ಖಲಿಸ್ತಾನ್ ಬೆಂಬಲಿಗರು ಇಡೀ ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ: ಟ್ರುಡೊ
ಸಾಂಸ್ಕೃತಿಕ ವೈವಿಧ್ಯತೆಗೆ ಕೆನಡಾದ ಜನರು ಬೆಂಬಲ ನೀಡಬೇಕು. ವೈವಿಧ್ಯಮಯ ಅಭಿಪ್ರಾಯಗಳು ವಿಭಜನೆಯ ಮೂಲಗಳಾಗಬಾರದು ಎಂದು ಎಚ್ಚರಿಕೆ ನೀಡಿದರು;
ಒಟ್ಟಾವಾದ ಪಾರ್ಲಿಮೆಂಟ್ ಹಿಲ್‌ನಲ್ಲಿ ಗುರುವಾರ (ಅಕ್ಟೋಬರ್ 7) ದೀಪಾವಳಿ ಆಚರಣೆಯ ಸಮಯದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಖಲಿಸ್ತಾನದ ಸೂಕ್ಷ್ಮ ವಿಷಯವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಕೆನಡಾದಲ್ಲಿ ಖಲಿಸ್ತಾನ್ ಪರ ಬೆಂಬಲಿಗರು ಇರುವುದನ್ನು ಒಪ್ಪಿಕೊಂಡರು ಆದರೆ "ಅವರು ಇಡೀ ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ" ಎಂದು ಹೇಳಿದರು.
ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾತ್ಮಕ ದಾಳಿಯ ನಂತರ ಅವರ ಹೇಳಿಕೆಗಳು ಪ್ರಕಟಗೊಂಡಿವೆ. ಅಲ್ಲಿ ಖಲಿಸ್ತಾನ್ ಪರ ಸದಸ್ಯರು ಸ್ಥಳೀಯ ಭಾರತೀಯ ಮೂಲದವರ ಜತೆ ಘರ್ಷಣೆ ನಡೆಸಿದ್ದರು. ಇದು ಉದ್ವಿಗ್ನತೆಗೆ ಕಾರಣವಾಗಿತ್ತು.
ಈ ಹಿಂಸಾಚಾರವನ್ನು ಖಂಡಿಸಿದ ಟ್ರುಡೊ, "ಹಿಂಸಾಚಾರ, ಅಸಹಿಷ್ಣುತೆ, ಬೆದರಿಕೆ ಅಥವಾ ವಿಭಜನೆಗೆ ನಮ್ಮಲ್ಲಿ ಅವಕಾಶವಿಲ್ಲ. ನಾವು ಯಾರೆಂಬುದು ಇಲ್ಲಿ ಮುಖ್ಯವಲ್ಲ ಎಂದು ಹೇಳಿದರು.
ಸಾಂಸ್ಕೃತಿಕ ವೈವಿಧ್ಯತೆಗೆ ಕೆನಡಾದ ಜನರು ಬೆಂಬಲ ನೀಡಬೇಕು. ವೈವಿಧ್ಯಮಯ ಅಭಿಪ್ರಾಯಗಳು ವಿಭಜನೆಯ ಮೂಲಗಳಾಗಬಾರದು ಎಂದು ಎಚ್ಚರಿಕೆ ನೀಡಿದರು.
ಬ್ರಿಟಿಷ್ ಕೊಲಂಬಿಯಾದ ಮಾಜಿ ಪ್ರಧಾನಿ ಮತ್ತು ಮಾಜಿ ಫೆಡರಲ್ ಕ್ಯಾಬಿನೆಟ್ ಸಚಿವ ಉಜ್ಜಲ್ ದೋಸಾಂಜ್ ಅವರು ಟ್ರುಡೊ ಅವರು. ಸಿಖ್ಖರನ್ನು ಖಲಿಸ್ತಾನಿ ಬೆಂಬಲಿಗರಿಂದ ಪ್ರತ್ಯೇಕಿಸುತ್ತಿರುವುದು ಇದೇ ಮೊದಲು ಎಂದು ಪ್ರತಿಕ್ರಿಯಿಸಿದ್ದಾರೆ.
'ಖಲಿಸ್ತಾನಿಗಳಿಂದ ದೂರವಿರಿ'
ಟ್ರುಡೊ "ಖಲಿಸ್ತಾನಿಗಳಿಂದ ದೂರವಿರುತ್ತಾರೆ" ಎಂಬ ಭರವಸೆಯನ್ನು ವ್ಯಕ್ತಪಡಿಸಿದ ದೋಸಾಂಜ್, ಕೆನಡಾದ ಮುಖ್ಯವಾಹಿನಿಯ ಮಾಧ್ಯಮಗಳನ್ನು ಗುರಿಯಾಗಿಸಿಕೊಂಡ, ಖಲಿಸ್ತಾನಿ ಬೆಂಬಲಿಗರನ್ನು ಕೇವಲ "ಕಾರ್ಯಕರ್ತರು" ಎಂದು ಹಣೆಪಟ್ಟಿ ಕಟ್ಟುವ ಮೂಲಕ ಕೆನಡಾದ ಸಿಖ್ಖರನ್ನು ತಪ್ಪಾಗಿ ಬಿಂಬಿಸುತ್ತಿದೆ ಎಂದು ಆರೋಪಿಸಿದರು.
"ಬೆರಳೆಣಿಕೆಯಷ್ಟು ಖಲಿಸ್ತಾನಿಗಳನ್ನು ಎಲ್ಲಾ ಸಿಖ್ಖರ ಪ್ರತಿನಿಧಿಯಾಗಿ ಚಿತ್ರಿಸುವ ಮೂಲಕ ಮಾಧ್ಯಮಗಳು ಕೆನಡಾ ಮತ್ತು ಸಿಖ್ ಸಮುದಾಯಕ್ಕೆ ಅಪಚಾರ ಮಾಡುತ್ತವೆ. ಈ ನಿರೂಪಣೆಯು ಸಂಪೂರ್ಣವಾಗಿ ತಪ್ಪುದಾರಿಗೆಳೆಯುತ್ತದೆ ಎಂದು ಹೇಳಿದರು.