್ ದಾಳಿಯ ಉದ್ದೇಶ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯನ್ನು ಹರಡುವುದಾಗಿತ್ತು. ಭಯೋತ್ಪಾದಕರು ಮಹಿಳೆಯರ ಮುಂದೆಯೇ ಗಂಡಂದಿರ ತಲೆಗೆ ಗುಂಡು ಹಾರಿಸಿದರು. ಈ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರು ಎಂದಿಗೂ ಮರೆಯಲು ಸಾಧ್ಯವಾಗದಷ್ಟು ಆಳವಾದ ಗಾಯಗಳಿವು. ಅಂತಹ ಪರಿಸ್ಥಿತಿಯಲ್ಲಿ ಭಾರತವು ಈ ಭಯೋತ್ಪಾದಕರಿಗೆ ಪ್ರತಿಕ್ರಿಯಿಸಿದಾಗ, ಕಾರ್ಯಾಚರಣೆಗೆ ಆಪರೇಷನ್ ಸಿಂದೂರ್ ಎಂದು ಹೆಸರಿಸಲಾಯಿತು. ಈ ದಾಳಿಗೆ 'ಆಪರೇಷನ್ ಸಿಂದೂರ್' ಗಿಂತ ಉತ್ತಮ ಹೆಸರು ಇರಲು ಸಾಧ್ಯವಿಲ್ಲ. ಬೈಸರನ್ ಕಣಿವೆಯಲ್ಲಿ ವಿವಾಹಿತ ಮಹಿಳೆಯರ ಹಣೆಯಿಂದ ಒರೆಸಿದ ಕೆಂಪು ಬಣ್ಣವನ್ನು ಅಳಿಸಿಹಾಕಿದಕ್ಕೆ ಈ ಕಾರ್ಯಾಚರಣೆ ಪ್ರತೀಕಾರವಾಗಿದೆ.

ಈ ಕಾರ್ಯಾಚರಣೆಯನ್ನು ವಾಯುಪಡೆ, ಸೇನಾಪಡೆ ಹಾಗೂ ನೌಕಾ ಪಡೆಗಳ ಮೂರು ಸೇನೆಗಳ ಜಂಟಿ ಕಾರ್ಯಾಚರಣೆಯಲ್ಲಿ ನಡೆದಿದ್ದವು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡ ನಂತರ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಭಾರತೀಯ ಸೇನೆಯ ಉನ್ನತ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ, ಸಶಸ್ತ್ರ ಪಡೆಗಳ ಇಬ್ಬರು ಮಹಿಳೆಯರು ಪತ್ರಿಕಾಗೋಷ್ಠಿಗೆ ಬಂದು ʻಅಪರೇಷನ್‌ ಸಿಂದೂರʼದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ಇಬ್ಬರು ಮಹಿಳೆಯಲ್ಲಿ ಒಬ್ಬರು ವಾಯುಪಡೆಯವರು ಮತ್ತು ಇನ್ನೊಬ್ಬರು ಸೇನಾಪಡೆಯವರು. ಈ ಇಬ್ಬರು ಮಹಿಳೆಯರ ಸಾಧನೆ ಅಷ್ಟಿಲ್ಲ. 

ಕರ್ನಲ್ ಸೋಫಿಯಾ ಖುರೇಷಿ ಯಾರು?

35 ವರ್ಷದ ಕರ್ನಲ್ ಸೋಫಿಯಾ ಖುರೇಷಿ ಗುಜರಾತ್ ಮೂಲದವರಾಗಿದ್ದು, ಭಾರತೀಯ ಸೇನೆಯ ಸಿಗ್ನಲ್ ಕಾರ್ಪ್ಸ್‌ನಲ್ಲಿ ಅಧಿಕಾರಿಯಾಗಿದ್ದಾರೆ. 1999 ರಲ್ಲಿ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ನಿಯೋಜನೆಗೊಂಡ ಅವರು ʻದಂಗೆ ನಿಗ್ರಹ ಕಾರ್ಯಾಚರಣೆʼಗಳು ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸೋಫಿಯಾ ಅವರ ಮಿಲಿಟರಿಯೊಂದಿಗಿನ ಸಂಬಂಧವು ತಲೆಮಾರುಗಳಷ್ಟು ಹಳೆಯದು. ಅವರ ಅಜ್ಜ ಮತ್ತು ತಂದೆ ಇಬ್ಬರೂ ಸೈನ್ಯದಲ್ಲಿದ್ದರು. 2006ರಲ್ಲಿ, ಅವರನ್ನು ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಡಿಯಲ್ಲಿ ನಿಯೋಜಿಸಲಾಗಿತ್ತು. 

