Wayanad Landslide| ವಯನಾಡಿನಲ್ಲಿ ಸರಣಿ ಭೂಕುಸಿತ; 110 ಸಾವು,  128 ಮಂದಿಗೆ ಗಾಯ, 500 ಕುಟುಂಬ ಸಂಪರ್ಕ ಕಡಿತ
x

Wayanad Landslide| ವಯನಾಡಿನಲ್ಲಿ ಸರಣಿ ಭೂಕುಸಿತ; 110 ಸಾವು, 128 ಮಂದಿಗೆ ಗಾಯ, 500 ಕುಟುಂಬ ಸಂಪರ್ಕ ಕಡಿತ


ಮಂಗಳವಾರ ಮುಂಜಾವ ಭಾರೀ ಮಳೆಯ ನಡುವೆ ಕೇರಳದ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶವಾದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿ ಭಾರೀ ಭೂ ಕುಸಿತಗಳಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 110 ಜನರು ಸಾವನ್ನಪ್ಪಿದ್ದಾರೆ ಮತ್ತು ಸುತ್ತುಮುತ್ತಲಿನ ಸುಮಾರು 500 ಕುಟುಂಬಗಳ ಸಂಪರ್ಕ ಕಡಿದುಹೋಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ತೊಂಡರ್ನಾಡ್ ಗ್ರಾಮದಲ್ಲಿ ವಾಸಿಸುತ್ತಿದ್ದ ನೇಪಾಳಿ ಕುಟುಂಬದ ಒಂದು ವರ್ಷದ ಮಗು ಭೂಕುಸಿತದಲ್ಲಿ ಸಾವನ್ನಪ್ಪಿದೆ ಎಂದು ವಯನಾಡ್ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. ಮನೋರಮಾ ನ್ಯೂಸ್ ಪ್ರಕಾರ, ಮೆಪ್ಪಾಡಿ, ಮುಂಡಕ್ಕೈ ಪಟ್ಟಣ ಮತ್ತು ಚೂರಾಲ್ ಮಾಳ ಬಳಿ ಸಂಭವಿಸಿದ ಭೂಕುಸಿತದಿಂದ 30 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲವಾರು ಭೂಕುಸಿತಗಳು

ಮಂಗಳವಾರ ಮುಂಜಾವ ಗಂಟೆ ಸುಮಾರಿಗೆ ಮುಂಡಕ್ಕೈ ಟೌನ್‌ನಲ್ಲಿ ಮೊದಲ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ, ಆದರೆ ಎರಡನೆಯದು ಮೂರು ಗಂಟೆಗಳ ನಂತರ, ಶಿಬಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಚೂರಲ್ ಮಾಲಾ ಶಾಲೆಯಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಅಪ್ಪಳಿಸಿತು.

ಚೂರಾಲ್ ಮಾಲಾ ಪಟ್ಟಣದಲ್ಲಿ ಸೇತುವೆ ಕುಸಿದ ನಂತರ, ಸುಮಾರು 500 ಕುಟುಂಬಗಳು ಸಂಪರ್ಕ ಕಡಿತಗೊಂಡಿವೆ ಎಂದು ಹೇಳಲಾಗುತ್ತದೆ ಮತ್ತು ಇದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ವರದಿಯಾಗಿದೆ, ಏಕೆಂದರೆ ಮುಂಡಕ್ಕೈನಲ್ಲಿನ ಅಟ್ಟಮಲಕ್ಕೆ ಸೇತುವೆಯು ಏಕೈಕ ಸಂಪರ್ಕವಾಗಿದೆ, ಅಲ್ಲಿ ಬೆಳಿಗ್ಗೆ ಭೂಕುಸಿತ ಸಂಭವಿಸಿದೆ.

ಈ ನಡುವೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಭೂಕುಸಿತವಾದ ಪ್ರದೇಶಕ್ಕೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ. ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ವಯನಾಡ್‌ಗೆ ತೆರಳುತ್ತಿದೆ.

