ನೈಟ್‌ಕ್ಲಬ್ ಬೆಂಕಿ ಅನಾಹುತ; ಕನಿಷ್ಠ 50 ಮಂದಿ ಸಾವಿನ ಶಂಕೆ
ಭಾನುವಾರ ಮಧ್ಯರಾತ್ರಿ ಪ್ರಾರಂಭವಾದ ಈ ಸಂಗೀತ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಪ್ರೇಕ್ಷಕರು ಹಾಜರಿದ್ದರು. ಬೆಳಗಿನ ಜಾವ 3 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು.;
ಉತ್ತರ ಮೆಸಿಡೋನಿಯಾದ ಸ್ಕೋಪ್ಜೆ ನಗರದಿಂದ ಪೂರ್ವಕ್ಕೆ 100 ಕಿಲೋಮೀಟರ್ ದೂರದಲ್ಲಿರುವ ಕೊಕಾನಿ ಪಟ್ಟಣದಲ್ಲಿ ನಡೆದ ನೈಟ್‌ಕ್ಲಬ್ ಶನಿವಾರ ರಾತ್ರಿ ಭೀಕರ ಬೆಂಕಿ ಅವಘಡ ಉಂಟಾಗಿದೆ. ಘಟನೆಯಲ್ಲಿ ಕನಿಷ್ಠ 50 ಜನರು ಮೃತಪಟ್ಟಿದ್ದಾರೆ. "ಪಲ್ಸ್" ಎಂಬ ನೈಟ್‌ಕ್ಲಬ್‌ನಲ್ಲಿ ದೇಶದ ಪ್ರಸಿದ್ಧ ಹಿಪ್-ಹಾಪ್ ಜೋಡಿ ಡಿಎನ್‌ಕೆ ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಮಯದಲ್ಲಿ ಅನಾಹುತ ಸಂಭವಿಸಿದೆ. ಈ ಸಂಗೀತ ರಾತ್ರಿಗೆ 1,500 ಜನರು ಮಂದಿ ಭಾಗವಹಿಸಿದ್ದರು.
ಭಾನುವಾರ ಮಧ್ಯರಾತ್ರಿ ಪ್ರಾರಂಭವಾದ ಈ ಸಂಗೀತ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಪ್ರೇಕ್ಷಕರು ಹಾಜರಿದ್ದರು. ಬೆಳಗಿನ ಜಾವ 3 ಗಂಟೆಗೆ ಬೆಂಕಿ ಕಾಣಿಸಿಕೊಂಡಿತು. ಅಲ್ಲಿನ ರಕ್ಷಣಾ ಮೂಲಗಳು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿವೆ. ಗಾಯಗೊಂಡವರನ್ನು ಕೊಕಾನಿ ಮತ್ತು ಸ್ಟಿಪ್‌ನಲ್ಲಿರುವ ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಈ ಬೆಂಕಿ ಅಪಘಾತಕ್ಕೆ ಪೈರೋಟೆಕ್ನಿಕ್ ಸಾಧನಗಳ ಬಳಕೆಯೇ ಕಾರಣವಿರಬಹುದು ಎಂದು ಊಹಿಸಲಾಗಿದೆ.
ಘಟನೆಯ ಭೀಕರ ದೃಶ್ಯಗಳು
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಪ್ರಕಾರ, ನೈಟ್‌ಕ್ಲಬ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಹೊಗೆ ಆಕಾಶಕ್ಕೆ ಎತ್ತರವಾಗಿ ಹರಡಿದ ದೃಶ್ಯಗಳು ಕಾಣಿಸುತ್ತವೆ.
ಅಧಿಕೃತ ತನಿಖೆ ಆರಂಭ
ಈ ದುರಂತದ ಕುರಿತು ವಿವರವಾದ ತನಿಖೆ ಕೈಗೊಳ್ಳಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಸುರಕ್ಷತಾ ನಿಯಮಗಳು, ತುರ್ತು ನಿರ್ಗಮನ ಮಾರ್ಗಗಳು, ಮತ್ತು ಅಗ್ನಿ ತಡೆಗಟ್ಟುವ ಕ್ರಮಗಳು ಇತ್ಯಾದಿಗಳನ್ನು ಪರಿಶೀಲಿಸುತ್ತಿದ್ದಾರೆ.
ಬೆಂಕಿ ಅವಘಡದಲ್ಲಿ ಗಾಯಗೊಂಡವರಿಗೆ ತಕ್ಷಣದ ಚಿಕಿತ್ಸೆ ಒದಗಿಸಲು ತುರ್ತು ಸೇವಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಮೃತರ ಗುರುತನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಯುತ್ತಿದೆ. ಅಧಿಕೃತ ಮಾಹಿತಿ ಲಭ್ಯವಾದಂತೆ ಇನ್ನಷ್ಟು ವಿವರಗಳು ಹೊರಬರುವ ನಿರೀಕ್ಷೆಯಿದೆ.