
ಸಾಂದರ್ಭಿಕ ಚಿತ್ರ
ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಆರ್‌ಬಿಐನಲ್ಲಿದೆ ಬಂಪರ್ ಸಂಬಳದ ಕೆಲಸ: ಇಂದೇ ಅರ್ಜಿ ಸಲ್ಲಿಸಿ
ಬೆಂಗಳೂರು, ಕಾನ್ಪುರ, ಮುಂಬೈ, ದೆಹಲಿ ಮತ್ತು ಕೋಲ್ಕತ್ತಾ ಸೇರಿದಂತೆ ದೇಶದ ವಿವಿಧ ಕಚೇರಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆ. 4 ಕೊನೆಯ ದಿನಾಂಕವಾಗಿದೆ.
ರಿಸರ್ವ್ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಕನಸು ಹೊಂದಿರುವ ಉದ್ಯೋಗಾಂಕ್ಷಿಗಳಿಗೆ ಆರ್‌ಬಿಐ ಸುವರ್ಣ ಆವಕಾಶ ನೀಡಿದ್ದು, ಬ್ಯಾಂಕ್‌ನಲ್ಲಿ ಖಾಲಿ ಇರುವ 572 ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಬೆಂಗಳೂರು, ಕಾನ್ಪುರ, ಮುಂಬೈ, ದೆಹಲಿ ಮತ್ತು ಕೋಲ್ಕತ್ತಾ ಸೇರಿದಂತೆ ದೇಶದ ವಿವಿಧ ಕಚೇರಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಫೆ. 4 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಯಾವುದೇ ಸಂದರ್ಶನವಿಲ್ಲ. ಕಚೇರಿವಾರು ಇರುವ ಖಾಲಿ ಹುದ್ದೆಗಳು, ಅರ್ಹತೆ, ಪರೀಕ್ಷಾ ಮಾದರಿ ಮತ್ತು ನೇರ ಅರ್ಜಿ ಲಿಂಕ್‌ಗಾಗಿ ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಆರ್‌ಬಿಐ ತಿಳಿಸಿದೆ.
ಆರ್‌ಬಿಐನ ವಿವಿಧ ಪ್ರಾದೇಶಿಕ ಕಚೇರಿಗಳಲ್ಲಿನ 572 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರೂ, ಒಂದು ಕಚೇರಿಯಲ್ಲಿ ಮಾತ್ರ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಮತ್ತು ಆ ಪ್ರದೇಶದ ಸ್ಥಳೀಯ ಭಾಷೆಯನ್ನು ತಿಳಿದಿರಬೇಕಾಗಿರುವುದು ಕಡ್ಡಾಯವಾಗಿದೆ.
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಯು ನೇಮಕಾತಿ ಕಚೇರಿಯ ಪ್ರಾದೇಶಿಕ ವ್ಯಾಪ್ತಿಗೆ ಬರುವ ಮಾನ್ಯತೆ ಪಡೆದ ಮಂಡಳಿ, ರಾಜ್ಯ ಅಥವಾ ಕೇಂದ್ರಾಡಳಿತ ಸಂಸ್ಥೆಯಿಂದ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಪದವೀಧರರು ಮತ್ತು ಹೆಚ್ಚಿನ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಭಾಷೆಯಲ್ಲಿ ಪ್ರಾವೀಣ್ಯತೆ ಕಡ್ಡಾಯವಾಗಿದ್ದ, ಓದುವುದು, ಬರೆಯುವುದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಳಿಗೆ 5 ವರ್ಷಗಳು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ ವಿಲಚೇತನರು, ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರಿಗೆ 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವೇತನ ಮತ್ತು ಭತ್ಯೆ
ಸರ್ಕಾರಿ ವಲಯದಲ್ಲಿ ಆರಂಭಿಕ ಹಂತದ ಹುದ್ದೆಗಳಿಗೆ ಆರ್‌ಬಿಐ ಅತ್ಯುತ್ತಮ ವೇತನ ಪ್ಯಾಕೇಜ್ ನೀಡುತ್ತಿದ್ದು, ತಿಂಗಳಿಗೆ 24,250 ರೂ. ಮೂಲವೇತನ ನಿಗದಿಪಡಿಸಲಾಗಿದೆ. ತುಟ್ಟಿ ಭತ್ಯೆ, ಗ್ರೇಡ್ ಭತ್ಯ ಸೇರಿದಂತೆ 46,029 ರೂ. ಸಂಬಳ ದೊರಕಲಿದ್ದು, ಬ್ಯಾಂಕಿನ ವಸತಿ ಅಥವಾ ಮನೆ ಬಾಡಿಗೆ ಭತ್ಯೆ ಶೇ.15 ಭತ್ಯೆ, ವೈದ್ಯಕೀಯ ಮರುಪಾವತಿ, ಶಿಕ್ಷಣ ವೆಚ್ಚಗಳು, ಪುಸ್ತಕ ಅನುದಾನ ಸೇರಿದಂತೆ ಇತ್ಯಾದಿ ಸೇರಿದೆ. ವಸತಿ, ಕಾರು, ಶಿಕ್ಷಣ, ರಿಯಾಯಿತಿ ದರದಲ್ಲಿ ವೈಯಕ್ತಿಕ ಅಗತ್ಯಗಳಿಗೆ ಸಾಲಗಳು ದೊರೆಯಲಿವೆ.