ಕೆಎಸ್‌ಡಿಎಂಎ ಫೇಸ್‌ಬುಕ್ ಪೋಸ್ಟ್‌ನ ಪ್ರಕಾರ, ಕಣ್ಣೂರು ರಕ್ಷಣಾ ಡಿಕ್ಯೂರಿಟಿ ಕಾರ್ಪೊರೇಷನ್‌ಗಳ ಎರಡು ತಂಡಗಳಿಗೆ ರಕ್ಷಣಾ ಕಾರ್ಯಗಳಲ್ಲಿ ಸಹಾಯ ಮಾಡಲು ವಯನಾಡ್‌ಗೆ ತೆರಳಲು ಸೂಚನೆ ನೀಡಲಾಗಿದೆ.ಎಲ್ಲಾ ಸರ್ಕಾರಿ ಸಂಸ್ಥೆಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಸಂತ್ರಸ್ತ ಪ್ರದೇಶಗಳ ಸ್ಥಳೀಯರು ಹೇಳುವಂತೆ ಹಲವರು ಸಿಕ್ಕಿಬಿದ್ದಿರುವ ಆತಂಕವಿದೆ. ಭಾರೀ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್ ನಿಯಂತ್ರಣ ಕೊಠಡಿಯನ್ನು ತೆರೆದಿದೆ ಮತ್ತು ತುರ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 9656938689 ಮತ್ತು 8086010833 ನ್ನು ನೀಡಿದೆ. ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಎಂಐ-17 ಮತ್ತು ಎಎಲ್‌ಹೆಚ್ ಸೂಲೂರಿನಿಂದ ಬೆಳಗ್ಗೆ 7.30ಕ್ಕೆ ಹೊರಡಲಿವೆ ಎಂದು ಮೂಲಗಳು ತಿಳಿಸಿವೆ.

ಕ್ಷಣ ಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ: https://thefederal.com/category/states/south/kerala/kerala-massive-landslides-hit-wayanad-at-least-7-dead-hundreds-trapped-೧೩೬೦೭೩

Live Updates

  • 30 July 2024 5:58 PM IST

    ವಯನಾಡ್‌ ಭೂಕುಸಿತಕ್ಕೆ ಅರಬ್ಬಿ ಸಮುದ್ರದ ಬಿಸಿಯಾಗುವಿಕೆ ಕಾರಣ: ಹವಾಮಾನ ವಿಜ್ಞಾನಿ

    ಅರಬ್ಬಿ ಸಮುದ್ರದ ಬಿಸಿಯಾಗುವಿಕೆಯಿಂದ ಸಾಂದ್ರ ಮೋಡಗಳ ವ್ಯವಸ್ಥೆ ಸೃಷ್ಟಿಯಾಗುತ್ತಿದ್ದು, ಇದರಿಂದ ಕೇರಳದಲ್ಲಿ ಕಡಿಮೆ ಅವಧಿಯಲ್ಲಿ ಭಾರಿ ಮಳೆಯಾಗುತ್ತಿದೆ ಹಾಗೂ ಭೂಕುಸಿತದ ಸಂಭವನೀಯತೆಯನ್ನು ಹೆಚ್ಚಿಸುತ್ತಿದೆ ಎಂದು ಹವಾಮಾನ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

