Wayanad Landslide| ವಯನಾಡಿನಲ್ಲಿ ಸರಣಿ ಭೂಕುಸಿತ; 110 ಸಾವು,  128 ಮಂದಿಗೆ ಗಾಯ, 500 ಕುಟುಂಬ ಸಂಪರ್ಕ ಕಡಿತ
x

Wayanad Landslide| ವಯನಾಡಿನಲ್ಲಿ ಸರಣಿ ಭೂಕುಸಿತ; 110 ಸಾವು, 128 ಮಂದಿಗೆ ಗಾಯ, 500 ಕುಟುಂಬ ಸಂಪರ್ಕ ಕಡಿತ


ಮಂಗಳವಾರ ಮುಂಜಾವ ಭಾರೀ ಮಳೆಯ ನಡುವೆ ಕೇರಳದ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶವಾದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿ ಭಾರೀ ಭೂ ಕುಸಿತಗಳಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 110 ಜನರು ಸಾವನ್ನಪ್ಪಿದ್ದಾರೆ ಮತ್ತು ಸುತ್ತುಮುತ್ತಲಿನ ಸುಮಾರು 500 ಕುಟುಂಬಗಳ ಸಂಪರ್ಕ ಕಡಿದುಹೋಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ತೊಂಡರ್ನಾಡ್ ಗ್ರಾಮದಲ್ಲಿ ವಾಸಿಸುತ್ತಿದ್ದ ನೇಪಾಳಿ ಕುಟುಂಬದ ಒಂದು ವರ್ಷದ ಮಗು ಭೂಕುಸಿತದಲ್ಲಿ ಸಾವನ್ನಪ್ಪಿದೆ ಎಂದು ವಯನಾಡ್ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. ಮನೋರಮಾ ನ್ಯೂಸ್ ಪ್ರಕಾರ, ಮೆಪ್ಪಾಡಿ, ಮುಂಡಕ್ಕೈ ಪಟ್ಟಣ ಮತ್ತು ಚೂರಾಲ್ ಮಾಳ ಬಳಿ ಸಂಭವಿಸಿದ ಭೂಕುಸಿತದಿಂದ 30 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲವಾರು ಭೂಕುಸಿತಗಳು

ಮಂಗಳವಾರ ಮುಂಜಾವ ಗಂಟೆ ಸುಮಾರಿಗೆ ಮುಂಡಕ್ಕೈ ಟೌನ್‌ನಲ್ಲಿ ಮೊದಲ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ, ಆದರೆ ಎರಡನೆಯದು ಮೂರು ಗಂಟೆಗಳ ನಂತರ, ಶಿಬಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಚೂರಲ್ ಮಾಲಾ ಶಾಲೆಯಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಅಪ್ಪಳಿಸಿತು.

ಚೂರಾಲ್ ಮಾಲಾ ಪಟ್ಟಣದಲ್ಲಿ ಸೇತುವೆ ಕುಸಿದ ನಂತರ, ಸುಮಾರು 500 ಕುಟುಂಬಗಳು ಸಂಪರ್ಕ ಕಡಿತಗೊಂಡಿವೆ ಎಂದು ಹೇಳಲಾಗುತ್ತದೆ ಮತ್ತು ಇದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ವರದಿಯಾಗಿದೆ, ಏಕೆಂದರೆ ಮುಂಡಕ್ಕೈನಲ್ಲಿನ ಅಟ್ಟಮಲಕ್ಕೆ ಸೇತುವೆಯು ಏಕೈಕ ಸಂಪರ್ಕವಾಗಿದೆ, ಅಲ್ಲಿ ಬೆಳಿಗ್ಗೆ ಭೂಕುಸಿತ ಸಂಭವಿಸಿದೆ.

ಈ ನಡುವೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಭೂಕುಸಿತವಾದ ಪ್ರದೇಶಕ್ಕೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಘಟನಾ ಸ್ಥಳದಲ್ಲಿ ನಿಯೋಜಿಸಲಾಗಿದೆ. ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ವಯನಾಡ್‌ಗೆ ತೆರಳುತ್ತಿದೆ.

