Shivamogga Incident| ಪೊಲೀಸ್‌ ಸಿಬ್ಬಂದಿಯನ್ನೇ ಹೊತ್ತೊಯ್ದ ಕಾರು

ವಾಹನ ತಡೆದು ತಪಾಸಣೆಗೆ ಮುಂದಾದ ಪೊಲೀಸ್‌ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಕಾರು ಹೊತ್ತೊಯ್ದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ಗುರುವಾರ ನಡೆದಿದೆ;

Update: 2024-10-24 13:33 GMT
ಪೊಲೀಸ್ ಸಿಬ್ಬಂದಿಯೊಬ್ಬರನ್ನು ಕಾರಿನ ಬಾನೆಟ್ ಮೇಲೆ ಹೊತ್ತೊಯ್ದರು.

ವಾಹನ ತಡೆದು ತಪಾಸಣೆಗೆ ಮುಂದಾದ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿಯೊಬ್ಬರನ್ನು ವೇಗವಾಗಿ ಬಂದ ಕಾರು ಹೊತ್ತೊಯ್ದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ಗುರುವಾರ ನಡೆದಿದೆ.

ಶಿವಮೊಗ್ಗದ ಬಿ.ಹೆಚ್‌.ರಸ್ತೆಯ ಸಹ್ಯಾದ್ರಿ ಕಾಲೇಜು ಬಳಿ ವಾಹನ ತಪಾಸಣೆ ವೇಳೆ ಪೂರ್ವ ಸಂಚಾರ ಠಾಣೆಯ ಸಿಬ್ಬಂದಿಯೊಬ್ಬರು, ವೇಗವಾಗಿ ಬಂದ ಕಾರು ತಡೆದಿದ್ದಾರೆ. ರಸ್ತೆಯ ಪಕ್ಕಕ್ಕೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಕಾರನ್ನು ನಿಲ್ಲಿಸದೆ ಮುಂದೆ ಚಲಾಯಿಸಿದ್ದಾನೆ. ಆಗ ಪೊಲೀಸ್ ಸಿಬ್ಬಂದಿ, ಕೂಡಲೆ ಕಾರಿನ ಮುಂಭಾಗಕ್ಕೆ ನಿಲ್ಲಲು ಯತ್ನಿಸಿದ್ದಾರೆ. ಆದರೆ ಚಾಲಕ ಕಾರು ನುಗ್ಗಿಸಿದ್ದಾನೆ. ಆಗ ಸಿಬ್ಬಂದಿ ಕಾರಿನ ಮುಂಭಾಗ ಹಿಡಿದುಕೊಂಡು ಕೆಳಗೆ ಬೀಳದಂತೆ ಬಾನೆಟ್ ಮೇಲೆ ಹತ್ತಿದ್ದಾರೆ.

ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿ ಹತ್ತಿರುವುದನ್ನು ಕಂಡರೂ ಚಾಲಕ ಕಾರು ನಿಲ್ಲಿಸದೆ ಸಹ್ಯಾದ್ರಿ ಕಾಲೇಜು ಗೇಟ್‌ನಿಂದ ಮತ್ತೂರು ರಸ್ತೆವರೆಗೂ ಸುಮಾರು ಒಂದು ಕಿಮೀ ದೂರ ಸಾಗಿದ್ದಾನೆ. ಆ ಬಳಿಕ ಅಲ್ಲಿಂದ ಮುಂದೆ ಕಾರು ನಿಂತಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಪೊಲೀಸ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.

Tags:    

Similar News