ಲಿಖಿತ ಪರೀಕ್ಷೆ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಫೆ.28 ಹಾಗೂ ಮಾರ್ಚ್ 1ರಂದು ಪರೀಕ್ಷೆ ನಡೆಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ. ಪರೀಕ್ಷೆಯೂ ಕಂಪ್ಯೂಟರ್ ಆಧಾರಿತವಾಗಿದ್ದು, ತಾರ್ಕಿಕತೆ, 30 ಪ್ರಶ್ನೆಗಳು, ಸಾಮಾನ್ಯ ಇಂಗ್ಲಿಷ್ 30 ಪ್ರಶ್ನೆಗಳು, ಸಾಮಾನ್ಯ ಜ್ಞಾನ 30 ಪ್ರಶ್ನೆಗಳು, ಸಂಖ್ಯಾತ್ಮಕ ಸಾಮರ್ಥ್ಯ 30 ಪ್ರಶ್ನೆಗಳು ಸೇರಿದಂತೆ ಒಟ್ಟು 120 ಪ್ರಶ್ನೆಗಳಿಗೆ 120 ಅಂಕಗಳು ನಿಗದಿಪಡಿಸಲಾಗಿದ್ದು, 90 ನಿಮಿಷಗಳ ಸಮಯ ನೀಡಲಾಗಿದೆ. ತಪ್ಪು ಉತ್ತರಗಳಿಗೆ 0.25 ಋಣಾತ್ಮಕ ಅಂಕಗಳನ್ನು ಕಿಡಿತಗೊಳಿಸಲಾಗವುದು ಎಂದು ತಿಳಿಸಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ
* ಆರ್‌ಬಿಐನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ: “RBI ಕಚೇರಿ ಪರಿಚಾರಕ ನೇಮಕಾತಿ 2026” ಗಾಗಿ ಕೆಳಗೆ ನೀಡಲಾದ ನಿರ್ದಿಷ್ಟ ಲಿಂಕ್ ಅನ್ನು ಬಳಸಿ.
* “ಹೊಸ ನೋಂದಣಿ” ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, ಸಂಪರ್ಕ ವಿವರಗಳು ಮತ್ತು ಇಮೇಲ್ ಅನ್ನು ನಮೂದಿಸಿ. ತಾತ್ಕಾಲಿಕ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ಗಮನಿಸಿ.
* ಅರ್ಜಿಯನ್ನು ಭರ್ತಿ ಮಾಡಿ, ಲಾಗಿನ್ ಮಾಡಿ ಮತ್ತು ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆಗಳು ಮತ್ತು ಕಚೇರಿ ಆದ್ಯತೆಯನ್ನು ಭರ್ತಿ ಮಾಡಿ.
* ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಫೋಟೋ ಹಾಗೂ ಬಿಳಿ ಹಾಳೆಯ ಮೇಲೆ ಎಡ ಹೆಬ್ಬೆರಳಿನ ಗುರುತು ಹಾಕಿ ಕೈಬರಹದ ಸ್ವಯಂ ಘೋಷಣೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