    ಕೊಚ್ಚಿ ವಿಶ್ವವಿದ್ಯಾನಿಲಯದ ಅಟ್ಮಾಸ್ಪೆರಿಕ್‌ ರಡಾರ್‌ ರಿಸರ್ಚ್‌ ಉನ್ನತ ಕೇಂದ್ರದ ಹಿರಿಯ ವಿಜ್ಞಾನಿ ಎಸ್. ಅಭಿಲಾಷ್‌ ಮಾತನಾಡಿ, ಕಾಸರಗೋಡು, ಕಣ್ಣೂರು, ವಯನಾಡ್‌, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲು ಕಳೆದ ಎರಡು ವಾರದಿಂದ ಕೊಂಕಣ ಪ್ರದೇಶವನ್ನು ಪ್ರಭಾವಿಸಿದ ಸಕ್ರಿಯ ಮುಂಗಾರು ಸಮುದ್ರದ ಕುಳಿಗಳು ಕಾರಣ ಎಂದು ಹೇಳಿದರು. ಎರಡು ವಾರ ಮಳೆ ಬಿದ್ದಿರುವುದರಿಂದ ಭೂಮಿ ನೆನೆದು ಸಂತೃಪ್ತವಾಗಿದೆ. ಅರಬ್ಬಿ ಸಮುದ್ರದ ಲ್ಲಿ ಸೋಮವಾರ ರಚನೆಯಾದ ಸಾಂದ್ರ ಮೋಡ ವ್ಯವಸ್ಥೆಯಿಂದ ವಯನಾಡ್‌, ಕಲ್ಲಿಕೋಟೆ, ಮಲಪ್ಪುರಂ ಮತ್ತು ಕಣ್ಣೂರಿನಲ್ಲಿ ಭಾರಿ ಮಳೆಯಾಗಿದೆ. ಮೋಡಗಳು ಬಹಳ ಸಾಂದ್ರವಾಗಿದ್ದು, ಈಂತಹ ಮೋಡಗಳೇ 2029ರಲ್ಲಿ ಕೇರಳದಲ್ಲಿ ಮಹಾ ಪ್ರವಾಹಕ್ಕೆ ಕಾರಣವಾಗಿತ್ತು ಎಂದು ಹೇಳಿದರು.

    2019ರಲ್ಲಿ ಆದಂತೆ ಕೆಲವೊಮ್ಮೆ ಈ ಸಾಂದ್ರ ಮೋಡ ವ್ಯವಸ್ಥೆ ಭೂಮಿಯನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಈ ಪ್ರವೃತ್ತಿಯನ್ನು ಅರಬ್ಬಿ ಸಮುದ್ರದಲ್ಲಿ ವಿಜ್ಞಾನಿಗಳು ಗಮನಿಸಿದ್ದಾರೆ ಎಂದರು. ಕೇರಳ ಸೇರಿದಂತೆ ಈ ಪ್ರದೇಶದಲ್ಲಿ ಅರೇಬಿಯನ್‌ ಸಮುದ್ರ ಬಿಸಿಯಾಗುತ್ತಿದ್ದು, ಇದರಿಂದಾಗಿ ವಾತಾವರಣ ಅಸ್ಥಿರವಾಗುತ್ತಿದೆ. ವಾತಾವರಣದಲ್ಲಿನ ಅಸ್ಥಿರತೆಯಿಂದ ಸಾಂದ್ರವಾದ ಮೋಡಗಳು ಸೃಷ್ಟಿಯಾಗುತ್ತಿವೆ. ಈಮೊದಲು ಉತ್ತರ ಕೊಂಕಣದಲ್ಲಿ, ಮಂಗಳೂರಿನ ಉತ್ತರ ಭಾಗದಲ್ಲಿ, ತೀರ ಸಾಮಾನ್ಯವಾಗಿತ್ತು. ಹವಾಮಾನ ಬದಲಾವಣೆಯಿಂದ ಸಾಂದ್ರ ಮೋಡಗಳು ದಕ್ಷಿಣದೆಡೆಗೆ ಧಾವಿಸುತ್ತಿದ್ದು, ಭಾರಿ ಮಳೆಗೆ ಕಾರಣವಾಗುತ್ತಿದೆ ಎಂದು ಹೇಳಿದರು.

