ಬ್ರಿಟನ್‌ನ ರಾಜ ಚಾರ್ಲ್ಸ್‌ ಗೆ ಕ್ಯಾನ್ಸರ್‌: ಬಹಿರಂಗಪಡಿಸಿದ ಬಕಿಂಗ್ಹ್ಯಾಮ್ ಅರಮನೆ

ವೈದ್ಯಕೀಯ ಸಲಹೆಯ ಮೇರೆಗೆ ಸಾರ್ವಜನಿಕ ಕರ್ತವ್ಯಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ ಅಗತ್ಯ ದಾಖಲೆಗಳು ಮತ್ತು ಖಾಸಗಿ ಸಭೆಗಳಂತಹ ಕರ್ತವ್ಯಗಳನ್ನು ನಿರ್ವಹಿಸುವರು.

Update: 2024-02-06 12:40 GMT

ಬ್ರಿಟನ್‌ನ ರಾಜ ಚಾರ್ಲ್ಸ್ III ಅವರು ಇತ್ತೀಚಿನ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕ್ಯಾನ್ಸರ್ ಇರುವುದು ಇದೀಗ ದೃಢಪಟ್ಟಿದೆ ಎಂದು ಬಕಿಂಗ್ಹ್ಯಾಮ್ ಅರಮನೆ ಸೋಮವಾರ (ಫೆಬ್ರವರಿ 5) ಹೇಳಿಕೆಯಲ್ಲಿ ತಿಳಿಸಿದೆ.


ಕಿಂಗ್ ಚಾರ್ಲ್ಸ್ ಗೆ ಸೋಮವಾರದಿಂದಲೇ ಚಿಕಿತ್ಸೆ ನೀಡಲು ವೈದ್ಯರು ತಯಾರಿ ನಡೆಸಿದ್ದು ಅರಮನೆಯಲ್ಲೇ ಚಿಕಿತ್ಸೆ ನೀಡಲು ವೈದ್ಯರ ತಂಡ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದೆ ಎಂದು ಹೇಳಲಾಗಿದೆ.


75 ವರ್ಷದ ಕಿಂಗ್ ಚಾರ್ಲ್ಸ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದ ವೇಳೆ ಕ್ಯಾನ್ಸರ್ ರೋಗ ಲಕ್ಷಣ ಇರುವುದು ಕಂಡುಬಂದಿದೆ ಎಂದು ಬಕಿಂಗ್‌ಹ್ಯಾಮ್ ಅರಮನೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಆದರೆ ಕಿಂಗ್ ಚಾರ್ಲ್ಸ್‌ ಅವರಿಗೆ ಯಾವ ರೀತಿಯ ಕ್ಯಾನ್ಸರ್ ಇದೆ ಮತ್ತು ದೇಹದ ಯಾವ ಭಾಗದಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ ಎಂಬುದನ್ನು ಮಾತ್ರ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿಲ್ಲ.

ರಾಜಮನೆತನದ ವಕ್ತಾರರು ಆಗಿರುವ ಕಿಂಗ್ ಚಾರ್ಲ್ಸ್ ಸಂಪೂರ್ಣವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ತಮ್ಮ ರಾಜಮನೆತನವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು. ಆದರೆ, ಅವರ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.


ನಿಯಮಿತ ಚಿಕಿತ್ಸೆ ಪ್ರಾರಂಭವಾದ ನಂತರ ಸೋಮವಾರ ನೀಡಿದ ಹೇಳಿಕೆಯ ಪ್ರಕಾರ, ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿರಲು ವೈದ್ಯರು ಕಿಂಗ್ ಚಾರ್ಲ್ಸ್‌ಗೆ ಸಲಹೆ ನೀಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಅವರ ಸ್ಥಾನದಲ್ಲಿ ಕುಟುಂಬದ ಇತರ ಹಿರಿಯ ಸದಸ್ಯರು ಸೇರಲಿದ್ದಾರೆ. ಆದಾಗ್ಯೂ, ಈ ಸಮಯದಲ್ಲಿ ಅವರು ದಾಖಲೆಗಳಿಗೆ ಸಹಿ ಹಾಕುವುದು ಮತ್ತು ಅರಮನೆಯೊಳಗೆ ಸಣ್ಣ ಖಾಸಗಿ ಸಭೆಗಳನ್ನು ನಡೆಸುವುದು ಸೇರಿದಂತೆ ಆಡಳಿತ ವ್ಯವಹಾರವನ್ನು ಮುಂದುವರಿಸುತ್ತಾರೆ ಎಂದು ಹೇಳಲಾಗಿದೆ.

ಇಂದು ಅವರ ನಿಯಮಿತ ಚಿಕಿತ್ಸೆಗಳನ್ನು ಪ್ರಾರಂಭಿಸಲಾಗಿದೆ. ಈ ಸಮಯದಲ್ಲಿ ಸಾರ್ವಜನಿಕರನ್ನು ನೇರವಾಗಿ ಭೇಟಿಯಾಗುವುದನ್ನು ಮುಂದೂಡಲು ವೈದ್ಯರು ಅವರಿಗೆ ಸಲಹೆ ನೀಡಿದ್ದಾರೆ. ಈ ಅವಧಿಯುದ್ದಕ್ಕೂ, ಗೌರವಾನ್ವಿತರು ಎಂದಿನಂತೆ ಆಡಳಿತ ವ್ಯವಹಾರ ಮತ್ತು ಅಧಿಕೃತ ಕಾಗದಪತ್ರಗಳ ಕೆಲಸಗಳನ್ನು ಮುಂದುವರಿಸುತ್ತಾರೆ ಎಂದು ಹೇಳಲಾಗಿದೆ.

