ಕಟ್ಟು ಜಾಣ್ಮೆ(ಎಐ) ಕಾಲದಲ್ಲಿ ಪ್ರಣಯ: ಸಂಗಾತಿಯನ್ನು ಹುಡುಕಿಕೊಟ್ಟ ಚಾಟ್‌ ಜಿಪಿಟಿ!

Update: 2024-02-06 16:25 GMT

ಪ್ರಪಂಚವು ಕಟ್ಟು ಜಾಣ್ಮೆ(ಎಐ)ಯ ಅದ್ಭುತಗಳನ್ನು ಶೋಧಿಸುತ್ತಿರುವ ಹೊತ್ತಿನಲ್ಲೇ ಕೆಲವರು ಅದು ತರಬಹುದಾದ ಅಪಾಯಗಳ ಬಗ್ಗೆ ಆತಂಕಿತರಾಗಿದ್ದಾರೆ. ಆದರೆ, ರಷ್ಯಾದ ಅಲೆಕ್ಸಾಂಡರ್ ಝದಾನ್‌, ಚಾಟ್‌ ಜಿಪಿಟಿ ಬಳಸಿ ಸಂಗಾತಿಯನ್ನು ಹುಡುಕಿಕೊಂಡಿದ್ದಾರೆ! 

ಝದಾನ್‌ ಚಾಟ್‌ ಜಿಪಿಟಿಯಿಂದ ಬೆಂಬಲಿತ ಟಿಂಡರ್‌ ಬಾಟ್‌ ಡೇಟಿಂಗ್ಗ್ಮೂ‌‌ ಆಪ್‌ ಮೂಲಕ 5,000 ಕ್ಕೂ ಅಧಿಕ ಮಹಿಳೆಯರನ್ನು ಸಂಪರ್ಕಿಸಿದ್ದರು. ಕೊನೆಗೆ, ಅವರ ಜೀವನದ ಪ್ರೀತಿ ಕರೀನಾ ರೂಪದಲ್ಲಿ ದೊರಕಿತು. 

ಬಾಟ್‌ ಮಾಡಿದ್ದೇನು?: ಸಂಗಾತಿಯ ಹುಡುಕಾಟಕ್ಕೆ ಏಐ ಬಳಸಿದ್ದರ ಕುರಿತ ವಿವರಗಳನ್ನು ಝದಾನ್‌ Xನಲ್ಲಿ ಹಂಚಿಕೊಂಡಿದ್ದಾರೆ; ʻನಾನು ಚಾಟ್‌ಜಿಪಿಟಿ ಮೂಲಕ ಒಂದು ವರ್ಷ ಕಾಲ ಸಂಭಾಷಣೆ ನಡೆಸಿದ ಹುಡುಗಿಗೆ ವಿವಾಹದ ಪ್ರಸ್ತಾವ ಇರಿಸಿದೆ. ಬಾಟ್‌ ಅವರಿಬ್ಬರ ಭೇಟಿಗೆ ದಿನವೊಂದನ್ನು ನಿಗದಿಪಡಿಸಿತು ಮತ್ತು ಹಲವು ಮಹಿಳೆಯರೊಡನೆ ಅವರು ಸಂಭಾಷಣೆ ನಡೆಸಿದರು. ಅನುರೂಪವಲ್ಲದ ಮಹಿಳೆಯನ್ನು ತೆಗೆದುಹಾಕಿತು.  ಇದೆಲ್ಲ ಸುಲಭವಾಗಿರಲಿಲ್ಲ. ಒಂದು ವರ್ಷದಲ್ಲಿ ಹಲವು ದಿನಾಂಕಗಳನ್ನು ಆಯ್ಕೆ ಮಾಡಿಕೊಟ್ಟಿತು ಹಾಗೂ ಉತ್ತಮವಾದ ಸಂಭಾಷಣೆ ಗಳನ್ನು ಬಳಸಿತು. ಅನಗತ್ಯ ಮತ್ತು ಅಸಭ್ಯ ಎನ್ನಬಹುದಾದ ಮಾತುಗಳನ್ನು ಕಿತ್ತು ಹಾಕಿತು.

5,239 ರಲ್ಲಿ ಒಬ್ಬರು: ʻಕೊನೆಗೆ, ಬಾಟ್‌ ಸರಿಯಾದ ಹುಡುಗಿಯರನ್ನು ಆಯ್ಕೆ ಮಾಡಲು ಆರಂಭಿಸಿತು. ಝದಾನ್‌ ತಮ್ಮ ಪೋಸ್ಟ್‌ಗಳ ಸರಣಿಯನ್ನು ತೋರಿಸಿ ವಿವರಿಸಿದರು. ಅವರ ಪ್ರಕಾರ, ಸರಿಸುಮಾರು 5,239 ಮಹಿಳೆಯರೊಟ್ಟಿಗೆ ಮಾತುಕತೆ ಬಳಿಕ ಕರೀನಾ ಅವರ ಬಳಿ ವಿವಾಹದ ಪ್ರಸ್ತಾಪ ಇಟ್ಟರು. ಆನಂತರ, ಡೇಟಿಂಗ್ ಆಪ್‌ ಬಳಸುವುದನ್ನು ನಿಲ್ಲಿಸಿದೆ ಎಂದು ಅವರು ಹೇಳಿದರು.

ನಿಮ್ಮನ್ನು ಜೀವನ ಸಂಗಾತಿಯಾಗಿ ಆಯ್ಕೆಮಾಡಿ ಕೊಳ್ಳುವಲ್ಲಿ ಬಾಟ್‌ ನೆರವಾಯಿತು ಎಂದು ಹೇಳಿದಾಗ ಕರೀನಾ ಹೇಗೆ ಪ್ರತಿಕ್ರಿಯಿಸಿದರು ಎಂಬ ಪ್ರಶ್ನೆಗೆ ʻಶಾಂತಚಿತ್ತದಿಂದ ಸ್ವೀಕರಿಸಿದರುʼ ಎಂದು ಝದಾನ್‌ ಹೇಳಿದರು.


Tags:    

Similar News