  • 30 July 2024 5:35 PM IST

    ಕೇರಳದಾದ್ಯಂತ 118 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ: ವಿಜಯನ್

    ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದೇವೆ. ಇನ್ನೂ ಅನೇಕ ಜನರು ಅವಶೇಷಗಳಡಿ ಸಿಲುಕಿದ್ದಾರೆ. ನಾವು ವಯನಾಡಿನಲ್ಲಿ 45 ಪರಿಹಾರ ಶಿಬಿರಗಳನ್ನು ಮತ್ತು ರಾಜ್ಯದಾದ್ಯಂತ ಒಟ್ಟು 118 ಶಿಬಿರಗಳನ್ನು ತೆರೆದಿದ್ದೇವೆ, 5,531 ಜನರಿಗೆ ವಸತಿ ಕಲ್ಪಿಸಲಾಗಿದೆ. ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಮತ್ತು ಪೊಲೀಸರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಸೇನೆ ಮತ್ತು ನೌಕಾಪಡೆಯ ವಿವಿಧ ವಿಭಾಗಗಳು ರಕ್ಷಣಾ ಕಾರ್ಯಾಚರಣೆಯನ್ನು ಸಮನ್ವಯಗೊಳಿಸುತ್ತಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್

    "ವಯನಾಡಿನಲ್ಲಿ ಅಗ್ನಿಶಾಮಕ ದಳದ 321 ಸದಸ್ಯರನ್ನು ನಿಯೋಜಿಸಲಾಗಿದೆ. ಸೇನೆಯ ಸೇವೆಯೂ ಲಭ್ಯವಾಗಿದೆ. 60 ಸದಸ್ಯರ ಎನ್‌ಡಿಆರ್‌ಎಫ್ ತಂಡ ವಯನಾಡ್ ತಲುಪಿದೆ ಮತ್ತು ಬೆಂಗಳೂರಿನ 89 ಸದಸ್ಯರ ತಂಡವು ದಾರಿಯಲ್ಲಿದೆ. ಪ್ರಧಾನಿ ಮತ್ತು ರಾಹುಲ್ ಗಾಂಧಿ ಮತ್ತು ವಿವಿಧ ಪಕ್ಷದ ನಾಯಕರು ತಮ್ಮ ಸಹಾಯವನ್ನು ನೀಡಿದ್ದಾರೆ, ಈ ವಿಪತ್ತು ಬಿಕ್ಕಟ್ಟನ್ನು ಪರಿಹರಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ನಮಗೆ ಭರವಸೆ ನೀಡಿದ್ದಾರೆ ಎಂದು ವಿಜಯನ್‌ ತಿಳಿಸಿದರು.

  • 30 July 2024 5:30 PM IST

  • 30 July 2024 5:29 PM IST

    ಹೃದಯ ವಿದ್ರಾವಕ ದುರಂತ, ಇದುವರೆಗೆ 93 ಮೃತದೇಹಗಳು ಪತ್ತೆ: ಪಿಣರಾಯಿ ವಿಜಯನ್

  • 30 July 2024 5:27 PM IST

    ವಯನಾಡಿನ ಸುಲ್ತಾನ್ ಬ್ಯಾಟರಿಯಲ್ಲಿರುವ ಬ್ಲಡ್ ಬ್ಯಾಂಕ್ ಮುಂದೆ ರಕ್ತದಾನ ಮಾಡಲು ಜನರು ಸಾಲುಗಟ್ಟಿ ನಿಂತಿದ್ದಾರೆ.

  • 30 July 2024 5:10 PM IST

    ನೆರೆಯ ಕೋಳಿಕ್ಕೋಡ್ ಜಿಲ್ಲೆಯಲ್ಲಿ ಭೂಕುಸಿತ

    ನಾಪತ್ತೆಯಾದ ವ್ಯಕ್ತಿಗಳನ್ನು ಹುಡುಕಲು ಎನ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ ಎಂದು ಕೋಳಿಕ್ಕೋಡ್ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

    ಮಾರುತೊಂಗರ ಗ್ರಾಮ ಮತ್ತು ಕೈತಪ್ಪೊಯಿಲ್-ಅನೋರಮ್ಮಲ್ ರಸ್ತೆಯಲ್ಲಿ ಭೂಕುಸಿತ ಮತ್ತು ಮಣ್ಣು ಕುಸಿತ ವರದಿಯಾಗಿದೆ. ಮಲಯಂಗಾಡು ಸೇತುವೆ ಕೊಚ್ಚಿ ಹೋಗಿದ್ದು, ಸುಮಾರು 15 ಕುಟುಂಬಗಳು ಸಂಪರ್ಕ ಕಡಿತಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

