Sunita Williams | ಸುನೀತಾ ತಂಗಿದ್ದ ಬಾಹ್ಯಾಕಾಶ ನಿಲ್ದಾಣ ಹೇಗಿರುತ್ತದೆ? ಇಲ್ಲಿದೆ ವಿವರಣೆ

ಬಾಹ್ಯಾಕಾಶ ನಿಲ್ದಾಣ ಕೇವಲ ವೈಜ್ಞಾನಿಕ ಪ್ರಯೋಗಾಲಯವಲ್ಲ, ಅದು ಅಂತರಿಕ್ಷಯಾತ್ರಿಗಳ ಮನೆ . ಇದು ಬಾಹ್ಯಾಕಾಶದಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಯಶಸ್ವಿಯಾಗಲು ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ.;

Update: 2025-03-19 13:03 GMT

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಭೂಮಿಯಿಂದ ಸುಮಾರು 400 ಕಿಲೋಮೀಟರ್ ಎತ್ತರದಲ್ಲಿ ಸುತ್ತುತ್ತಿರುವ ಒಂದು ಅದ್ಭುತ ತಾಂತ್ರಿಕ ಸಾಧನ ಮತ್ತು ಅಂತರರಾಷ್ಟ್ರೀಯ ಸಹಯೋಗದ ವ್ಯವಸ್ಥೆ . ಇದು ಮೈಕ್ರೋಗ್ರಾವಿಟಿ ಮತ್ತು ಬಾಹ್ಯಾಕಾಶ ಪರಿಸರದ ಸಂಶೋಧನಾ ಪ್ರಯೋಗಾಲಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಲ್ದಾಣದಲ್ಲಿ ವೈಜ್ಞಾನಿಕ ಪ್ರಯೋಗಗಳು, ದೈನಂದಿನ ಜೀವನ ಮತ್ತು ಅಂತರಿಕ್ಷಯಾತ್ರಿಗಳ ಯೋಗಕ್ಷೇಮಕ್ಕಾಗಿ ಅತ್ಯಾಧುನಿಕ ಸೌಲಭ್ಯಳನ್ನು ಒದಗಿಸಲಾಗಿದೆ.

ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ನಿಯೋಜಿತ ಪ್ರಯೋಗಾಲಯಗಳಿವೆ, ಪ್ರತಿಯೊಂದೂ ನಿರ್ದಿಷ್ಟ ರೀತಿಯ ಸಂಶೋಧನೆಗಾಗಿ ವಿನ್ಯಾಸಗೊಳಿಸಲಾಗಿದೆ. ಡೆಸ್ಟಿನಿ (ಯು.ಎಸ್. ಪ್ರಯೋಗಾಲಯ), ಕೊಲಂಬಸ್ (ಯುರೋಪಿಯನ್ ಪ್ರಯೋಗಾಲಯ), ಕಿಬೋ (ಜಪಾನೀಸ್ ಪ್ರಯೋಗಾಲಯ), ಮತ್ತು ನೌಕಾ (ರಷ್ಯನ್ ಬಹುಉದ್ದೇಶ ಪ್ರಯೋಗಾಲಯ) ಪ್ರಮುಖವಾದವು. ಈ ಪ್ರಯೋಗಾಲಯಗಳು ಮೈಕ್ರೋಗ್ರಾವಿಟಿಯಲ್ಲಿ ಅಸಾಮಾನ್ಯ ಸಂಶೋಧನೆಗಳನ್ನು ಸಾಧ್ಯವಾಗಿಸುತ್ತಿವೆ. ಈ ಪ್ರಯೋಗಾಲಯಗಳು ಭೂಮಿಯಲ್ಲಿ ಅಧ್ಯಯನ ಮಾಡಲು ಸಾಧ್ಯವಿಲ್ಲದ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ವೈಯಕ್ತಿಕ ಕೋಣೆಗಳು

ಅಂತರಿಕ್ಷಯಾತ್ರಿಗಳಿಗೆ ಆರಾಮದಾಯಕ ವಾಸಸ್ಥಳಗಳನ್ನು ಒದಗಿಸಲು ಬಾಹ್ಯಾಕಾಶ ನಿಲ್ದಾಣದಲ್ಲಿ ಸಣ್ಣ, ಖಾಸಗಿ ನಿದ್ರೆ ಕೋಣೆಗಳು, ವೈಯಕ್ತಿಕ ವಸ್ತುಗಳ ಸಂಗ್ರಹಣೆಗಾಗಿ ಲಾಕರ್‌ಗಳು ಮತ್ತು ಮೈಕ್ರೋಗ್ರಾವಿಟಿಯಲ್ಲಿ ವೈಯಕ್ತಿಕ ಸ್ವಚ್ಛತೆಗಾಗಿ ಸ್ಪೇಸ್ ಟಾಯ್ಲೆಟ್ ಮತ್ತು ವೆಟ್​ ಟಿಷ್ಯೂಗಳು ಇರುತ್ತವೆ. 