ಕೆಎಸ್‌ಡಿಎಂಎ ಫೇಸ್‌ಬುಕ್ ಪೋಸ್ಟ್‌ನ ಪ್ರಕಾರ, ಕಣ್ಣೂರು ರಕ್ಷಣಾ ಡಿಕ್ಯೂರಿಟಿ ಕಾರ್ಪೊರೇಷನ್‌ಗಳ ಎರಡು ತಂಡಗಳಿಗೆ ರಕ್ಷಣಾ ಕಾರ್ಯಗಳಲ್ಲಿ ಸಹಾಯ ಮಾಡಲು ವಯನಾಡ್‌ಗೆ ತೆರಳಲು ಸೂಚನೆ ನೀಡಲಾಗಿದೆ.ಎಲ್ಲಾ ಸರ್ಕಾರಿ ಸಂಸ್ಥೆಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಸಂತ್ರಸ್ತ ಪ್ರದೇಶಗಳ ಸ್ಥಳೀಯರು ಹೇಳುವಂತೆ ಹಲವರು ಸಿಕ್ಕಿಬಿದ್ದಿರುವ ಆತಂಕವಿದೆ. ಭಾರೀ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್ ನಿಯಂತ್ರಣ ಕೊಠಡಿಯನ್ನು ತೆರೆದಿದೆ ಮತ್ತು ತುರ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 9656938689 ಮತ್ತು 8086010833 ನ್ನು ನೀಡಿದೆ. ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಎಂಐ-17 ಮತ್ತು ಎಎಲ್‌ಹೆಚ್ ಸೂಲೂರಿನಿಂದ ಬೆಳಗ್ಗೆ 7.30ಕ್ಕೆ ಹೊರಡಲಿವೆ ಎಂದು ಮೂಲಗಳು ತಿಳಿಸಿವೆ.

ಕ್ಷಣ ಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ: https://thefederal.com/category/states/south/kerala/kerala-massive-landslides-hit-wayanad-at-least-7-dead-hundreds-trapped-೧೩೬೦೭೩

Live Updates

  • 30 July 2024 2:02 PM GMT

    ಕೇರಳದ ಇತರ ಜಿಲ್ಲೆಗಳಲ್ಲೂ ಭಾರೀ ಮಳೆ: ನಾಳೆ ಸರ್ಕಾರಿ ರಜೆ

    ಭಾರೀ ಮಳೆಗೆ ಕೇರಳ ರಾಜ್ಯ ತತ್ತರಿಸಿ ಹೋಗಿದೆ. ಇತರೆ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುತ್ತಿದ್ದು, ಎಂಟು ಜಿಲ್ಲೆಗಳಿಗೆ ನಾಳೆ ಸರ್ಕಾರ ರಜೆ ಘೋಷಿಸಿದೆ.

    ಎಂಟು ಜಿಲ್ಲೆಗಳೆಂದರೆ:

    ಕಾಸರಗೋಡು

    ಪತ್ತನಂತಿಟ್ಟ

    ಕೋಯಿಕ್ಕೋಡ್

    ತ್ರಿಶೂರ್

    ಕಣ್ಣೂರು

    ಮಲಪ್ಪುರಂ

    ಎರ್ನಾಕುಲಂ

    ವಯನಾಡ್.

  • 30 July 2024 1:54 PM GMT

    ಕೇರಳದಲ್ಲಿ ಭೂಕುಸಿತ ಮುನ್ಸೂಚನೆಯ ಕಾರ್ಯವಿಧಾನ ದುರ್ಬಲವಾಗಿದೆ: ತಜ್ಞರ ಅಭಿಪ್ರಾಯ

    ಕೇರಳದಲ್ಲಿ ಸಂಭವಿಸಿದ ಸರಣಿ ಭೂಕುಸಿತದಲ್ಲಿ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ, ವಿಜ್ಞಾನಿಗಳು ಮತ್ತು ತಜ್ಞರು ಮಂಗಳವಾರ ಭೂಕುಸಿತ ಮುನ್ಸೂಚನೆಯ ಕಾರ್ಯವಿಧಾನ ದುರ್ಬಲವಾಗಿದೆ. ಹಾಗಾಗಿ ಸುರಕ್ಷಣೆಯ ಕಾರ್ಯ ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ.

    ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಮಾಧವನ್ ರಾಜೀವನ್ ಅವರು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ʻʻಹವಾಮಾನ ಇಲಾಖೆಯು ಅತಿ ಹೆಚ್ಚು ಮಳೆಯ ಬಗ್ಗೆ ಅಂದಾಜಿಸಬಹುದು, ಆದರೆ ಅದು ಭೂಕುಸಿತ ಆಗುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಭಾರೀ ಮಳೆಯು ಪ್ರತಿ ಬಾರಿಯೂ ಭೂಕುಸಿತಕ್ಕೆ ಕಾರಣವಾಗುವುದಿಲ್ಲ. ಭೂಕುಸಿತದ ಮುನ್ಸೂಚನೆಗಾಗಿ ನಮಗೆ ಪ್ರತ್ಯೇಕ ಕಾರ್ಯವಿಧಾನದ ಅಗತ್ಯವಿದೆ. ಇದು ಕಷ್ಟಕರವಾಗಿದೆ ಆದರೆ ಕಾರ್ಯಸಾಧ್ಯವಾಗಿದೆʼʼ ಎಂದು ತಿಳಿಸಿದರು.

