India-New Zealand ODI series: Rishabh Pant out, who is the replacement?
x

ಭಾರತ ತಂಡದ ವಿಕೆಟ್‌ಕೀಪರ್‌ ರಿಶಬ್‌ಪಂತ್‌ 

ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ: ರಿಷಭ್ ಪಂತ್ ಔಟ್, ಬದಲಿ ಆಟಗಾರ ಯಾರು?

ಜನವರಿ 12ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲವನ್ನು ಕಾಪಾಡಿಕೊಳ್ಳುವುದು ನಾಯಕನಿಗೆ ಸವಾಲಾಗಿ ಪರಿಣಮಿಸಲಿದೆ.


Click the Play button to hear this message in audio format

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಬಹುನಿರೀಕ್ಷಿತ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಭಾರಿ ಆಘಾತ ಎದುರಾಗಿದೆ. ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ (Rishabh Pant) ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ನೆಟ್ಸ್ ಅಭ್ಯಾಸದ ವೇಳೆ ಪಂತ್ ಅವರ ಪಕ್ಕೆಲುಬಿಗೆ (Ribcage) ಬಲವಾದ ಏಟು ಬಿದ್ದಿದ್ದು, ಬಿಸಿಸಿಐ ವೈದ್ಯಕೀಯ ತಂಡ ಅವರನ್ನು ಪರೀಕ್ಷಿಸಿ ವಿಶ್ರಾಂತಿಗೆ ಸೂಚಿಸಿದೆ ಎಂದು ಕ್ರಿಕ್‌ಬಜ್ ರದಿ ಮಾಡಿದೆ.

ಮತ್ತೆ ಕಾಡಿದ ಗಾಯದ ಸಮಸ್ಯೆ

2022ರ ಭೀಕರ ಕಾರು ಅಪಘಾತದಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಿದ್ದ ಪಂತ್ ಅವರಿಗೆ ಗಾಯದ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಕ್ರಿಕ್‌ಇನ್ಫೋ (Cricinfo) ಅಂಕಿಅಂಶಗಳ ಪ್ರಕಾರ, 2023ರಿಂದ ಇಲ್ಲಿಯವರೆಗೆ ಪಂತ್ ಫಿಟ್ನೆಸ್ ಸಮಸ್ಯೆಯಿಂದಾಗಿ 18 ಅಂತಾರಾಷ್ಟ್ರೀಯ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಅವರ ಆಕ್ರಮಣಕಾರಿ ಆಟದ ಶೈಲಿಯು ಹೆಚ್ಚಿನ ದೈಹಿಕ ಸಾಮರ್ಥ್ಯವನ್ನು ಬಯಸುವುದರಿಂದ, ಇಂತಹ ಗಾಯಗಳು ಅವರ ವೃತ್ತಿಜೀವನಕ್ಕೆ ಪದೇ ಪದೇ ಅಡ್ಡಿಯಾಗುತ್ತಿವೆ.

ಬದಲಿ ಆಟಗಾರ ಯಾರು?

ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್‌ಕೀಪರ್ ಸ್ಥಾನಕ್ಕೆ ಇಶಾನ್ ಕಿಶನ್ ಪ್ರಮುಖ ಆಯ್ಕೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರ ವಲಯದಲ್ಲಿ ಋತುರಾಜ್ ಗಾಯಕ್ವಾಡ್ ಅಥವಾ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಬೇಕೆಂಬ ಚರ್ಚೆಯೂ ಜೋರಾಗಿದೆ. ಜನವರಿ 12ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲವನ್ನು ಕಾಪಾಡಿಕೊಳ್ಳುವುದು ನಾಯಕನಿಗೆ ಸವಾಲಾಗಿ ಪರಿಣಮಿಸಲಿದೆ.

ತಂಡದ ಸಮತೋಲನಕ್ಕೆ ಪೆಟ್ಟು

ಪಂತ್ ಅವರ ಅಲಭ್ಯತೆಯು ತಂಡದ ಸಮತೋಲನದ ಮೇಲೆ ಪರಿಣಾಮ ಬೀರಬಹುದು. ನಿರ್ಣಾಯಕ ಹಂತದಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯವಿರುವ ಪಂತ್ ಇಲ್ಲದಿರುವುದು ಕಿವೀಸ್ ವಿರುದ್ಧದ ಸರಣಿಯಲ್ಲಿ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಬಿಸಿಸಿಐ ಶೀಘ್ರದಲ್ಲೇ ಬದಲಿ ಆಟಗಾರನ ಹೆಸರನ್ನು ಘೋಷಿಸುವ ನಿರೀಕ್ಷೆಯಿದೆ.

ವಿಕೆಟ್‌ಕೀಪರ್‌ ಧ್ರುವ ಜುರೇಲ್‌

ಧ್ರುವ್ ಜುರೆಲ್ ಆಯ್ಕೆ

ಭಾರತ - ನ್ಯೂಜಿಲೆಂಡ್‌ ಏಕದಿನ ಸರಣಿಗೆ ರಿಷಭ್ ಪಂತ್ ಗಾಯಗೊಂಡು ಅಲಭ್ಯರಾಗಿರುವುದರಿಂದ ಬದಲಿ ಆಟಗಾರನಾಗಿ ವಿಕೆಟ್‌ಕೀಪರ್ ಸ್ಥಾನಕ್ಕೆ ಧ್ರುವ್ ಜುರೆಲ್ ಅವರನ್ನು ಹೆಸರಿಸಲಾಗಿದ್ದು, ಅವರು ಈಗಾಗಲೇ ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆ.

Read More
Next Story