ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಪ್ರಕ್ರಿಯೆ ಸ್ಥಗಿತ: ಸಾವಿರಾರು ಭಾರತೀಯರ ಮೇಲೂ ಪರಿಣಾಮ

ಸಿಬಿಎಸ್​​ ವರದಿ ಪ್ರಕಾರ, ಈ ವ್ಯವಸ್ಥೆ ಅಮೆರಿಕಾದ ದೇಶೀಯ ಭದ್ರತಾ ಇಲಾಖೆ (DHS) ಹಾಗೂ ವಲಸೆ ಇಲಾಖೆಯ (USCIS) ಸೂಚನೆಯಂತೆ ಜಾರಿಯಲ್ಲಿದೆ;

Update: 2025-03-29 11:07 GMT

ಅಮೆರಿಕಾದ ಟ್ರಂಪ್ ಆಡಳಿತ ವಲಸೆ ನೀತಿಯಲ್ಲಿ ಮತ್ತೊಂದು ದೊಡ್ಡ ಬದಲಾವಣೆ ಮಾಡಿದ್ದು, ನಿರಾಶ್ರಿತರು ಮತ್ತು ಆಶ್ರಯದ ಸ್ಥಾನಮಾನ ಪಡೆದವರ ಗ್ರೀನ್ ಕಾರ್ಡ್ ಅರ್ಜಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ನಿರ್ಧಾರವು ಸಾವಿರಾರು ಭಾರತೀಯ ಅರ್ಜಿದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಸಿಬಿಎಸ್​​ ವರದಿ ಪ್ರಕಾರ, ಈ ವ್ಯವಸ್ಥೆ ಅಮೆರಿಕಾದ ದೇಶೀಯ ಭದ್ರತಾ ಇಲಾಖೆ (DHS) ಹಾಗೂ ವಲಸೆ ಇಲಾಖೆಯ (USCIS) ಸೂಚನೆಯಂತೆ ಜಾರಿಯಲ್ಲಿದೆ. ತಾತ್ಕಾಲಿಕ ವ್ಯವಸ್ಥೆಯು ಅಮೆರಿಕದ ಭದ್ರತೆ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2023ರಲ್ಲಿ 51,000 ಭಾರತೀಯರು ಅಮೆರಿಕದಲ್ಲಿ ಆಶ್ರಯಕ್ಕಾಗಿ ಅರ್ಜಿ ಹಾಕಿದ್ದು, ಇದು 2018ರಲ್ಲಿ 9,000ಕ್ಕಿಂತ 466% ಹೆಚ್ಚಾಗಿದೆ. ಜಾನ್ಸ್‌ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಅಮೆರಿಕಾದ ವಲಸೆ ವ್ಯವಸ್ಥೆ ಆಶ್ರಯಕ್ಕೆ ಅವಕಾಶ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರಿಂದ ಅಸೈಲಂ ಅರ್ಜಿಗಳ ಪ್ರಮಾಣ ಗಣನೀಯವಾಗಿ ಏರಿದೆ.

ಉಚಿತ ತಪಾಸಣೆ, ಆರೋಗ್ಯ ಪರಿಶೀಲನೆ, ಹಾಗೂ ಸಂದರ್ಶನಗಳಿಂದಾಗಿ “ಆಶ್ರಯ” ಸ್ಥಾನಮಾನ ಪಡೆದುಕೊಂಡಿದ್ದಾರೆ. ಒಂದು ವರ್ಷ ನಂತರ ಅವರು ಗ್ರೀನ್ ಕಾರ್ಡ್‌ಗಾಗಿ ಅರ್ಜಿ ಹಾಕುವ ಅರ್ಹತೆ ಪಡೆಯುತ್ತಾರೆ. ಆದರೆ ಇದೀಗ ಈ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಅವರಿಗೆ ಸಮಸ್ಯೆ ಆಗಲಿದೆ.

ಟ್ರಂಪ್‌ ಆದೇಶಗಳ ಪರಿಣಾಮ

ಈ ಪ್ರಕ್ರಿಯೆ ಟ್ರಂಪ್ ಅಧ್ಯಕ್ಷರಾದ ಬಳಿಕ ಜಾರಿಗೊಳಿಸಿದ ಎರಡು ಎಕ್ಸಿಕ್ಯೂಟಿವ್ ಆದೇಶಗಳ ಆಧಾರಿತವಾಗಿದೆ. ಒಂದು ಆದೇಶವು ಶರಣಾರ್ಥಿಗಳ ತಪಾಸಣಾ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸುತ್ತಿದ್ದು, ವಲಸೆದಾರರ ಸೋಶಿಯಲ್​ ಮೀಡಿಯಾ ಅಕೌಂಟ್​ಗಳ ತಪಾಸಣೆಯನ್ನೂ ಒಳಗೊಂಡಿದೆ.

ಇನ್ನೊಂದು ಆದೇಶದಲ್ಲಿ ಮೆಕ್ಸಿಕನ್ ಗ್ಯಾಂಗ್‌ಗಳು ಮತ್ತು ಕಾರ್ಟೆಲ್‌ಗಳನ್ನು ಅಂತರರಾಷ್ಟ್ರೀಯ ಉಗ್ರ ಸಂಘಟನೆಗಳೆಂದು ಘೋಷಣೆ ಮಾಡಲಾಗಿದ್ದು, ಗೃಹ ಸಚಿವಾಲಯದ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. .

Tags:    

Similar News