South Korea: ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಬಂಧನ
South Korea: 3,000 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಭ್ರಷ್ಟಾಚಾರ ವಿರೋಧಿ ತನಿಖಾಧಿಕಾರಿಗಳು ಬುಧವಾರ ಮುಂಜಾನೆಯ ಮೊದಲು ಅವರ ನಿವಾಸಕ್ಕೆ ಬಂದು ಬಂಧಿಸಿದ್ದಾರೆ.;
ವಾಗ್ದಂಡನೆಗೆ ಗುರಿಯಾಗಿರುವ ದಕ್ಷಿಣ ಕೊರಿಯಾದ (South Korea) ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಬಂಧನಕ್ಕೆ ಒಳಗಾದ ಕೊರಿಯಾದ ಮೊದಲ ಅಧ್ಯಕ್ಷ ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ.
3,000 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಭ್ರಷ್ಟಾಚಾರ ವಿರೋಧಿ ತನಿಖಾಧಿಕಾರಿಗಳು ಬುಧವಾರ ಮುಂಜಾನೆಯ ಮೊದಲು ಅವರ ನಿವಾಸಕ್ಕೆ ಬಂದು ಬಂಧಿಸಿದ್ದಾರೆ.
ಕಳೆದ ತಿಂಗಳು ಮಿಲಿಟರಿ ಆಡಳಿತ ಜಾರಿಗೊಳಿಸಿದ ಕಾರಣಕ್ಕೆ ಯೂನ್ ಟೀಕೆಗೆ ಒಳಗಾಗಿದ್ದರು. ಬಳಿಕ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತ ಮಾಡಿ ವಾಗ್ದಂಡನೆಗೆ ಒಳಪಡಿಸಲಾಗಿತ್ತು.ad ಅವರ ಬಂಧನಕ್ಕೆ ಹೊರಡಿಸಿದ್ದ ವಾರಂಟ್ ಅವಧಿ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ದಕ್ಷಿಣ ಕೊರಿಯಾದಲ್ಲಿ ಒಂದೇ ತಿಂಗಳಲ್ಲಿ ಇಬ್ಬರು ಮುಖಂಡರು ವಾಗ್ದಂಡನೆಗೆ ಗುರಿಯಾಗಿದ್ದು, ಈ ಘಟನೆಗಳು ದೇಶದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿವೆ.
ಈಚೆಗೆ ಬಂಧನದ ವಾರಂಟ್ ಕಾನೂನುಬಾಹಿರ ಎಂದು ಪ್ರತಿಪಾದಿಸಿದ್ದ ಯೂನ್ ಅವರ ವಕೀಲರ ವಾದವನ್ನು ಅಲ್ಲಿನ ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿತ್ತು.
‘ವಿಚಾರಣೆ ವೇಳೆ ತನಿಖಾಧಿಕಾರಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು. ಅಧ್ಯಕ್ಷರ ಭದ್ರತಾ ಪಡೆಯೊಂದಿಗೆ ಹಲವು ಭಾರಿ ವಾಗ್ವಾದ ನಡೆಸಬೇಕಾಯಿತು. ದೇಶದ ಕಾನೂನು ಪ್ರಕ್ರಿಯೆಗೂ ಸಹಕರಿಸದ ಅವರ ವರ್ತನೆಗೆ ವಿಷಾದವಿದೆ’ ಎಂದೂ ಭ್ರಷ್ಟಾಚಾರ ತನಿಖಾ ಸಂಸ್ಥೆ ಪ್ರತಿಕ್ರಿಯಿಸಿದೆ.‘ ಯೂನ್ ಅವರ ವರ್ತನೆಯನ್ನು ಖಂಡಿಸಿದೆ.
ತೀವ್ರ ಚಳಿಯ ವಾತಾವರಣದಲ್ಲೂ ಅಧ್ಯಕ್ಷರ ನಿವಾಸದ ಹೊರಗೆ, ಯೋಲ್ ಅವರ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಸುದೀರ್ಘ ಕಾಲ ಗುಂಪುಗೂಡಿದ್ದರು. ಅವರನ್ನು ರಕ್ಷಿಸಲು ಯತ್ನಿಸಿದ್ದರು. ದಕ್ಷಿಣ ಕೊರಿಯಾ, ಅಮೆರಿಕದ ಧ್ವಜಹಿಡಿದಿದ್ದ ಬೆಂಬಲಿಗರು ಅಧ್ಯಕ್ಷರ ರಕ್ಷಣೆಗೆ ಆಗ್ರಹಿಸುವ ಘೋಷಣೆಗಳನ್ನು ಕೂಗಿದ್ದರು.