ಮೈಕ್ರೋಗ್ರಾವಿಟಿಯ ದೈಹಿಕ ಪರಿಣಾಮಗಳನ್ನು ತಡೆಗಟ್ಟಲು, ISSನಲ್ಲಿ ವ್ಯಾಯಾಮ ಸಾಧನಗಳಿವೆ. . ಟ್ರೆಡ್‌ಮಿಲ್ (T2) ಅಂತರಿಕ್ಷಯಾತ್ರಿಗಳ ಮೂಳೆಗಳ ಸಾಂದ್ರತೆ ಮತ್ತು ಸ್ನಾಯುಗಳ ಶಕ್ತಿಯನ್ನು ಕಾಪಾಡುತ್ತದೆ. ಅಡ್ವಾನ್ಸ್ಡ್ ರೆಸಿಸ್ಟಿವ್ ಎಕ್ಸರ್ಸೈಸ್ ಡಿವೈಸ್ (ARED) ಸ್ನಾಯುಗಳ ಕ್ಷೀಣತೆಯನ್ನು ತಡೆಗಟ್ಟಲು ವೆಟ್‌ಲಿಫ್ಟಿಂಗ್ ಮಾಡುವಂತೆ ಪ್ರೇರೇಪಿಸುತ್ತದೆ. ಸೈಕಲ್ ಎರ್ಗೋಮೀಟರ್ ಹೃದಯ ಸಂಬಂಧಿ ವ್ಯಾಯಾಮಕ್ಕಾಗಿ ಬಳಸಲಾಗುತ್ತದೆ.

ಸಂವಹನಾ ಸಾಧನ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭೂಮಿಯೊಂದಿಗೆ ಸಂಪರ್ಕ ನಿರ್ವಹಿಸಲು ಅತ್ಯಾಧುನಿಕ ಸಂವಹನ ಸಾಧನಗಳಿವೆ. ಹೈ-ಸ್ಪೀಡ್ ಇಂಟರ್ನೆಟ್ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕಿಸಲು ನೆರವಾಗುತ್ತದೆ. ಅವುಗಳನ್ನು ವೀಡಿಯೋ ಕಾನ್ಫರೆನ್ಸಿಂಗ್ ವೈಜ್ಞಾನಿಕ ಮತ್ತು ವೈಯಕ್ತಿಕ ಕರೆಗಳಿಗೆ ಬಳಸಲಾಗುತ್ತದೆ. ಅಮೆಚ್ಯೂರ್ ರೇಡಿಯೋ ವ್ಯವಸ್ಥೆ ಪ್ರಪಂಚದಾದ್ಯಂತ ಅಮೆಚ್ಯೂರ್ ರೇಡಿಯೋ ಆಪರೇಟರ್‌ಗಳೊಂದಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.

ಅಡುಗೆ ಮನೆ ಹೇಗಿದೆ?

ಬಾಹ್ಯಾಕಾಶ ನಿಲ್ದಾಣದಲ್ಲಿ ಸಂಪೂರ್ಣ ಸಜ್ಜುಗೊಂಡ ಅಡುಗೆಮನೆ ಇದೆ. ಮೊದಲೇ ಪ್ಯಾಕ್ ಮಾಡಿದ ಆಹಾರಗಳುನ್ನು ಹಗುರ ಮತ್ತು ಮೈಕ್ರೋಗ್ರಾವಿಟಿಯಲ್ಲಿ ಸುಲಭವಾಗಿ ತಯಾರಿಸಲು ವಿನ್ಯಾಸಗೊಳಿಸಲಾಗಿದೆ. ನೀರಿನ ಸ್ಟೇಷನ್‌ಗಳು ಒಣಗಿಕೊಂಡಿರುವ ಆಹಾರಕ್ಕೆ ನೀರು ಮಿಶ್ರಣ ಮಾಡಲು ನೆರವಾಗುತ್ತದೆ. ರೆಫ್ರಿಜರೇಟರ್‌ಗಳು ಮತ್ತು ಫ್ರೀಜರ್‌ಗಳು ಆಹಾರ ತಾಜ ಇರುವಂತೆ ನೋಡಿಕೊಳ್ಳುತ್ತದೆ.

ಕ್ಯುಪೋಲಾ ಮಾಡೆಲ್​

ಭೂಮಿ ಮತ್ತು ಬಾಹ್ಯಾಕಾಶದ ಅದ್ಭುತ ದೃಶ್ಯಗಳನ್ನು ನೋಡಲು ಕ್ಯುಪೋಲಾ ಮಾಡ್ಯೂಲ್ ನಿಲ್ದಾಣದ ಒಳಗೆ ಇದೆ. ಇದು ಪ್ಯಾನೋರಾಮಿಕ್ ವೀಕ್ಷಣೆಗಾಗಿ ಗುಂಬಜ್​ ಆಕೃತಿಯ ಕಿಟಕಿಯನ್ನು ಹೊಂದಿದೆ. ಅಂತರಿಕ್ಷಯಾತ್ರಿಗಳು ಓದಲು, ಸಂಗೀತ ವಾದ್ಯಗಳನ್ನು ನುಡಿಸಲು ಅಥವಾ ಚಲನಚಿತ್ರಗಳನ್ನು ನೋಡಿಕೊಂಡು ಇಲ್ಲಿ ಸಮಯ ಕಳೆಯಬಹುದು.

