ಪಾಕ್ ವಿರುದ್ಧ ಭಾರತದ ಪ್ರತಿದಾಳಿ, ಪ್ರಧಾನಿ ಮೋದಿಯಿಂದ ತುರ್ತು ಸಭೆ
ಪಾಕಿಸ್ತಾನದ ಸೇನೆಯು ಭಾರತದ ವಾಯುನೆಲೆಗಳ ಮೇಲೆ ವಾಯು ದಾಳಿಗಳನ್ನು ಪ್ರಾರಂಭಿಸಿತು. ಆದರೆ, ಭಾರತದ ಶಕ್ತಿಯುತ S-400 ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಡ್ರೋನ್ಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಯಿತು.;
ಭಾರತವು ಪಾಕಿಸ್ತಾನದ ವಿರುದ್ಧ ತನ್ನ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಮೇ 8 ರಂದು ಎರಡನೇ ದಿನಕ್ಕೆ ಮುಂದುವರೆಸಿದೆ. ಈ ನಡುವೆ, ಪಾಕಿಸ್ತಾನವು ಪ್ರತಿದಾಳಿ ನಡೆಸಲು ಪ್ರಯತ್ನಿಸಿತಾದರೂ, ಭಾರತೀಯ ಸೇನೆಯು ಅದನ್ನು ಸಂಪೂರ್ಣವಾಗಿ ವಿಫಲಗೊಳಿಸಿದೆ.
ಪಾಕಿಸ್ತಾನದ ಸೇನೆಯು ಭಾರತದ ವಾಯುನೆಲೆಗಳ ಮೇಲೆ ವಾಯು ದಾಳಿಗಳನ್ನು ಪ್ರಾರಂಭಿಸಿತು. ಆದರೆ, ಭಾರತದ ಶಕ್ತಿಯುತ S-400 ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಡ್ರೋನ್ಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಯಿತು.
ಈ ಬೆಳವಣಿಗೆಗಳ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ತುರ್ತು ಸಭೆಯನ್ನು ಕರೆದಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರು ಭಾರತದ ಪ್ರತಿದಾಳಿಯ ಬಗ್ಗೆ ಪ್ರಧಾನಿ ಮೋದಿಯವರಿಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ತುರ್ತು ಸಭೆಯಲ್ಲಿ ಭಾಗವಹಿಸಿದ್ದಾರೆ.
ವರದಿಗಳ ಪ್ರಕಾರ, ಪಾಕಿಸ್ತಾನವು ಪ್ರಯೋಗಿಸಿದ ಜೆಟ್ಗಳು, ಐವತ್ತಕ್ಕೂ ಹೆಚ್ಚು ಡ್ರೋನ್ಗಳು ಶೆಲ್ಗಳು ಮತ್ತು ಕ್ಷಿಪಣಿಗಳು ಭಾರತದ S-400 ರಕ್ಷಣಾ ವ್ಯವಸ್ಥೆಯ ಮುಂದೆ ದುರ್ಬಲವಾಗಿ ನೆಲಕ್ಕೆ ಬಿದ್ದಿವೆ. ಪಾಕಿಸ್ತಾನದ ದಾಳಿಯ ಪ್ರಯತ್ನಗಳು ವಿಫಲವಾದ ಕಾರಣ, ಪಠಾಣ್ಕೋಟ್ ಮತ್ತು ಜೈಸಲ್ಮೇರ್ ಸೇರಿದಂತೆ ಭಾರತದ ವಾಯುನೆಲೆಗಳು ಸುರಕ್ಷಿತವಾಗಿವೆ. ಜೈಸಲ್ಮೇರ್ನಲ್ಲಿ ಪಾಕಿಸ್ತಾನವು 200 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಲು ಪ್ರಯತ್ನಿಸಿತಾದರೂ, ಅದು ವಿಫಲವಾಯಿತು. ದಾಳಿ ನಡೆದ ವಿವಿಧ ನಗರಗಳಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಮತ್ತು ಬ್ಲ್ಯಾಕ್ಔಟ್ ಘೋಷಿಸಲಾಗಿದೆ. ಸ್ಥಳೀಯ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಭಾರತವು ಪ್ರತಿದಾಳಿಯಾಗಿ, ತನ್ನ ಕ್ಷಿಪಣಿಗಳನ್ನು ಪಾಕಿಸ್ತಾನದ ಗಡಿಯಿಂದ 24 ಕಿ.ಮೀ ದೂರದಲ್ಲಿರುವ ಲಾಹೋರ್ನತ್ತ ಹಾರಿಸಿದೆ. ಈ ದಾಳಿಯು ಉಗ್ರಗಾಮಿ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಇದರ ಮೂಲಕ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಕಠಿಣ ಸಂದೇಶವನ್ನು ನೀಡಲು ಮುಂದಾಗಿದೆ.
ವಿದೇಶಾಂಗ ಸಚಿವ ಜೈಶಂಕರ್ ಅವರು ಪಾಕಿಸ್ತಾನದ ಪ್ರತಿದಾಳಿಯನ್ನು ಖಂಡಿಸಿದ್ದಾರೆ ಮತ್ತು ಯುದ್ಧ ಪ್ರಚೋದನೆಗಳನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ವಿಷಯದ ಬಗ್ಗೆ ಅಮೆರಿಕದೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.