ಅಮೆರಿಕದಲ್ಲಿರುವ 119 ಅಕ್ರಮ ವಲಸಿಗರ ಮತ್ತೊಂದು ತಂಡ ನಾಳೆ ಭಾರತಕ್ಕೆ

ನೂತನ ಅಧ್ಯಕ್ಷ ಟ್ರಂಪ್ ಸರ್ಕಾರದ ಅಕ್ರಮ ವಲಸಿಗರ ಗಡಿಪಾರು ಯೋಜನೆಯಡಿ ಅಮೆರಿಕದಿಂದ ಎರಡನೇ ತಂಡ ಭಾರತಕ್ಕೆ ಫೆಬ್ರುವರಿ 15ರಂದು ಭಾರತಕ್ಕೆ ಹಿಂದಿರುಗಲಿದೆ.;

Update: 2025-02-14 14:54 GMT

ಅಮೃತಸರ್​:  ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಹಾಗೂ ನೂತನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರೊಂದಿಗೆ ಸಭೆ ನಡೆಸಿದ ಕೆಲವೇ ಕ್ಷಣಗಳಲ್ಲಿ ಅಲ್ಲಿ ಸರ್ಕಾರ ನಿರ್ಧಾರವೊಂದನ್ನು ಕೈಗೊಂಡಿದೆ. ಭಾರತದಿಂದ ಹೋಗಿ ಗಡಿಯಿಂದ ನುಸುಳಿ ಅಕ್ರಮವಾಗಿ ಅಮೆರಿಕದಲ್ಲಿ ವಾಸವಿದ್ದ 119 ಮಂದಿಯನ್ನು ಗಡಿಪಾರು ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ. ಫೆಬ್ರವರಿ 15 ರಂದು ಲ ಭಾರತೀಯರನ್ನು ಕರೆದುಕೊಂಡು ಅಮೃತಸರ ವಿಮಾನ ನಿಲ್ದಾಣದಲ್ಲಿ ರಾತ್ರಿ 10 ಗಂಟೆ ಸಮಯಕ್ಕೆ ಇಳಿಯಲಿದೆ.

ಈ ವಲಸಿಗರು ಟ್ರಂಪ್ ಸರ್ಕಾರದ ಗಡಿಪಾರು ಕ್ರಮದ ಭಾಗವಾಗಿ ಅಮೆರಿಕದಿಂದ ಹಿಂದಿರುಗುತ್ತಿರುವ ಎರಡನೇ ತಂಡ. ಕಳೆದ ತಿಂಗಳು ಅಧಿಕಾರ ಸ್ವೀಕರಿಸಿದ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ರಮ ವಲಸೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರು. ಅದರಂತೆ ನಾನಾ ದೇಶಗಳ ವಲಸಿಗರನ್ನು ಕರೆದುಕೊಂಡು ಅವರ ದೇಶಗಳಿಗೆ ಬಿಟ್ಟು ಬರುವ ಕಾರ್ಯಗಳು ನಡೆಯುತ್ತಿವೆ.

ಮೂಲಗಳ ಪ್ರಕಾರ, ಈ 119 ಅನಧಿಕೃತ ಭಾರತೀಯ ವಲಸಿಗರಲ್ಲಿ, 67 ಜನ ಪಂಜಾಬ್ ನವರಾಗಿದ್ದಾರೆ. 33 ಜನ ಹರಿಯಾಣ, 8 ಜನ ಗುಜರಾತ್, 3 ಜನ ಉತ್ತರ ಪ್ರದೇಶ, 2 ಜನ ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದ ಹಾಗೂ ತಲಾ ಒಬ್ಬರು ಹಿಮಾಚಲ ಪ್ರದೇಶ ಮತ್ತು ಜಮ್ಮು- ಕಾಶ್ಮೀರದಿಂದ ಹೋಗಿದ್ದರು.

ಮತ್ತೊಂದು ತಂಡ ಆಗಮಿಸುವ ನಿರೀಕ್ಷೆ

ಅಮೆರಿಕದಿಂದ ವಲಸಿಗರನ್ನು ತುಂಬಿಕೊಂಡಿದ್ದ ಮತ್ತೊಂದು ವಿಮಾನವು ಫೆಬ್ರವರಿ 16ರಂದು ಕೂಡಾ ಭಾರತಕ್ಕೆ ಹಿಂದಿರುಗುವ ಸಾಧ್ಯತೆ ಇದೆ.

ಇದು ಕಳೆದ ವಾರ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದ ಅಮೆರಿಕದ ಸೈನಿಕ ವಿಮಾನದಲ್ಲಿ ಬಂದ 104 ಭಾರತೀಯರ ನಂತರದ ಬೆಳವಣಿಗೆಯಾಗಿದೆ. ಅದರಲ್ಲಿ 33 ಜನ ಹರಿಯಾಣ, 33 ಜನ ಗುಜರಾತ್ ಮತ್ತು 30 ಜನ ಪಂಜಾಬ್ ನವರಿದ್ದರು.

ಅನಧಿಕೃತ ವಲಸಿಗರ ವಿರುದ್ಧ ಕಠಿಣ ಕ್ರಮ

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ, ಅಮೆರಿಕದ ಕಾನೂನು ವಿಭಾಗವು ಅನಧಿಕೃತ ವಲಸಿಗರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಪಂಜಾಬ್ ಮತ್ತು ಇತರ ರಾಜ್ಯಗಳಿಂದ ಅನೇಕರು ಅಮೆರಿಕ ಪ್ರವೇಶಿಸಲು "ಅಕ್ರಮ ಮಾರ್ಗ" ಹಿಡಿದಿದ್ದರು. ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಅನಧಿಕೃತ ಮಾರ್ಗಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ. ಈ ರೀತಿಯಾಗಿ ಅಮೆರಿಕ ಪ್ರವೇಶಿಸಿದ್ದವರನ್ನು ಈಗ ಗಡಿಪಾರು ಮಾಡಲಾಗುತ್ತಿದೆ.

US plane carrying 2nd batch of 119 deportees likely to land in Amritsar on Feb 15

ಪಂಜಾಬ್ ರಾಜ್ಯದ ಸಚಿವ ಹರ್ಪಾಲ್ ಸಿಂಗ್ ಚೀಮಾ, ವಿಮಾನವನ್ನು ಪಂಜಾಬ್​ ಅಮೃತಸರದಲ್ಲಿ ಇಳಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಂಜಾಬ್ ಗೆ ಅಪಕೀರ್ತಿ ತರುವುದಕ್ಕೆ ಈ ರೀತಿ ಮಾಡುತ್ತಿದೆ. ಅದರ ಬದಲಿಗೆ ಗುಜರಾತ್, ಹರಿಯಾಣ ಅಥವಾ ದೆಹಲಿಯಲ್ಲಿ ಈ ವಿಮಾನವನ್ನು ಇಳಿಸಲು ಏಕೆ ಸಾಧ್ಯವಾಗಿಲ್ಲ?" ಎಂದು ಪ್ರಶ್ನಿಸಿದ್ದಾರೆ.

ಪಂಜಾಬ್ ಸರ್ಕಾರವು ಗಡಿಪಾರು ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಿದೆ. ಈ ತನಿಖೆಯಡಿ ವಲಸೆ ಮೋಸಗಾರರ ವಿರುದ್ಧ ಈಗಾಗಲೇ 10 ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Tags:    

Similar News