Sunita Willams : ಭೂಮಿಗೆ ಹಿಂತಿರುಗಿದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಏನು ಮಾಡುತ್ತಾರೆ?
ಬಾಹ್ಯಾಕಾಶದಿಂದ ಬಂದಿರುವ ಅವರು ಭೂಮಿಯ ಪರಿಸರಕ್ಕೆ ಹೊಂದಿಕೊಳ್ಳಲು ಕೆಲವು ಪುನಶ್ಚೇತನ ಕಾರ್ಯಕ್ಕೆ ಒಳಗಾಗಲಿದ್ದಾರೆ. ಬಳಿಕ ಅವರ ಸಹಜ ಜೀವನ ಆರಂಭಿಸಿದ್ದಾರೆ.;
ನಾಸಾ ಖಗೋಳಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಸ್ಪೇಸ್ ಎಕ್ಸ್ನ ಡ್ರ್ಯಾಗನ್ ಕ್ಯಾಪ್ಸೂಲ್ ಮೂಲಕ ಭೂಮಿಗೆ ಬಂದಿಳಿದ್ದಾರೆ. ಅವರಿಬ್ಬರು ಒಂಬತ್ತು ತಿಂಗಳು ಬಾಹ್ಯಾಕಾಶದಲ್ಲಿ ಸಂಶೋಧನೆಯಲ್ಲಿ ಕಳೆದ ನಂತರ ಭೂಮಿಗೆ ಮರಳಲಿದ್ದಾರೆ. ಹಲವಾರು ಅಡಚಣೆಗಳು, ಏಕಾಂತ, ಸಂಶೋಧನೆ ಹಾಗೂ ನಿರಂತರ ಅಧ್ಯಯನ ಹಾಗೂ ದೈಹಿಕ ಸವಾಲುಗಳನ್ನು ಮೀರಿ ಬಂದಿರುವ ಅವರು ಇನ್ನೀಗ ಅತ್ಯುತ್ತಮ ಜೀವನ ಸಾಗಿಸುವ ಗುರಿಯನ್ನು ಹೊಂದಿದ್ದಾರೆ. ಅವುಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಇರುವಾಗಲೇ ವ್ಯಕ್ತಪಡಿಸಿದ್ದರು.
ವಾಸ್ತವದಲ್ಲಿ ಸುನಿತಾ ವಿಲಿಯಮ್ಸ್ ಮತ್ತು 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಸಿಲುಕಿ ಹಾಕಿಕೊಂಡಿದ್ದರು. ಅವರು ಹೋಗಿದ್ದ ಬಾಹ್ಯಾಕಾಶ ಮಿಷನ್ ಕೇವಲ 8 ದಿನಗಳಲ್ಲಿ ಮುಗಿದು ಹೋಗಬೇಕಾಗಿತ್ತು. ಆದರೆ ಬೋಯಿಂಗ್ ಸ್ಟಾರ್ಲೈನ್ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದ ಕಾರಣ ಎಲ್ಲವೂ ವಿಸ್ತರಣೆಗೊಂಡಿತು. ನೌಕೆಯಲ್ಲಿ ಪ್ರಪಲ್ಶನ್ ಸಮಸ್ಯೆ ಮತ್ತು ಹೀಲಿಯಂ ಸೋರಿಕೆ ಕಂಡು ಬಂದ ಕಾರಣ ನೌಕೆಯನ್ನು ಖಾಲಿಯಾಗಿ ಮರಳಿ ಕರೆಸಿಕೊಳ್ಳಲಾಯಿತು. ಅವರಿಬ್ಬರೂ ಅಲ್ಲೇ ಉಳಿಯುವಂತಾಯಿತು.
ಸಂಕ್ಷಿಪ್ತ ಅಧ್ಯಯನಕ್ಕೆ ಹೋಗಿದ್ದ ಅವರು ಸುದೀರ್ಘ ಸಂಶೋಧಕರಾಗಬೇಕಾಯಿತು. ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಸಂದರ್ಭದಲ್ಲಿ, ಸುನಿತಾ ವಿಲಿಯಮ್ಸ್ ಮತ್ತು ಅವರ ತಂಡ 900 ಗಂಟೆಗಳಿಗಿಂತಲೂ ಹೆಚ್ಚಿನ ಸಂಶೋಧನೆ ನಡೆಸಿ, 150ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದೆ.
ಬಾಹ್ಯಾಕಾಶದಿಂದ ಬಂದಿರುವ ಅವರು ಭೂಮಿಯ ಪರಿಸರಕ್ಕೆ ಹೊಂದಿಕೊಳ್ಳಲು ಕೆಲವು ಪುನಶ್ಚೇತನ ಕಾರ್ಯಕ್ಕೆ ಒಳಗಾಗಲಿದ್ದಾರೆ. ಬಳಿಕ ಅವರ ಸಹಜ ಜೀವನ ಆರಂಭಿಸಿದ್ದಾರೆ. ಏತನ್ಮಧ್ಯೆ. ಅವರು ಮುಂದೆ ಏನು ಮಾಡುತ್ತಾರೆ ಎಂಬ ಕೌತುಕ ಶುರುವಾಗಿದೆ.
