
ಸಾಂದರ್ಭಿಕ ಚಿತ್ರ
ಹೊಸ ವರ್ಷಾಚರಣೆಗೆ 'ನಮ್ಮ ಮೆಟ್ರೋ' ಗಿಫ್ಟ್: ತಡರಾತ್ರಿ 3 ಗಂಟೆವರೆಗೆ ಸಂಚಾರ
ಹೊಸ ವರ್ಷದ ಸಂಭ್ರಮದಲ್ಲಿ ಭಾಗವಹಿಸಿ ಮನೆಗೆ ಮರಳುವವರಿಗೆ ಅನುಕೂಲವಾಗುವಂತೆ ಪರ್ಪಲ್ (ನೇರಳೆ), ಗ್ರೀನ್ (ಹಸಿರು) ಮತ್ತು ಹೊಸದಾಗಿ ಸೇರ್ಪಡೆಯಾಗಿರುವ ಯೆಲ್ಲೋ (ಹಳದಿ) ಲೈನ್‌ಗಳಲ್ಲಿಯೂ ಈ ವಿಸ್ತೃತ ಸೇವೆ ಲಭ್ಯವಿರಲಿದೆ.
ಸಿಲಿಕಾನ್ ಸಿಟಿಯ ಜನತೆ 2026ರ ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಾರ್ವಜನಿಕರ ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕಾಗಿ ಡಿಸೆಂಬರ್ 31ರ ರಾತ್ರಿ ಮೆಟ್ರೋ ಸೇವೆಯನ್ನು ವಿಸ್ತರಿಸಲಾಗಿದ್ದು, ಬೆಳಗಿನ ಜಾವದವರೆಗೂ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಹೊಸ ವರ್ಷದ ಸಂಭ್ರಮದಲ್ಲಿ ಭಾಗವಹಿಸಿ ಮನೆಗೆ ಮರಳುವವರಿಗೆ ಅನುಕೂಲವಾಗುವಂತೆ ಪರ್ಪಲ್ (ನೇರಳೆ), ಗ್ರೀನ್ (ಹಸಿರು) ಮತ್ತು ಹೊಸದಾಗಿ ಸೇರ್ಪಡೆಯಾಗಿರುವ ಯೆಲ್ಲೋ (ಹಳದಿ) ಲೈನ್‌ಗಳಲ್ಲಿಯೂ ಈ ವಿಸ್ತೃತ ಸೇವೆ ಲಭ್ಯವಿರಲಿದೆ.
ಸಂಚಾರ ಸಮಯ
ಡಿಸೆಂಬರ್ 31ರ ರಾತ್ರಿ 11. 30 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ಈ ವಿಶೇಷ ಸೇವೆ ಲಭ್ಯವಿರುತ್ತದೆ. ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಗಿನ ಜಾವ 3. 10ಕ್ಕೆ ಕೊನೆಯ ರೈಲು ಹೊರಡಲಿದೆ. ಈ ಮಾರ್ಗಗಳಲ್ಲಿ ಪ್ರತಿ 8 ನಿಮಿಷಗಳಿಗೊಮ್ಮೆ ರೈಲು ಸಂಚರಿಸಲಿದೆ. ಈ ಮಾರ್ಗದಲ್ಲಿ ಪ್ರತಿ 15 ನಿಮಿಷಗಳಿಗೊಮ್ಮೆ ರೈಲು ಲಭ್ಯವಿರುತ್ತದೆ.
ಎಂ.ಜಿ. ರೋಡ್ ನಿಲ್ದಾಣ ಬಂದ್
ಹೊಸ ವರ್ಷಾಚರಣೆಯ ಕೇಂದ್ರಬಿಂದುವಾಗಿರುವ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದೆ. ಜನದಟ್ಟಣೆಯನ್ನು ನಿಯಂತ್ರಿಸುವ ಮತ್ತು ಸುರಕ್ಷತೆಯ ದೃಷ್ಟಿಯಿಂದ, ರಾತ್ರಿ 10 ಗಂಟೆಯ ನಂತರ ಎಂ.ಜಿ. ರೋಡ್ ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನವನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಎಂ.ಜಿ. ರಸ್ತೆಗೆ ಬರುವ ಅಥವಾ ಇಲ್ಲಿಂದ ಹೋಗುವ ಪ್ರಯಾಣಿಕರು ಪರ್ಯಾಯವಾಗಿ ಸಮೀಪದ ಟ್ರಿನಿಟಿ (Trinity) ಅಥವಾ ಕಬ್ಬನ್ ಪಾರ್ಕ್ (Cubbon Park) ನಿಲ್ದಾಣಗಳನ್ನು ಬಳಸುವಂತೆ ನಿಗಮ ಮನವಿ ಮಾಡಿದೆ.
ಪ್ರಯಾಣಿಕರಿಗೆ ಸಲಹೆಗಳು
ೠರಾತ್ರಿ 11 ಗಂಟೆಗೆ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಮಾರಾಟ ಸ್ಥಗಿತಗೊಳ್ಳಲಿದೆ. ಕೊನೆಯ ಕ್ಷಣದ ನೂಕುನುಗ್ಗಲು ಮತ್ತು ಸರತಿ ಸಾಲನ್ನು ತಪ್ಪಿಸಲು ಪ್ರಯಾಣಿಕರು ಕ್ಯೂಆರ್ ಕೋಡ್ (QR Code) ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸಲು ಸೂಚಿಸಲಾಗಿದೆ. ಮುಂಚಿತವಾಗಿಯೇ ರಿಟರ್ನ್ ಜರ್ನಿ ಟಿಕೆಟ್‌ಗಳನ್ನು ಖರೀದಿಸಿಟ್ಟುಕೊಳ್ಳುವುದು ಉತ್ತಮ.
ದಾಖಲೆ ಬರೆದಿದ್ದ ಪ್ರಯಾಣಿಕರು
ಮೆಟ್ರೋ ನಿಗಮವು 2017ರಿಂದಲೂ ಹೊಸ ವರ್ಷದಂದು ಸೇವೆಯನ್ನು ವಿಸ್ತರಿಸುತ್ತಾ ಬಂದಿದೆ. ಕಳೆದ ವರ್ಷ (2024 ರ ಹೊಸ ವರ್ಷಾಚರಣೆ ವೇಳೆ) ಮೆಟ್ರೋ ಸೇವೆಯನ್ನು ದಾಖಲೆಯ 8.59 ಲಕ್ಷ ಪ್ರಯಾಣಿಕರು ಬಳಸಿಕೊಂಡಿದ್ದರು. ಇದು 2023ಕ್ಕೆ ಹೋಲಿಸಿದರೆ ಶೇ. 37ರಷ್ಟು ಹೆಚ್ಚಳವಾಗಿತ್ತು. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

