ಡೊನಾಲ್ಡ್ ಟ್ರಂಪ್ ದೋಷಿ: ಗ್ರ್ಯಾಂಡ್‌ ಜ್ಯೂರಿ ಆದೇಶ

ಅಪರಾಧಕ್ಕಾಗಿ ಶಿಕ್ಷೆಗೊಳಗಾದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ

Update: 2024-05-31 06:51 GMT

ಡೊನಾಲ್ಡ್ ಟ್ರಂಪ್ ಅವರನ್ನು ನ್ಯೂಯಾರ್ಕ್‌ನ ಗ್ರ್ಯಾಂಡ್ ಜ್ಯೂರಿ ವ್ಯಾಪಾರ ದಾಖಲೆಗಳನ್ನು ತಿದ್ದಿದ 34 ಘಟನೆಗಳಲ್ಲಿ ತಪ್ಪಿತಸ್ಥರೆಂದು ಗುರುವಾರ ಘೋಷಿಸಿದ್ದಾರೆ. 

ಅವರು ಶಿಕ್ಷೆಗೊಳಗಾದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ. ಯಾರೂ ಕಾನೂನಿಗಿಂತ ಮೇಲಲ್ಲ ಎಂದು ಬಿಡೆನ್ ಹ್ಯಾರಿಸ್ ಪ್ರಚಾರ ಗುಂಪು ಹೇಳಿದರೆ, ತೀರ್ಪು ಕಪಟ ರಾಜಕೀಯ ವ್ಯವಸ್ಥೆಯ ಪರಿಣಾಮ ಎಂದು ಟ್ರಂಪ್ ಹೇಳಿದ್ದಾರೆ.

ಜುಲೈ 11 ರಂದು ಶಿಕ್ಷೆಯನ್ನು ನಿರ್ಧರಿಸಲಾಗುತ್ತದೆ. ವಿಸ್ಕಾನ್ಸಿನ್‌ನ ಮಿಲ್ವಾಕಿಯಲ್ಲಿ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶಕ್ಕೆ ನಾಲ್ಕು ದಿನಗಳ ಮೊದಲು ಶಿಕ್ಷೆ ನಿಗದಿಗೊಳ್ಳಲಿದೆ. ಅಂದು ನವೆಂಬರ್ ಚುನಾವಣೆಯಲ್ಲಿ ಜೋ ಬಿಡೆನ್ ವಿರುದ್ಧ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯನ್ನು ಔಪಚಾರಿಕವಾಗಿ ನಾಮನಿರ್ದೇಶನ ಮಾಡಲಾಗುತ್ತದೆ.

ʻಇದು ಅಪಮಾನಕರ. ಇದು ಭ್ರಷ್ಟ ನ್ಯಾಯಾಧೀಶರಿಂದ ಸಜ್ಜುಗೊಳಿಸಿದ ವಿಚಾರಣೆ. ಸಜ್ಜನಿಕೆಗೆ ಅವಮಾನ. ಅವರು ನಮಗೆ ಸ್ಥಳ ಬದಲಾವಣೆಗೆ ಅವಕಾಶ ನೀಡುವುದಿಲ್ಲ. ನಾವು ಈ ಜಿಲ್ಲೆ- ಪ್ರಾಂತ್ಯದಲ್ಲಿ ಶೇ 5 ಅಥವಾ 6 ರಷ್ಟು ಇದ್ದೇವೆ. ಇದು ಮೊದಲೇ ನಿರ್ಧರಿಸಿದ, ಅವಮಾನಕರ ವಿಚಾರಣೆ,ʼ ಎಂದು ತೀರ್ಪು ಕುರಿತು ಟ್ರಂಪ್ ಹೇಳಿದರು. ಟ್ರಂಪ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಯಾಗಿದ್ದಾರೆ.

ʻಜನರಿಂದ ನಿಜವಾದ ತೀರ್ಪು ನವೆಂಬರ್ 5 ಬರಲಿದೆ. ಮತ್ತು ಇಲ್ಲಿ ಏನಾಯಿತು ಎನ್ನುವುದು ಜನರಿಗೆ ಮತ್ತು ಎಲ್ಲರಿಗೂ ತಿಳಿದಿದೆ. ನೀವು ಸೊರೊಸ್ ಬೆಂಬಲಿತರಿದ್ದೀರಿ. ನಾವು ಯಾವುದೇ ತಪ್ಪು ಮಾಡಿಲ್ಲ. ನಾನು ತುಂಬಾ ಮುಗ್ಧ ಮನುಷ್ಯ: ದೇಶಕ್ಕಾಗಿ, ಸಂವಿಧಾನಕ್ಕಾಗಿ ಹೋರಾಡುತ್ತಿದ್ದೇನೆ. ಇಡೀ ದೇಶವನ್ನು ಈಗ ಭ್ರಷ್ಟಗೊಳಿಸಲಾಗುತ್ತಿದೆ,ʼ ಎಂದು ಟ್ರಂಪ್ ಹೇಳಿದರು.