    ಮಣ್ಣಿನ ರಚನೆ, ಮಣ್ಣಿನ ತೇವಾಂಶ ಮತ್ತು ಇಳಿಜಾರು ಸೇರಿದಂತೆ ಭೂಕುಸಿತಕ್ಕೆ ಕಾರಣವಾಗುತ್ತವೆ ಎನ್ನುವುದು ತಿಳಿದಿದೆ. ಈ ಎಲ್ಲಾ ಜ್ಞಾನವನ್ನು ಬಳಸಿಕೊಂಡು ಭೂಕುಸಿತದ ಮುನ್ಸೂಚನೆಯ ಕಾರ್ಯವಿಧಾನ ರೂಪಿಸಬಹುದು ಎಂದು ಅವರು ಹೇಳಿದರು.

    ʻʻನದಿ ಪ್ರವಾಹ ಬಂದಾಗ, ನಾವು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತೇವೆ. ಭಾರೀ ಮತ್ತು ನಿರಂತರ ಮಳೆಯಾದರೆ ನಾವು ಅದೇ ಕೆಲಸವನ್ನು ಮಾಡಬಹುದು ಆದರೆ ದುರದೃಷ್ಟವಶಾತ್, ನಾವು ಅದನ್ನು ಇನ್ನೂ ಮಾಡಿಲ್ಲ. ನಮ್ಮಲ್ಲಿ ಉತ್ತಮ ಸಾಮರ್ಥ್ಯವಿರುವ ವಿಜ್ಞಾನಿಗಳಿದ್ದಾರೆ. ನಾವು ಆ ಕೆಲಸವನ್ನು ಮಾಡಬೇಕಿದೆʼʼ ಎಂದು ರಾಜೀವನ್ ಹೇಳಿದರು.

    ಕೇರಳ ಇನ್‌ಸ್ಟಿಟ್ಯೂಟ್ ಆಫ್ ಲೋಕಲ್ ಅಡ್ಮಿನಿಸ್ಟ್ರೇಷನ್‌ನ ವಿಪತ್ತು ಅಪಾಯ ನಿರ್ವಹಣಾ ತಜ್ಞ ಶ್ರೀಕುಮಾರ್ಬ ಅವರು ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿ, ʻʻದಕ್ಷಿಣ ಕರಾವಳಿ ರಾಜ್ಯದ ದುರ್ಬಲವಾದ ಭೂಪ್ರದೇಶದಲ್ಲಿ ಭೂಕುಸಿತ ಉಂಟಾಗಲು ಎರಡು ಮೂರು ದಿನಗಳವರೆಗೆ 120 ಮಿಮೀಗಿಂತ ಹೆಚ್ಚಿನ ಮಳೆಯಾದರೆ ಸಾಕು, ಭೂಕುಸಿತವಾಗುತ್ತದೆʼʼ ಎಂದು ತಿಳಿಸಿದರು.

    ವಯನಾಡಿನಲ್ಲಿ ಭೂಕುಸಿತ ಸಂಭವಿಸುವ ಹಲವು ಪ್ರದೇಶಗಳಿವೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವುದೊಂದೇ ನಮ್ಮಿಂದ ಸಾಧ್ಯ. ಅಂತಹ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮುಂಗಾರು ಮಳೆಯ ಮನೆಗಳನ್ನು ಅಧಿಕಾರಿಗಳು ನಿರ್ಮಿಸಬೇಕು ಎಂದು ಶ್ರೀಕುಮಾರ್ ಹೇಳಿದರು.

  • 30 July 2024 1:12 PM GMT

    ಇನ್ನೂ 130 ಸೈನಿಕರು ವಯನಾಡ್‌ನತ್ತ..

