Wayanad Landslide| ವಯನಾಡಿನಲ್ಲಿ ಸರಣಿ ಭೂಕುಸಿತ; 110 ಸಾವು, 128 ಮಂದಿಗೆ ಗಾಯ, 500 ಕುಟುಂಬ ಸಂಪರ್ಕ ಕಡಿತ
ಮಂಗಳವಾರ ಮುಂಜಾವ ಭಾರೀ ಮಳೆಯ ನಡುವೆ ಕೇರಳದ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶವಾದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿ ಭಾರೀ ಭೂ ಕುಸಿತಗಳಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 110 ಜನರು ಸಾವನ್ನಪ್ಪಿದ್ದಾರೆ ಮತ್ತು ಸುತ್ತುಮುತ್ತಲಿನ ಸುಮಾರು 500 ಕುಟುಂಬಗಳ ಸಂಪರ್ಕ ಕಡಿದುಹೋಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ತೊಂಡರ್ನಾಡ್ ಗ್ರಾಮದಲ್ಲಿ ವಾಸಿಸುತ್ತಿದ್ದ ನೇಪಾಳಿ ಕುಟುಂಬದ ಒಂದು ವರ್ಷದ ಮಗು ಭೂಕುಸಿತದಲ್ಲಿ ಸಾವನ್ನಪ್ಪಿದೆ ಎಂದು ವಯನಾಡ್ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. ಮನೋರಮಾ ನ್ಯೂಸ್ ಪ್ರಕಾರ, ಮೆಪ್ಪಾಡಿ, ಮುಂಡಕ್ಕೈ ಪಟ್ಟಣ ಮತ್ತು ಚೂರಾಲ್ ಮಾಳ ಬಳಿ ಸಂಭವಿಸಿದ ಭೂಕುಸಿತದಿಂದ 30 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲವಾರು ಭೂಕುಸಿತಗಳು
ಮಂಗಳವಾರ ಮುಂಜಾವ ಗಂಟೆ ಸುಮಾರಿಗೆ ಮುಂಡಕ್ಕೈ ಟೌನ್‌ನಲ್ಲಿ ಮೊದಲ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ, ಆದರೆ ಎರಡನೆಯದು ಮೂರು ಗಂಟೆಗಳ ನಂತರ, ಶಿಬಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಚೂರಲ್ ಮಾಲಾ ಶಾಲೆಯಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಅಪ್ಪಳಿಸಿತು.
ಚೂರಾಲ್ ಮಾಲಾ ಪಟ್ಟಣದಲ್ಲಿ ಸೇತುವೆ ಕುಸಿದ ನಂತರ, ಸುಮಾರು 500 ಕುಟುಂಬಗಳು ಸಂಪರ್ಕ ಕಡಿತಗೊಂಡಿವೆ ಎಂದು ಹೇಳಲಾಗುತ್ತದೆ ಮತ್ತು ಇದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ವರದಿಯಾಗಿದೆ, ಏಕೆಂದರೆ ಮುಂಡಕ್ಕೈನಲ್ಲಿನ ಅಟ್ಟಮಲಕ್ಕೆ ಸೇತುವೆಯು ಏಕೈಕ ಸಂಪರ್ಕವಾಗಿದೆ, ಅಲ್ಲಿ ಬೆಳಿಗ್ಗೆ ಭೂಕುಸಿತ ಸಂಭವಿಸಿದೆ.
ಈ ನಡುವೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಭೂಕುಸಿತವಾದ ಪ್ರದೇಶಕ್ಕೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ. ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ವಯನಾಡ್‌ಗೆ ತೆರಳುತ್ತಿದೆ.