ಸುನಿತಾ ಅವರ ಯೋಜನೆಗಳೇನು?
ಸುನಿತಾ ವಿಲಿಯಮ್ಸ್, ಭೂಮಿಗೆ ಮರಳಿದ ಬಳಿಕ ತಮ್ಮ ನಾಯಿಗಳ ಜತೆ ಸುತ್ತಾಟ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಸಮುದ್ರದಲ್ಲಿಯೂ ಸ್ನಾನ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ ಎಂಬುದಾಗಿ 'ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ. ವಿಲಿಯಮ್ಸ್ ಅವರ ಪತಿ ಮೈಕೆಲ್ ಜೆ. ವಿಲಿಯಮ್ಸ್ ನಿವೃತ್ತ ಫೆಡರಲ್ ಮಾರ್ಷಲ್ . ಅವರು ಎರಡು ಲ್ಯಾಬ್ರಡಾರ್ ನಾಯಿಗಳನ್ನು ಸಾಕುತ್ತಿದ್ದಾರೆ. ಸುನಿತಾ ಅವರ ಬಳಿಯೂ ನಾಯಿಗಳಿವೆ.,
ವಿಲಿಯಮ್ಸ್ ದಂಪತಿಗಳಿಗೆ ಮಕ್ಕಳಿಲ್ಲ. ಆದರೆ, ಅವರು ಮಕ್ಕಳಂತೆ ಸಾಕುವ ಮೂರು ಶ್ವಾನಗಳಿವೆ. 2010ರ ನವೆಂಬರ್‌ನಲ್ಲಿ ನ್ಯಾಷನಲ್ ಜಿಯೋಗ್ರಫಿ ಚಾನೆಲ್ನ 'ಡಾಗ್ ವಿಸ್ಪರ್' ಟಿವಿ ಶೋದಲ್ಲಿ ಸುನಿತಾ ತಮ್ಮ ನಾಯಿಗಳೊಂದಿಗೆ ಕಾಣಿಸಿಕೊಂಡಿದ್ದರು.
ವರ್ಷದ ಆರಂಭದಲ್ಲಿ ಬಾಹ್ಯಾಕಾಶದಿಂದಲೇ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸುನಿತಾ ವಿಲಿಯಮ್ಸ್, ತಮ್ಮ ನಾಯಿಗಳು, ಸ್ನೇಹಿತರು, ಮತ್ತು ಕುಟುಂಬದ ಸದಸ್ಯರು ನೆನಪಿಗೆ ಬರುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ನಾನು ನನ್ನ ನಾಯಿಗಳನ್ನು, ಸ್ನೇಹಿತರು , ಕುಟುಂಬದವರ ಜತೆಗೆ ಕಳೆಯುವ ಅವಕಾಶ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದರು.
ನಿತ್ಯ ಮುಂಜಾನೆ ನಾಯಿಗಳೊಂದಿಗೆ ಜಾಗಿಂಗ್ ಹೋಗುವುದು ಅವರ ಇಷ್ಟದ ಸಂಗತಿ. ಬಾಹ್ಯಾಕಾಶದಲ್ಲಿ ಅದು ಇಲ್ಲದ ಕಾರಣ ಅವರಿಗೆ ತುಂಬಾ ಕಷ್ಟವಾಗುತ್ತಿತ್ತು. ನಾಯಿಗಳ ಜತೆ ಹೊರಗೆ ಹೋಗುವುದು, ಹಕ್ಕಿಗಳ ಚಿಲಿಪಿಲಿ ಕೇಳುತ್ತಾ ದಿನವನ್ನು ಆರಂಭಿಸುವುದು ನನ್ನ ಹವ್ಯಾಸ,'' ಎಂದು ಅವರು ಹೇಳಿದ್ದರು.
ಬುಚ್ ವಿಲ್ಮೋರ್ ಏನು ಮಾಡಲಿದ್ದಾರೆ?
ಬುಚ್ ವಿಲ್ಮೋರ್, ಅವರ ಬಾಪ್ಟಿಸ್ಟ್ ಚರ್ಚಿನ ಹಿರಿಯ ಸದಸ್ಯ. ಭೂಮಿಗೆ ಮರಳಿದ ಬಳಿಕ ತಮ್ಮ ಧರ್ಮ ವಿಶ್ವಾಸಿಗಳ ಜತೆ ಸೇವೆ ಮಾಡಲು ಉತ್ಸುಕರಾಗಿದ್ದಾರೆ. ವಿಲ್ಮೋರ್ ಬಾಹ್ಯಾಕಾಶದಲ್ಲಿದ್ದರೂ ತಮ್ಮ ಧಾರ್ಮಿಕ ಸಮುದಾಯದೊಂದಿಗೆ ಸಂಪರ್ಕದಲ್ಲಿದ್ದರು. ಪ್ರಾರ್ಥನೆ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಅನಾರೋಗ್ಯ ಪೀಡಿತರಿಗೆ ಇಂಟರ್ನಟ್ ಫೋನ್ ಮೂಲಕ ಮಾತನಾಡಿಸುತ್ತಿದ್ದರು.