ಸೆಂಟ್ರಲ್‌ ಗಾಜಾದ ಮಸೀದಿ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ; 21 ಮಂದಿ ಸಾವು

ಇರಾನ್-ಬೆಂಬಲಿತ ಹಿಜ್ಬುಲ್ಲಾ ವಿರುದ್ಧದ ತನ್ನ ಕಾರ್ಯಾಚರಣೆ ತೀವ್ರಗೊಳಿಸಿರುವ ಇಸ್ರೇಲ್‌ ಪಡೆ, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾದ ಕಮಾಂಡ್ ಸೆಂಟರ್‌, ಶಸ್ತ್ರಾಸ್ತ್ರ ಸಂಗ್ರಹಗಾರ, ಸುರಂಗಗಳು ಮತ್ತು ಇತರ ಮೂಲಸೌಕರ್ಯ ವ್ಯವಸ್ಥೆ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

Update: 2024-10-06 08:58 GMT

ಇರಾನ್‌ ಕ್ಷಿಪಣಿ ದಾಳಿಗೆ ಪ್ರತಿಕಾರವಾಗಿ ಸೆಂಟ್ರಲ್‌ ಗಾಜಾದ ಮಸೀದಿಯೊಂದರ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 21 ಜನರು ಮೃತಪಟ್ಟಿದ್ದಾರೆ ಎಂದು ಎಪಿ ವರದಿ ಮಾಡಿದೆ.

ಇರಾನ್-ಬೆಂಬಲಿತ ಹಿಜ್ಬುಲ್ಲಾ ವಿರುದ್ಧದ ತನ್ನ ಕಾರ್ಯಾಚರಣೆ ತೀವ್ರಗೊಳಿಸಿರುವ ಇಸ್ರೇಲ್‌ ಪಡೆ, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾದ ಕಮಾಂಡ್ ಸೆಂಟರ್‌, ಶಸ್ತ್ರಾಸ್ತ್ರ ಸಂಗ್ರಹಗಾರ, ಸುರಂಗಗಳು ಮತ್ತು ಇತರ ಮೂಲಸೌಕರ್ಯ ವ್ಯವಸ್ಥೆ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಶನಿವಾರ ರಾತ್ರಿ ಎರಡು ಗಂಟೆಗಳ ಕಾಲ ದಕ್ಷಿಣ ಬೈರುತ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ವರದಿಗಳು ತಿಳಿಸಿವೆ.

ಹಿಜ್ಬುಲ್ಲಾದ ಮೇಲೆ ಒತ್ತಡತಂತ್ರದ ಭಾಗವಾಗಿ ದಾಳಿ ಮುಂದುವರಿಸಲಾಗಿದೆ. ಶತ್ರುಗಳಿಗೆ ಹೆಚ್ಚು ಹಾನಿ ಉಂಟು ಮಾಡುವುದಲ್ಲದೆ ಪ್ರತಿಕಾರಕ್ಕೂ ಆಸ್ಪದ ನೀಡದಂತೆ ದಾಳಿ ನಡೆಸಲಾಗುತ್ತಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹೆರ್ಜಿ ಹಲೇವಿ ಹೇಳಿದ್ದಾರೆ.

ಲೆಬನಾನ್‌ನಲ್ಲಿ ಇಸ್ರೇಲ್ ತನ್ನ ಸೇನಾ ಕಾರ್ಯಾಚರಣೆ ಆರಂಭಿಸಿದಾಗಿನಿಂದ ಈವರೆಗೆ 30 ಕಮಾಂಡರ್‌ಗಳು ಸೇರಿ ಸುಮಾರು 440 ಹಿಜ್ಬುಲ್ಲಾ ಭಯೋತ್ಪಾದಕರನಕ್ನು ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ.

ಹತರಲ್ಲಿ ಹಿಜ್ಬುಲ್ಲಾ ಸಂಘಟನೆ ನಾಯಕ ಹಸನ್ ನಸ್ರಲ್ಲಾಹ್ ಅವರ ಸಂಭಾವ್ಯ ಉತ್ತರಾಧಿಕಾರಿ ಹಶೆಮ್ ಸಫೀದ್ದೀನ್ ಕೂಡ ಸೇರಿದ್ದಾರೆ.

Tags:    

Similar News