ನಿಲ್ದಾಣದ ಹೊರಗೆ ಕಾರ್ಯನಿರ್ವಹಿಸಲು ಗಗನಯಾನಿಗಳು ಎಕ್ಸ್ಟ್ರಾವೆಹಿಕ್ಯುಲರ್ ಮೊಬಿಲಿಟಿ ಯೂನಿಟ್ಸ್ (EMUs) ಬಳಸುತ್ತಾರೆ. ಇದು ಸ್ಪೇಸ್‌ವಾಕ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಸ್ಪೇಸ್‌ಸೂಟ್‌ಗಳು. ಕ್ವೆಸ್ಟ್ ಏರ್​ಲಾಕ್​ ಸ್ಪೇಸ್‌ವಾಕ್‌ಗಳಿಗೆ ಪ್ರಾಥಮಿಕ ನಿರ್ಗಮನವಾಗಿದೆ. ರೋಬೋಟಿಕ್ ಆರ್ಮ್‌ಗಳು ನಿಲ್ದಾಣದ ಹೊರಗಡೆ ದುರಸ್ತಿ ಮತ್ತು ಪ್ರಯೋಗಗಳನ್ನು ನಡೆಸಲು ನೆರವು ನೀಡುತ್ತದೆ.

ವಾಸಯೋಗ್ಯ ಪರಿಸರ

ನಿಲ್ದಾಣದ ಒಳಗೆ ವಾಸಯೋಗ್ಯ ಪರಿಸರ ನಿರ್ವಹಿಸಲು ಜೀವನ ಬೆಂಬಲ ವ್ಯವಸ್ಥೆಗಳು (ECLSS) ಇವೆ. ಆಮ್ಲಜನಕ ಉತ್ಪಾದನೆ ವ್ಯವಸ್ಥೆ ಆಮ್ಲಜನಕ ಪೂರೈಸುತ್ತದೆ. ನೀರು ಮರುಬಳಕೆ ವ್ಯವಸಥೆ ಮೂತ್ರ ಮತ್ತು ಬೆವರನ್ನು ಶುದ್ಧ ನೀರಾಗಿ ಪರಿವರ್ತಿಸುತ್ತದೆ. ತಾಪಮಾನ ನಿಯಂತ್ರಣ ನಿಲ್ದಾಣದ ತಾಪಮಾನ ಮತ್ತು ಆರ್ದ್ರತೆಯನ್ನು ನಿಯಂತ್ರಿಸುತ್ತದೆ.

ಅಧ್ಯಯನಗಳೇನು?

ಅಂತರಿಕ್ಷ ನಿಲ್ದಾಣದಲ್ಲಿ ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಲಾಗುತ್ತದೆ. ಮಾನವ ಆರೋಗ್ಯ ಅಧ್ಯಯನಗಳು ಮೈಕ್ರೋಗ್ರಾವಿಟಿಯ ಮಾನವ ದೇಹದ ಮೇಲಿನ ಪರಿಣಾಮಗಳನ್ನು ಅಧ್ಯಯನ ಮಾಡುತ್ತದೆ. ಮೆಟಿರೀಯಲ್ ಸೈನ್ಸ್​ ಮೈಕ್ರೋಗ್ರಾವಿಟಿಯಲ್ಲಿ ಹೊಸ ವಸ್ತುಗಳನ್ನು ಅಭಿವೃದ್ಧಿಪಡಿಸುತ್ತದೆ. ಭೂಮಿ ಮತ್ತು ಬಾಹ್ಯಾಕಾಶ ನಿರೀಕ್ಷಣೆ ಹವಾಮಾನ ಬದಲಾವಣೆ ಮತ್ತು ಬ್ರಹ್ಮಾಂಡದ ವಿದ್ಯಮಾನಗಳನ್ನು ಅಧ್ಯಯನ ಮಾಡಲಾಗುತ್ತದೆ.

ಬಾಹ್ಯಾಕಾಶ ನಿಲ್ದಾಣ ಕೇವಲ ವೈಜ್ಞಾನಿಕ ಪ್ರಯೋಗಾಲಯವಲ್ಲ, ಅದು ಅಂತರಿಕ್ಷಯಾತ್ರಿಗಳ ಮನೆ . ಇದು ಬಾಹ್ಯಾಕಾಶದಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಯಶಸ್ವಿಯಾಗಲು ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ 

Tags:    

Similar News