ಚಿಕಿತ್ಸೆಯ ನಂತರ ಸಾರ್ವಜನಿಕ ಕರ್ತವ್ಯಗಳು ಪುನರಾರಂಭ

ವೈದ್ಯರ ಮುನ್ನೆಚ್ಚರಿಕೆ ಹಾಗೂ ಸತತ ತಪಾಸಣೆಯಿಂದಾಗಿ ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್​ ಅಂಶ ಇರುವುದು ಪತ್ತೆಯಾಗಿದೆ. ಇದಕ್ಕೆ ವೈದ್ಯಕೀಯ ತಂಡಕ್ಕೆ ಕೃತಜ್ಞರಾಗಿದ್ದೇವೆ. ಆಸ್ಪತ್ರೆಯ ತುರ್ತು ಕಾರ್ಯಕ್ಕೆ ಧನ್ಯವಾದಗಳು. ಅವರು ತಮ್ಮ ಚಿಕಿತ್ಸೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದು, ಸಾಧ್ಯವಾದಷ್ಟು ಬೇಗ ಸಾರ್ವಜನಿಕ ಕರ್ತವ್ಯಕ್ಕೆ ಮರಳುವ ಸಾಧ್ಯತೆ ಇದೆ ಅರಮನೆ ಮೂಲಗಳು ತಿಳಿಸಿವೆ.

ರಾಜರು ತಮ್ಮ ಆರೋಗ್ಯದ ಕುರಿತ ಊಹಾಪೋಹಗಳಿಗೆ ಕಡಿವಾಣ​ ಹಾಕುವ ಉದ್ದೇಶದಿಂದ ರೋಗದ ಕುರಿತು ಸಾರ್ವಜನಿಕರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಕ್ಯಾನ್ಸರ್​​ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ವಾರಾಂತ್ಯದಲ್ಲಿ, ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ನಾರ್ಫೋಕ್‌ನ ಸ್ಯಾಂಡ್ರಿಂಗ್‌ಹ್ಯಾಮ್‌ನಲ್ಲಿ ಚರ್ಚ್ ಸೇವೆಯಲ್ಲಿ ಭಾಗಿಯಾಗಿದ್ದರು. ಲಂಡನ್​ ಕ್ಲಿನಿಕ್​ನಿಂದ ಬಿಡುಗಡೆಯಾದ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದರು. ಕಿಂಗ್​ ಚಾರ್ಲ್ಸ್​​ ಚಿಕಿತ್ಸೆಗೆ ಸ್ಯಾಂಡ್ರಿಂಗ್‌ಹ್ಯಾಮ್‌ನಿಂದ ಲಂಡನ್‌ಗೆ ಪ್ರಯಾಣ ಬೆಳೆಸಿದ್ದು, ಲಂಡನ್​ನಲ್ಲಿನ ಅರಮನೆಯಲ್ಲಿಯೇ ಇರಲಿದ್ದಾರೆ.

ಶೀಘ್ರ ಚೇತರಿಕೆಗೆ ಸುನಕ್​​ ಹಾರೈಕೆ

ಕಿಂಗ್​ ಚಾರ್ಲ್ಸ್ ಅವರಿಗೆ​ ಕ್ಯಾನ್ಸರ್​ ಪತ್ತೆಯಾಗಿದ್ದು, ಅವರ ಶೀಘ್ರ ಚೇತರಿಕೆಗಾಗಿ ಕೋರುವುದಾಗಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಹೇಳಿದ್ದಾರೆ. ಗೌರವಾನ್ವಿತರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅವರು ಸಂಪೂರ್ಣವಾಗಿ ಗುಣಮುಖರಾಗಿ ಮರಳುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇಡೀ ದೇಶವೂ ಅವರ ಚೇತರಿಕೆಗೆ ಶುಭ ಹಾರೈಸುತ್ತದೆ ಎಂದು x​​ನಲ್ಲಿ ತಿಳಿಸಿದ್ದಾರೆ.

ರಾಜ ಚಾರ್ಲ್ಸ್​ ರೋಗದ ಕುರಿತು ಅವರ ಇಬ್ಬರು ಮಕ್ಕಳಾದ ವಿಲಿಯಂ ಮತ್ತು ಹ್ಯಾರಿಸ್‌ ಗೆ ತಿಳಿಸಲಾಗಿದೆ. ಪ್ರಿನ್ಸ್​ ವಿಲಿಯಂ ತಂದೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಪ್ರಿನ್ಸ್​ ಹ್ಯಾರಿಸ್ ಈಗಾಗಲೇ ತಂದೆಯೊಂದಿಗೆ ಮಾತನಾಡಿದ್ದು, ಅವರನ್ನು ಕಾಣಲು ಯುಕೆಗೆ ಬರಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags:    

Similar News