ಇರಾನ್ ಮೇಲಿನ ಅಮೆರಿಕದ ದಾಳಿಗಳು ಯಾವ ಲೆಕ್ಕಕ್ಕೂ ಇಲ್ಲ': ಚೀನಾ ಲೇವಡಿ
ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧವನ್ನು ತಡೆಯಲು ಶಾಂತಿ ಒಪ್ಪಂದಕ್ಕೆ ಕರೆ ನೀಡಿರುವ ಚೀನಾ. ಯುಎಸ್ ವಾಯುದಾಳಿಗಳಿಗೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.;
ಇರಾನ್ನ ಪರಮಾಣು ಘಟಕಗಳ ಮೇಲೆ ಅಮೆರಿಕಾ ನಡೆಸಿದ ಬಾಂಬ್ ದಾಳಿಗಳನ್ನು ಚೀನಾದ ಅಧಿಕೃತ ಮಾಧ್ಯಮಗಳು ಭಾನುವಾರ ತೀವ್ರವಾಗಿ ಟೀಕಿಸಿವೆ. ಇದು "ತೀವ್ರ ಅನರ್ಥದ ಕಡೆಗೆ ಮತ್ತೊಂದು ಹೆಜ್ಜೆ" ಎಂದು ಬಣ್ಣಿಸಿರುವ ಚೀನಾದ ತಜ್ಞರು, ಅಮೆರಿಕಾದ ಬಂಕರ್-ಬಸ್ಟರ್ ಬಾಂಬ್ಗಳು ಇರಾನ್ನ ಗುಡ್ಡದ ಅಡಿಯಲ್ಲಿ ಆಳವಾಗಿರುವ ಪರಮಾಣು ಸೌಲಭ್ಯಗಳನ್ನು ಸಂಪೂರ್ಣವಾಗಿ ನಾಶಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಅಮೆರಿಕಾ ಭಾನುವಾರ ಬೆಳಗ್ಗೆ ಇರಾನ್ನ ಫೋರ್ಡೋ, ಇಸ್ಫಹಾನ್ ಮತ್ತು ನತಾನ್ಜ್ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿ, ದೇಶದ ಪರಮಾಣು ಯೋಜನೆಯನ್ನು ನಾಶಪಡಿಸುವ ಪ್ರಯತ್ನ ಮಾಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಎಸ್ ಸೇನೆಯು ಮೂರು ಪರಮಾಣು ಘಟಕಗಳ ಮೇಲೆ "ಅತ್ಯಂತ ಯಶಸ್ವೀ" ದಾಳಿ ನಡೆಸಿದೆ ಎಂದು ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಇರಾನ್ನ ಪರಮಾಣು ಘಟಕಗಳ ಮೇಲಿನ ದಾಳಿಯಲ್ಲಿ ಬಿ-2 ಸ್ಟೆಲ್ತ್ ಬಾಂಬರ್ಗಳನ್ನು ಬಳಸಲಾಗಿತ್ತು.
ಚೀನಾದ ಕಳವಳ
ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧವನ್ನು ತಡೆಯಲು ಶಾಂತಿ ಒಪ್ಪಂದಕ್ಕೆ ಕರೆ ನೀಡಿರುವ ಚೀನಾ. ಯುಎಸ್ ವಾಯುದಾಳಿಗಳಿಗೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, ರಾಜ್ಯ ಸಂಸ್ಥೆಯ ಚೀನಾ ಡೈಲಿ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ, ಅಮೆರಿಕಾದ ಏಕಪಕ್ಷೀಯ ಸೇನಾ ದಾಳಿಗಳು ಇರಾನ್ನ ಪರಮಾಣು ಸೌಲಭ್ಯಗಳ ಮೇಲೆ ಗುರಿಪಡಿಸುವುದು "ಅವಿವೇಕತನದ ಪರಮಾವಧಿ" ಮತ್ತು "ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ" ಎಂದು ಬರೆಯಲಾಗಿದೆ
ಇಂತಹ ಏಕಪಕ್ಷೀಯ "ನಿಯಮ ಆಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು 'ಬಲ ಪ್ರಯೋಗ ಶ್ರೇಷ್ಠ ' ಎಂಬ ಅಪಾಯಕಾರಿ ಮಾದರಿಯನ್ನು ಸೃಷ್ಟಿಸುತ್ತದೆ" ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಈ ದಾಳಿಗಳು ಪರಿಸ್ಥಿತಿಯನ್ನು "ತೀವ್ರ ಅನರ್ಥದ ಕಡೆಗೆ ಸಾಗುತ್ತದೆ" ಎಂದು ಚೀನಾ ಡೈಲಿ ಅಭಿಪ್ರಾಯಪಟ್ಟಿದೆ.
ದಾಳಿಯ ಪರಿಣಾಮದ ಬಗ್ಗೆ ಚೀನಾ ತಜ್ಞರ ಸಂಶಯ:
ಚೀನಾದ ತಜ್ಞರು, ಯುಎಸ್ ಕಾರ್ಯಾಚರಣೆಯ ನಿಜವಾದ ಪರಿಣಾಮ ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಇರಾನ್ನ ಭೂಗರ್ಭದಲ್ಲಿರುವ ಪರಮಾಣು ಸೌಲಭ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಈ ದಾಳಿಗಳು ಸಾಕಾಗುವುದಿಲ್ಲವೇ ಎಂಬ ಸಂಶಯ ಅವರು ವ್ಯಕ್ತಪಡಿಸಿದ್ದಾರೆ.
"ಫೋರ್ಡೋ ಪರಮಾಣು ಸೌಲಭ್ಯವು ಸುಮಾರು 100 ಮೀಟರ್ ಆಳದಲ್ಲಿದ್ದು, ಒಂದು ಅಥವಾ ಎರಡು ದಾಳಿಗಳ ಮೂಲಕ, ಗಂಭೀರ ಬಾಂಬ್ಗಳನ್ನು ಬಳಸಿದರೂ ಸಹ ಅದನ್ನು ಸಂಪೂರ್ಣವಾಗಿ ನಾಶ ಮಾಡುವುದು ಅತ್ಯಂತ ಕಷ್ಟ" ಎಂದು ಚೀನಾ ಅಂತರರಾಷ್ಟ್ರೀಯ ಅಧ್ಯಯನ ಸಂಸ್ಥೆಯ ಸಹಾಯಕ ಸಂಶೋಧನಾ ಸಹೋದ್ಯೋಗಿ ಲಿ ಝಿಸಿನ್ ರಾಜ್ಯ ಸಂಸ್ಥೆಯ ಗ್ಲೋಬಲ್ ಟೈಮ್ಸ್ಗೆ ತಿಳಿಸಿದ್ದಾರೆ.