ʻರಾಜಕೀಯ ಎದುರಾಳಿಗೆ ಹಾನಿ ಮಾಡಲು ಬಿಡೆನ್ ಆಡಳಿತ ಇದನ್ನು ಮಾಡಿದೆ. ಇದು ಅವಮಾನಕರ. ನಾವು ಹೋರಾಡುತ್ತಲೇ ಇರುತ್ತೇವೆ. ಕೊನೆಯವರೆಗೂ ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ. ಏಕೆಂದರೆ ದೇಶ ನರಕಸದೃಶವಾಗಿದೆ,ʼ ಎಂದು ಹೇಳಿದರು.

ಬಿಡೆನ್‌ ಗುಂಪಿನಿಂದ ಸ್ವಾಗತ: ಬಿಡೆನ್-ಹ್ಯಾರಿಸ್ ಅಭಿಯಾನ ತೀರ್ಪನ್ನು ಸ್ವಾಗತಿಸಿದೆ, ʻಯಾರೂ ಕಾನೂನಿಗಿಂತ ಮೇಲಲ್ಲ ಎಂದು ನಾವು ನೋಡಿದ್ದೇವೆ,ʼ ಎಂದು ಬಿಡೆನ್-ಹ್ಯಾರಿಸ್ ಸಂವಹನ ನಿರ್ದೇಶಕ ಮೈಕೆಲ್ ಟೈಲರ್ ಹೇಳಿದರು.

ʻಡೊನಾಲ್ಡ್ ಟ್ರಂಪ್ ಸ್ವಂತ ಲಾಭಕ್ಕಾಗಿ ಕಾನೂನು ಮುರಿದಿದ್ದು, ಅದರ ಪರಿಣಾಮಗಳನ್ನು ಎದುರಿಸುವುದಿಲ್ಲ ಎಂದು ತಪ್ಪಾಗಿ ನಂಬಿದ್ದಾರೆ. ಟ್ರಂಪ್ ಅವರನ್ನು ಓವಲ್ ಕಚೇರಿಯಿಂದ ಹೊರಗಿಡಲು ಒಂದೇ ಒಂದು ಮಾರ್ಗವಿದೆ: ಅದು ಮತಪೆಟ್ಟಿಗೆ. ಜ್ಯೂರಿ ಅವರನ್ನು ಅಪರಾಧಿ ಅಥವಾ ತಪ್ಪಿತಸ್ಥಎಂದರೂ, ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸುತ್ತಾರೆ, ʼಎಂದು ಹೇಳಿದರು.

ʻಪ್ರಜಾಪ್ರಭುತ್ವಕ್ಕೆ ಟ್ರಂಪ್ ಒಡ್ಡುವ ಬೆದರಿಕೆ ತಪ್ಪುವುದಿಲ್ಲ. ಅವರು ಪ್ರತೀಕಾರ ಮತ್ತು ದ್ವೇಷದ ಪ್ರಚಾರ ಮಾಡುತ್ತಿದ್ದಾರೆ. ಸರ್ವಾಧಿಕಾರಿಯಾಗಲು ಪ್ರತಿಜ್ಞೆ ಮಾಡಿದ್ದಾರೆ ಮತ್ತು ಸಂವಿಧಾನವನ್ನು 'ಮುಕ್ತಾಯಗೊಳಿಸಬೇಕು' ಎಂದು ಕರೆ ನೀಡಿದ್ದಾರೆ. ಟ್ರಂಪ್‌ ಗೆ ಮತ್ತೊಮ್ಮೆ ಅವಕಾಶ ನೀಡುವುದರಿಂದ ಅರಾಜಕತೆ, ಸ್ವಾತಂತ್ರ್ಯ ಹರಣ ಮತ್ತು ರಾಜಕೀಯ ಹಿಂಸಾಚಾರಕ್ಕೆ ಪ್ರಚೋದಿಸಿದಂತೆ ಆಗಲಿದೆ. ಈ ನವೆಂಬರ್‌ನಲ್ಲಿ ಅಮೆರಿಕದ ಜನರು ಅದನ್ನು ತಿರಸ್ಕರಿಸುತ್ತಾರೆ,ʼ ಎಂದು ಟೈಲರ್ ಹೇಳಿದರು. 

Tags:    

Similar News