ಬಾಂಗ್ಲಾದೇಶದಲ್ಲಿ ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್‌ಗೆ ಜಾಮೀನು ನಿರಾಕರಣೆ

ಮೆಟ್ರೊಪಾಲಿಟನ್‌ ಸೆಶನ್ಸ್ ನ್ಯಾಯಾಧೀಶ ಮೊಹಮ್ಮದ್ ಸೈಫುಲ್ ಇಸ್ಲಾಂ, ಎರಡೂ ಪಕ್ಷಗಳ ವಾದ-ಪ್ರತಿವಾದಗಳನ್ನು 30 ನಿಮಿಷಗಳ ಕಾಲ ಆಲಿಸಿ, ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ ಎಂದು 'ಡೈಲಿ ಸ್ಟಾರ್' ವರದಿ ಮಾಡಿದೆ.;

Update: 2025-01-02 09:05 GMT
ಚಿನ್ಮಯಕೃಷ್ಣ ದಾಸ್‌.

ದೇಶ ವಿರೋಧಿ ಕೃತ್ಯದಲ್ಲಿ ಬಂಧನಕ್ಕೆ ಒಳಗಾಗಿರುವ ಬಾಂಗ್ಲಾದೇಶದಲ್ಲಿರುವ ಇಸ್ಕಾನ್‌ ಸಂತ ಚಿನ್ಮಯ ಕೃಷ್ಣ ದಾಸ್ ಅವರಿಗೆ ಚಟ್ಟೋಗ್ರಾಮದ ನ್ಯಾಯಾಲಯ ಜನವರಿ 2ರಂದು (ಗುರುವಾರ) ಜಾಮೀನು ನಿರಾಕರಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ಅವರನ್ನು ಬಂಧಿಸಲಾಗಿತ್ತು. ಅವರ ಮೇಲೆ ದೇಶದ್ರೋಹ ಹಾಗೂ ಸಂಘಟಿತ ಅಪರಾಧಗಳ ಪ್ರಕರಣ ದಾಖಲಿಸಲಾಗಿದೆ.

ಮೆಟ್ರೊಪಾಲಿಟನ್‌ ಸೆಶನ್ಸ್ ನ್ಯಾಯಾಧೀಶ ಮೊಹಮ್ಮದ್ ಸೈಫುಲ್ ಇಸ್ಲಾಂ, ಎರಡೂ ಪಕ್ಷಗಳ ವಾದ-ಪ್ರತಿವಾದಗಳನ್ನು 30 ನಿಮಿಷಗಳ ಕಾಲ ಆಲಿಸಿ, ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ ಎಂದು 'ಡೈಲಿ ಸ್ಟಾರ್' ವರದಿ ಮಾಡಿದೆ.

ಚಿನ್ಮಯ ಕೃಷ್ಣ ದಾಸ್ ಹಾಗೂ ಇತರರು ಇಸ್ಕಾನ್‌ನಿಂದ ಪ್ರತ್ಯೇಕಗೊಂಡಿದ್ದರು. ಅವರನ್ನು ಕಠಿಣ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ತರಲಾಗಿತ್ತು. 11 ಮಂದಿ ಸುಪ್ರೀಂ ಕೋರ್ಟ್ ವಕೀಲರು ಅವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದರು.

ದೇಶ ದ್ರೋಹದ ಆರೋಪಗಳು

ಡಿಸೆಂಬರ್ 3ರಂದು, ಚಟ್ಟೋಗ್ರಾಮ ನ್ಯಾಯಾಲಯದಲ್ಲಿ ಅವರ ಅರ್ಜಿ ವಿಚಾರಣೆ ನಡೆಸಲಾಗಿತ್ತು. ಆದರೆ, ಅವರ ಪರ ವಾದಿಸಲು ವಕೀಲರ ಕೊರತೆ ಇದ್ದ ಕಾರಣ ಜಾಮೀನು ವಿಚಾರಣೆಯನ್ನು ಜನವರಿ 2ಕ್ಕೆ ಮುಂದೂಡಲಾಗಿತ್ತು.

ಚಿನ್ಮಯಕೃಷ್ಣ ವಿರುದ್ಧ ಅಕ್ಟೋಬರ್ 25ರಂದು ಪ್ರಕರಣ ದಾಖಲಾಗಿತ್ತು. ಹಿಂದೂ ಅಲ್ಪ ಸಂಖ್ಯಾತರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರು ಸೇರಿದಂತೆ ಹಲವರು ಬಾಂಗ್ಲಾದೇಶದ ರಾಷ್ಟ್ರಧ್ವಜದ ಮೇಲೆ ಕೇಸರಿ ಧ್ವಜ ಏರಿಸಿದ್ದರು ಎಂದು ಹೇಳಲಾಗಿದೆ. ಹೀಗಾಗಿ ದೇಶದ್ರೋಹದ ಪ್ರಕರಣ ದಾಖಲಾಗಿದೆ.

ಜಾಮೀನು ನಿರಾಕರಣೆಗೆ ಬೇಸರ

ರೈಟ್ಸ್‌ ಆಂಡ್‌ ರಿಸ್ಕ್‌ ಅನಾಲಿಸಿಸ್‌ ಗ್ರೂಪ್‌ನ ಸುಹಾಸ್‌ ಚಕ್ಮಾ ಅವರು ನವದೆಹಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರನ್ನು ಹತ್ತಿಕ್ಕಲು ಮತ್ತು ಅವರ ಪ್ರಜಾಪ್ರಭುತ್ವ ಹಕ್ಕುಗಳನ್ನು ಕೇಳದಂತೆ ಪ್ರಯತ್ನತಡೆಯಲಾಗುತ್ತಿದೆ ಎಂದು ಹೇಳಿದ್ದಾರೆ. 

Tags:    

Similar News