Siddaramaiah - DKShivakumar two engines of the  government and party: B.K. Hariprasad
x

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌

ಕೋಮುವಾದವೇ ಕರಾವಳಿಯ ಬಂಡವಾಳ ಹೂಡಿಕೆಗೆ ಅಡ್ಡಿ; ಪ್ರಿಯಾಂಕ್​ ಹೇಳಿಕೆ ಸಮರ್ಥಿಸಿದ ಬಿ. ಕೆ. ಹರಿಪ್ರಸಾದ್

ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಡಿ.ಕೆ. ಶಿವಕುಮಾರ್‌ ಮುಂದಿದ್ದರೆ, ಸರ್ಕಾರದ ವಿಷಯದಲ್ಲಿ ಸಿದ್ದರಾಮಯ್ಯ ಮುನ್ನಲೆಗೆ ಬರುತ್ತಾರೆ. ಗೊಂದಲಗಳಿದ್ದರೆ ಹೈಕಮಾಂಡ್‌ ಬಗೆಹರಿಸುತ್ತದೆ ಎಂದೂ ಹೇಳಿದರು.


Click the Play button to hear this message in audio format

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ಸರ್ಕಾರ ಹಾಗೂ ಪಕ್ಷದ ಜೋಡಿ ಎಂಜಿನ್‌ಗಳಿದ್ದಂತೆ. ನಮ್ಮಲ್ಲಿ ನಾಯಕತ್ವದ ಕುರಿತು ಯಾವುದೇ ಗೊಂದಲಗಳಿಲ್ಲ. ಕಾಂಗ್ರೆಸ್ ಹೈಕಮಾಂಡ್ ಅಸಹಾಯಕರಲ್ಲ, ಅವರು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ (ಫೆ.16) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯ ಮತ್ತು ಕರಾವಳಿಯ ಅಭಿವೃದ್ಧಿ ಕುರಿತು ಮಹತ್ವದ ಹೇಳಿಕೆಗಳನ್ನು ನೀಡಿದರು.

ನಾಯಕತ್ವದ ಬಗ್ಗೆ ಗೊಂದಲವಿಲ್ಲ

ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಿದ ಹರಿಪ್ರಸಾದ್, "ಪಕ್ಷ ಸಂಘಟನೆಯಲ್ಲಿ ಡಿ.ಕೆ. ಶಿವಕುಮಾರ್ ಮುಂಚೂಣಿಯಲ್ಲಿದ್ದರೆ, ಆಡಳಿತಾತ್ಮಕ ವಿಷಯಗಳಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವ ವಹಿಸುತ್ತಾರೆ. ಇವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಒಂದು ವೇಳೆ ಗೊಂದಲಗಳೇನಾದರೂ ಇದ್ದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್ ಶಾಖೆಗಳಲ್ಲಿ ರಾಷ್ಟ್ರಗೀತೆ ಹಾಡುವುದಿಲ್ಲ

ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು. "ನಾವು 'ಜನಗಣಮನ'ವನ್ನು ರಾಷ್ಟ್ರಗೀತೆ ಎಂದು ಒಪ್ಪಿಕೊಂಡಿದ್ದೇವೆ. ರಾಷ್ಟ್ರೀಯ ಶಿಷ್ಟಾಚಾರದ ಗೆಜೆಟೆಡ್‌ ನಿಯಮ 171ರ ಪ್ರಕಾರ ರಾಷ್ಟ್ರಗೀತೆ ಮತ್ತು ಧ್ವಜಕ್ಕೆ ಅಗೌರವ ತೋರುವಂತಿಲ್ಲ. ಆದರೆ, ಆರ್‌ಎಸ್‌ಎಸ್ ಶಾಖೆಗಳಲ್ಲಿ ರಾಷ್ಟ್ರಗೀತೆ ಹಾಡುವುದಿಲ್ಲ. ಈಗ ಏಕಾಏಕಿ 'ವಂದೇ ಮಾತರಂ' ಹಾಡಬೇಕು ಎಂಬ ಹೊಸ ಮಾರ್ಗಸೂಚಿ ಮೂಲಕ ಬಿಜೆಪಿ ದೇಶವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ?" ಎಂದು ಪ್ರಶ್ನಿಸಿದರು.

"ಆರ್‌ಎಸ್‌ಎಸ್ ಒಂದು ನೋಂದಾಯಿತ ಸಂಸ್ಥೆಯಲ್ಲ ಎಂದು ಸ್ವತಃ ಮೋಹನ್ ಭಾಗವತ್ ಅವರೇ ಹೇಳಿದ್ದಾರೆ. ನೋಂದಣಿಯಾಗದ ಸಂಸ್ಥೆಯನ್ನು 'ಘೋಸ್ಟ್ಎನ್ನಬೇಕಾಗುತ್ತದೆ. ನಾವು ಕಾಲೇಜು ದಿನಗಳಿಂದಲೂ ಅವರ ಸಿದ್ಧಾಂತ ಮತ್ತು ನೀತಿಗಳನ್ನು ವಿರೋಧಿಸುತ್ತಲೇ ಬಂದಿದ್ದೇವೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರಾವಳಿಗೆ ಬಂಡವಾಳ ಬರದೇ ಇರಲು ಕೋಮುವಾದವೇ ಕಾರಣ

ಕರಾವಳಿ ಭಾಗದಲ್ಲಿ ಉದ್ಯಮಿಗಳು ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಹರಿಪ್ರಸಾದ್, "ಕರಾವಳಿಯಲ್ಲಿ ಆರ್‌ಎಸ್‌ಎಸ್ ಮತ್ತು ಕೋಮುವಾದದ ಹಾವಳಿ ಇಲ್ಲದಿದ್ದರೆ, ಐಟಿ ಸೇರಿದಂತೆ ಅನೇಕ ಬೃಹತ್ ಉದ್ಯಮಗಳು ಅಲ್ಲಿ ಬಂಡವಾಳ ಹೂಡುತ್ತಿದ್ದವು. ಕೋಮುವಾದಿ ವಾತಾವರಣವೇ ಅಲ್ಲಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ," ಎಂದು ನೇರವಾಗಿ ಆರೋಪಿಸಿದರು.

Read More
Next Story