ಮುಂದಿನ ವರ್ಷ ಭಾರತಕ್ಕೆ ಬರಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್‌

ಕಳೆದ ಜುಲೈನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಗೆ ಭೇಟಿ ನೀಡಿದ್ದರು. ಈ ವೇಳೆ ಉಭಯ ನಾಯಕರು ರಾಜಧಾನಿ ಮಾಸ್ಕೊದಲ್ಲಿ ಮಾತುಕತೆ ನಡೆಸಿದ್ದರು.;

Update: 2024-11-19 12:06 GMT
Russian President Putin may make an official visit to India next year

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಮುಂದಿನ ವರ್ಷ ಭಾರತಕ್ಕೆ ಅಧಿಕೃತ ಭೇಟಿ ನೀಡಿ ನೀಡಲಿದ್ದಾರೆ ಎಂಬುದಾಗಿ ರಾಜತಾಂತ್ರಿಕ ಮೂಲಗಳು ಮಂಗಳವಾರ (ನವೆಂಬರ್‌ 19ರಂದು ) ತಿಳಿಸಿವೆ. ಇದು ಉಭಯ ದೇಶಗಳ ನಾಯಕರ ಪರಸ್ಪರ ಭೇಟಿಯ ವೇಳಾಪಟ್ಟಿಯ ಭಾಗವಾಗಿದೆ. ಈ ಪ್ರವಾಸಗಳು ಇನ್ನೂ ಅಂತಿಮಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.


vladimir putin,putin,vladimir putin india visit,putin to visit india,putin india visit,putin on india visit,vladimir putin visit india,vladimir putin to visit india,vladmir putin india visit,vladimir putins india visit,india,putin in india,putins india visit,putin india,india news,modi putin,putin india visit 2021,vladimir putin in india,news india,modi meets putin,putin praises india,putin russia india ties,putin on pm modi,modi putin visit

ಕಳೆದ ಜುಲೈನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಗೆ ಭೇಟಿ ನೀಡಿದ್ದರು. ಈ ವೇಳೆ ಉಭಯ ನಾಯಕರು ರಾಜಧಾನಿ ಮಾಸ್ಕೊದಲ್ಲಿ ಮಾತುಕತೆ ನಡೆಸಿದ್ದರು.

ಮಂಗಳವಾರ ರಷ್ಯಾದ ಅಧ್ಯಕ್ಷರ ಅಧಿಕೃತ ನಿವಾಸವಾಗಿರುವ ಕ್ರೆಮಿಲಿನ್‌ನ ವಕ್ತಾರ ಡಿಮಿಟ್ರಿ ಪೆಸ್ಕೊವ್, ಭಾರತೀಯ ಹಿರಿಯ ಸಂಪಾದಕರ ಜತೆ ಮಾತುಕತೆ ನಡೆಸುವ ವೇಳೆ ಭಾರತ ಹಾಗೂ ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಉಲ್ಲೇಖಿಸಿದ್ದರು. ಇದೇ ವೇಳೆ ಅವರು ಪುಟಿನ್‌ ಭಾರತ ಭೇಟಿಯ ಬಗ್ಗೆ ಮಾತನಾಡಿದ್ದರು. ಆದರೆ ಅವರು ಈ ವೇಳೆ ಅಧಿಕೃತ ದಿನಾಂಕ ಪ್ರಕಟಿಸಿಲ್ಲ.

ಅದೇ ರೀತಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ರಷ್ಯಾದ ಕಜಾನ್‌ಗೆ ಬ್ರಿಕ್ಸ್‌ ಸಮ್ಮೇಳನಕ್ಕಾಗಿ ಭೇಟಿ ನೀಡಿದ್ದರು.

ವಕ್ತಾರರು ಮತ್ತು ಭಾರತೀಯ ಸಂಪಾದಕರ ನಡುವಿನ ಸಂವಾದವನ್ನು ಸ್ಪುಟ್ನಿಕ್‌ ಸುದ್ದಿ ಸಂಸ್ಥೆಯು ಆಯೋಜಿಸಿತ್ತು.

ನಾವು ಭಾರತಕ್ಕೆ ಭೇಟಿ ನೀಡುವ ಕುರಿತು ಚಿಂತನೆ ನಡೆಸಿದ್ದೇವೆ. ದಿನಾಂಕವನು ನಿಗದಿ ಮಾಡಲು ಎರಡೂ ದೇಶಗಳು ಕೆಲಸ ಮಾಡುತ್ತಿವೆ ಎಂದು ಪ್ರೆಸ್ಕೋವ್‌ ಅವರು ಹೇಳಿದ್ದಾರೆ.

Tags:    

Similar News