    ಸುಮಾರು 130 ಸೈನಿಕರು ವಯನಾಡ್ ಕಡೆಗೆ ಸಾಗುತ್ತಿದ್ದಾರೆ. ಭಾರತೀಯ ವಾಯುಪಡೆಯ ವಿಮಾನದಿಂದ ಸಂಕಷ್ಟಕ್ಕೆ ಸಿಲುಕಿರುವವರನ್ನು ಏರ್‌ಲಿಫ್ಟ್ ಮಾಡಲಾಗುತ್ತದೆ.  ಕೇಂದ್ರ ರಕ್ಷಣಾ ಭದ್ರತಾ ದಳದ ಮುಖ್ಯಸ್ಥ ಕಣ್ಣೂರು ಅವರು ತಮ್ಮ 200 ಸೈನಿಕರೊಂದಿಗೆ ಈಗಾಗಲೇ ಘಟನಾ ಸ್ಥಳ ತಲುಪಿದ್ದಾರೆ. ಟೆರಿಟೋರಿಯಲ್ ಆರ್ಮಿ 122 ಇನ್ಫಂಟ್ರಿ ಬೆಟಾಲಿಯನ್ ಮದ್ರಾಸ್ ದ ಸೈನಿಕರು ಸಹ ಅಲ್ಲಿಯೇ ಇದ್ದಾರೆ. ..

  • 30 July 2024 12:43 PM GMT

  • 30 July 2024 12:43 PM GMT

  • 30 July 2024 12:43 PM GMT

  • 30 July 2024 12:42 PM GMT

  • 30 July 2024 12:42 PM GMT

  • 30 July 2024 12:41 PM GMT


  • 30 July 2024 12:33 PM GMT

    93 ಮೃತದೇಹಗಳು ಪತ್ತೆ: ಪಿಣರಾಯಿ ವಿಜಯನ್


    ಈವರೆಗೆ 93 ಮೃತದೇಹಗಳು ಪತ್ತೆಯಾಗಿದ್ದು, 128 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಮಲಪ್ಪುರಂ ಜಿಲ್ಲೆಯ ನಿಲಂಬೂರಿನ ಪೋತುಕಲ್ಲು ಬಳಿಯ ಚಾಲಿಯಾರ್‌ನಲ್ಲಿ ಸುಮಾರು 16 ಶವಗಳು ಪತ್ತೆಯಾಗಿವೆ. ಈ ಪ್ರದೇಶದಲ್ಲಿ ದೇಹದ ಭಾಗಗಳೂ ಪತ್ತೆಯಾಗಿವೆ. 34 ಮೃತದೇಹಗಳನ್ನು ಗುರುತಿಸಲಾಗಿದೆ. 18 ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

    ಇದು ಅತ್ಯಂತ ವಿನಾಶಕಾರಿ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ. ದುರಂತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇಂದು ಮುಂಜಾನೆ 2 ಗಂಟೆಗೆ ಇಲ್ಲಿ ಮೊದಲ ಭೂಕುಸಿತ ಸಂಭವಿಸಿದೆ. ಅದರ ನಂತರ 4:10ಕ್ಕೆ ಮತ್ತೊಂದು ಭೂಕುಸಿತ ಸಂಭವಿಸಿದೆ. ಮೆಪ್ಪಾಡಿ, ಮುಂಡಕ್ಕೈ, ಚೂರಲ್‌ಮಲಾ ಸೇರಿದಂತೆ ಹಲವು ಪ್ರದೇಶಗಳು ಸಂಪರ್ಕ ಕಡಿತಗೊಂಡಿದ್ದು, ಚೂರಲ್‌ಮಲಾ-ಮುಂಡಕ್ಕೈ ರಸ್ತೆ ಕೊಚ್ಚಿಹೋಗಿದೆ. ಇಲ್ಲಿನ ವೆಳ್ಳರ್ಮಲಾ ಜಿವಿಎಚ್ ಶಾಲೆ ಸಂಪೂರ್ಣ ಕೆಸರಿನಲ್ಲಿ ಹೂತು ಹೋಗಿದೆ. ಇರುವ ಜಿಂಜಿಪ್ಪುಳ ನದಿ ಎರಡು ದಿಕ್ಕುಗಳಲ್ಲಿ ಹರಿಯುತ್ತಿದೆ. ಮನೆಗಳಿಗೆ ಮತ್ತು ಜೀವನೋಪಾಯಕ್ಕೆ ಭಾರಿ ಹಾನಿಯಾಗಿದೆ.  ಕೆಸರಿನಡಿ ಸಿಲುಕಿ ಪ್ರವಾಹಕ್ಕೆ ಕೊಚ್ಚಿ ಹೋದವರು ಇನ್ನೂ ಇದ್ದಾರೆ. ಅವರನ್ನು ಹುಡುಕುವ ಪ್ರಯತ್ನ ಮುಂದುವರಿಯಲಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

Read More
Next Story