ಕೆಎಸ್‌ಡಿಎಂಎ ಫೇಸ್‌ಬುಕ್ ಪೋಸ್ಟ್‌ನ ಪ್ರಕಾರ, ಕಣ್ಣೂರು ರಕ್ಷಣಾ ಡಿಕ್ಯೂರಿಟಿ ಕಾರ್ಪೊರೇಷನ್‌ಗಳ ಎರಡು ತಂಡಗಳಿಗೆ ರಕ್ಷಣಾ ಕಾರ್ಯಗಳಲ್ಲಿ ಸಹಾಯ ಮಾಡಲು ವಯನಾಡ್‌ಗೆ ತೆರಳಲು ಸೂಚನೆ ನೀಡಲಾಗಿದೆ.ಎಲ್ಲಾ ಸರ್ಕಾರಿ ಸಂಸ್ಥೆಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಸಂತ್ರಸ್ತ ಪ್ರದೇಶಗಳ ಸ್ಥಳೀಯರು ಹೇಳುವಂತೆ ಹಲವರು ಸಿಕ್ಕಿಬಿದ್ದಿರುವ ಆತಂಕವಿದೆ. ಭಾರೀ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ ನಿಯಂತ್ರಣ ಕೊಠಡಿಯನ್ನು ತೆರೆದಿದೆ ಮತ್ತು ತುರ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 9656938689 ಮತ್ತು 8086010833 ನ್ನು ನೀಡಿದೆ. ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಎಂಐ-17 ಮತ್ತು ಎಎಲ್‌ಹೆಚ್ ಸೂಲೂರಿನಿಂದ ಬೆಳಗ್ಗೆ 7.30ಕ್ಕೆ ಹೊರಡಲಿವೆ ಎಂದು ಮೂಲಗಳು ತಿಳಿಸಿವೆ.
Live Updates
- 30 July 2024 4:37 PM IST
ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಸಂಪೂರ್ಣ ಬೆಂಬಲವಾಗಿರುತ್ತೇವೆ: ಪಿಣರಾಯಿ ವಿಜಯನ್‌ಗೆ ಸ್ಟ್ಯಾಲಿನ್ ಭರವಸೆ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿ, ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ರಾಜ್ಯದ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ.
ಪರಿಹಾರ ಚಟುವಟಿಕೆಗಳಿಗೆ 5 ಕೋಟಿ ರೂ.ಬಿಡುಗಡೆ ಮಾಡುವಂತೆ ತಮಿಳುನಾಡು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಮತ್ತು ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ನೆರವಾಗಲು ರಕ್ಷಣಾ ತಂಡವನ್ನು ಕೇರಳಕ್ಕೆ ಕಳುಹಿಸಲು ಅಧಿಕಾರಿಗಳಿಗೆ ಸ್ಟ್ಯಾಲಿನ್ ಸೂಚಿಸಿದರು.
ತಮಿಳುನಾಡು ತಂಡವು ರಾಜ್ಯ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ 20 ಸಿಬ್ಬಂದಿ, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ 20 ಮತ್ತು 10 ವೈದ್ಯರು ಮತ್ತು ದಾದಿಯರನ್ನು ಒಳಗೊಂಡಿರುತ್ತದೆ. ಅವರು ಕೇರಳ ರಕ್ಷಣಾ ತಂಡಗಳೊಂದಿಗೆ ಕೆಲಸ ಮಾಡಲಿದ್ದು, ತಕ್ಷಣ ನೆರೆಯ ರಾಜ್ಯಕ್ಕೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
- 30 July 2024 4:31 PM IST
ಕೇರಳಕ್ಕೆ ಅಗತ್ಯವಿರುವ ಎಲ್ಲ ನೆರವು ಕರ್ನಾಟಕ ನೀಡಲಿದೆ: ಸಿದ್ದರಾಮಯ್ಯ
ಕೇರಳದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 90ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಕೇಳಿ ಆಘಾತವಾಯಿತು. ಇಂತಹ ಸಂಕಷ್ಟದ ಸಮಯದಲ್ಲಿ ನಾವು ನೆರೆಯ ಕೇರಳದ ಜನರೊಂದಿಗೆ ನಿಲ್ಲಲಿದ್ದೇವೆ. ನಮ್ಮ ಸರ್ಕಾರ ಕೇರಳಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡಲಿದೆ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
- 30 July 2024 4:25 PM IST
Evaluated the ongoing relief and rescue operations at Chooralmala, Wayanad, following the severe landslide, in a visit to the @KeralaSDMA office. pic.twitter.com/WjnHSYOIYv
— Pinarayi Vijayan (@pinarayivijayan) July 30, 2024