ಟೆಕ್ಸಾಸ್ ಚರ್ಚ್‌ನಲ್ಲಿ ಗುಂಡಿನ ದಾಳಿ: ಮಹಿಳಾ ಶೂಟರ್ ಹತ್ಯೆ

Update: 2024-02-12 06:05 GMT

ಹೂಸ್ಟನ್‌,ಫೆ.12: ಟೆಕ್ಸಾಸ್‌ನ ಹೂಸ್ಟನ್‌ನ ಮೆಗಾಚರ್ಚ್‌ನಲ್ಲಿ ಮಹಿಳೆಯೊಬ್ಬರು ಗುಂಡಿನ ದಾಳಿ ನಡೆಸಿದ್ದು, ಮಗುವೊಂದು ಗಂಭೀರವಾಗಿ ಗಾಯಗೊಂಡಿದೆ.

ಸುಮಾರು ಐದು ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಎದೆಗೆ ಗುಂಡು ತಗುಲಿದ 57 ವರ್ಷದ ವ್ಯಕ್ತಿಯ ಸ್ಥಿತಿ ಸ್ಥಿರವಾಗಿದೆ ಎಂದು ನಗರ ಪೊಲೀಸ್ ಮುಖ್ಯಸ್ಥ ಟ್ರೇ ಫಿನ್ನರ್ ತಿಳಿಸಿದ್ದಾರೆ. ಚರ್ಚ್‌ನಲ್ಲಿದ್ದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು ಮಹಿಳೆಗೆ ಗುಂಡಿಕ್ಕಿ ಕೊಂದಿದ್ದಾರೆ. ಆಕೆಯ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. 

5 ವರ್ಷದ ಮಗುವಿನೊಂದಿಗೆ ಆಗಮಿಸಿದ್ದ 30 ರ ಹರೆಯದ ಟ್ರೆಂಚ್ ಕೋಟ್ ಧರಿಸಿದ್ದ ಮಹಿಳೆ ಶೂಟಿಂಗ್ ಪ್ರಾರಂಭಿಸಿ ದಳು. ಮಹಿಳೆ ತನ್ನ ಬಳಿ ಬಾಂಬ್ ಇರುವುದಾಗಿ ಹೇಳಿದ್ದರಿಂದ, ಜನ ಭಯಭೀತರಾಗಿದ್ದರು. ಆಕೆ ಹೊತ್ತೊಯ್ಯುತ್ತಿದ್ದ ವಸ್ತುವನ್ನು ನಿಶ್ಯಸ್ತ್ರಗೊಳಿಸಲಾಯಿತು ಎಂದು ಫಿನ್ನರ್‌ ತಿಳಿಸಿದ್ದಾರೆ.

Tags:    

Similar News