    ಇಲ್ಲಿನ ನದಿ ದಡದಲ್ಲಿ ವಾಸಿಸುತ್ತಿದ್ದವರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದ್ದು, ಎನ್‌ಡಿಆರ್‌ಎಫ್ ತಂಡದ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    ಸತತ ಧಾರಾಕಾರ ಮಳೆಯಿಂದ ನೀರಿನ ಮಟ್ಟ ಹೆಚ್ಚಾದ ಕಾರಣ ಇಲ್ಲಿನ ಕಕ್ಕಯಂ ಅಣೆಕಟ್ಟಿನ ಶೆಟರ್‌ಗಳನ್ನು ಏರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕುಟ್ಟಿಯಾಡಿ ನದಿಯ ದಡದಲ್ಲಿ ವಾಸಿಸುವವರು ಹೆಚ್ಚಿನ ನಿಗಾ ವಹಿಸುವಂತೆ ಒತ್ತಾಯಿಸಿದರು.

    ಕುಟ್ಟಿಯಾಡಿ ನದಿಯ ಜೊತೆಗೆ ಜಿಲ್ಲೆಯ ಚಾಲಿಯಾರ್, ಚೆರುಪುಳ ಮತ್ತು ಮಹಿಪುಳ ಸೇರಿದಂತೆ ವಿವಿಧ ಜಲಮೂಲಗಳಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟಕ್ಕೆ ಏರಿದೆ.

    ಪ್ರವಾಸಿ ಕೇಂದ್ರಗಳಿಗೆ ಪ್ರವೇಶ ನಿಷೇಧಿಸಲಾಗಿದೆ ಮತ್ತು ಜಿಲ್ಲೆಯಲ್ಲಿ ಕಲ್ಲುಗಣಿಗಾರಿಕೆ ಮತ್ತು ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಲು ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • 30 July 2024 4:59 PM IST

    ವಾಯುಸೇನೆ, ಎನ್‌ಡಿ ಆರ್‌ ಎಫ್‌ ಸೇರಿದಂತೆ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಹಲವು ಮಂದಿ ಮಣ್ಣಿನ ಅಡಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಭರದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ.

  • 30 July 2024 4:49 PM IST

    ಸಂತಾಪ ಸೂಚಿಸಿದ ಪ್ರಿಯಾಂಕಾ ಗಾಂಧಿ:

    ಮೆಪ್ಪಾಡಿ ಬಳಿ ಭಾರೀ ಭೂಕುಸಿತದಿಂದ ಉಂಟಾದ ವಿನಾಶವನ್ನು ನೋಡಿ ತುಂಬಾ ದುಃಖವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ʻಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲರಿಗೂ ನನ್ನ ಸಂತಾಪ ಮತ್ತು ಪ್ರಾರ್ಥನೆಗಳು... ಎಲ್ಲರನ್ನೂ ಆದಷ್ಟು ಬೇಗ ಸುರಕ್ಷಿತವಾಗಿ ಕರೆತರುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತಗೊಳಿಸಬೇಕೆಂದು ಒತ್ತಾಯಿಸುತ್ತೇನೆ. ಯುಡಿಎಫ್ ಕಾರ್ಯಕರ್ತರು ತಮ್ಮಿಂದಾದ ಎಲ್ಲ ನೆರವು ನೀಡಬೇಕೆಂದು ವಿನಂತಿಸುತ್ತೇನೆʼʼ ಎಂದು ಬರೆದಿದ್ದಾರೆ.

  • 30 July 2024 4:45 PM IST

    ದಟ್ಟವಾದ ಮಂಜು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ..

  • 30 July 2024 4:43 PM IST

Read More
Next Story