2016ರಲ್ಲಿ ನಿರ್ಮಾಣವಾದ ಇತಿಹಾಸ

2016ರಲ್ಲಿ, ಆಗ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕಗೊಂಡಿದ್ದ ಸೋಫಿಯಾ ಖುರೇಷಿ, ರಿಹರ್ಸಲ್​ ಟ್ರೂಪ್ 18ರಲ್ಲಿ ಭಾರತದ 40 ಸದಸ್ಯರ ಮಿಲಿಟರಿ ತುಕಡಿಯನ್ನು ಮುನ್ನಡೆಸಿದ್ದಾರೆ. ಯಾವುದೇ ಬಹುರಾಷ್ಟ್ರೀಯ ಮಿಲಿಟರಿ ರಿಹರ್ಸಲ್​ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಮರಾಭ್ಯಾಸ ಭಾರತದ ಅತಿದೊಡ್ಡ ಬಹುರಾಷ್ಟ್ರೀಯ ಸೇನಾ ಸಮರಾಭ್ಯಾಸ ಮಾತ್ರವಲ್ಲದೆ, 18 ದೇಶಗಳ ಸೇನೆಗಳು ಇದರಲ್ಲಿ ಭಾಗವಹಿಸಿದ್ದವು. ಆಸಿಯಾನ್ ರಾಷ್ಟ್ರಗಳಲ್ಲದೆ, ಈ ದೇಶಗಳಲ್ಲಿ ಜಪಾನ್, ಅಮೆರಿಕ, ಚೀನಾ, ರಷ್ಯಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ದೈತ್ಯ ರಾಷ್ಟ್ರಗಳು ಸೇರಿವೆ.

ವ್ಯೋಮಿಕಾ ಸಿಂಗ್ ಯಾರು?

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಭಾರತೀಯ ವಾಯುಪಡೆಯ ಅಧಿಕಾರಿ. ವ್ಯೋಮಿಕಾ ಸಿಂಗ್ ಹೆಲಿಕಾಪ್ಟರ್ ಪೈಲಟ್ ಆಗಿದ್ದಾರೆ. ಅವರ ನೇತೃತ್ವದಲ್ಲಿ ಹಲವು ಪ್ರಮುಖ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಅಕ್ಟೋಬರ್-ನವೆಂಬರ್ 2020 ರಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಅವರ ತಂಡವು ಜನರ ಜೀವ ಉಳಿಸಿತ್ತು.  

ವಿಮಾನ ಹಾರಾಟದ ಅನುಭವ

ವ್ಯೋಮಿಕಾ ಸಿಂಗ್ ಅವರನ್ನು ಡಿಸೆಂಬರ್ 18ರಂದು ಭಾರತೀಯ ವಾಯುಪಡೆಗೆ ನಿಯೋಜಿಸಲಾಯಿತು. ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಇಲ್ಲಿಯವರೆಗೆ 2,500 ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ್ದಾರೆ. ಅವರು ದೇಶದ ಅತ್ಯಂತ ಸವಾಲಿನ ಭೌಗೋಳಿಕ ಪರಿಸ್ಥಿತಿಗಳಲ್ಲಿ ಭಾರತೀಯ ವಾಯುಪಡೆಯ ಪ್ರತಿಷ್ಠಿತ ಹೆಲಿಕಾಪ್ಟರ್‌ಗಳಾದ ಚೇತಕ್ ಮತ್ತು ಚೀತಾಗಳನ್ನು ಹಾರಿಸಿದ್ದಾರೆ.

 

Tags:    

Similar News