ಬೆಂಗಳೂರು ಒತ್ತುವರಿ ತೆರವು ಕೇಸ್ಗೆ 'ಕೇರಳ'ದ ತಿರುವು ಸಿಕ್ಕಿದ್ದು ಹೇಗೆ? | Kogilu Cross Demolition
ಬೆಂಗಳೂರಿನ ಕೋಗಿಲು ಕ್ರಾಸ್ ಬಳಿಯ ಫಕೀರ್ ಲೇಔಟ್‌ನಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ನೂರಾರು ಶೆಡ್‌ಗಳನ್ನು ನೆಲಸಮಗೊಳಿಸಿದ ಪರಿಣಾಮ, ಬಡ ಕುಟುಂಬಗಳು ಚಿಕ್ಕ ಮಕ್ಕಳೊಂದಿಗೆ ಬೀದಿಗೆ ಬಿದ್ದಿವೆ. ಸೂರು ಕಳೆದುಕೊಂಡ ಜನರು ಸುರಿಯುವ ಚಳಿ, ಗಾಳಿಯಲ್ಲಿ ಟಾರ್ಪಲ್ ಹಾಕಿಕೊಂಡು ದಿನ ಕಳೆಯುವಂತಾಗಿದೆ. ಮತ್ತೊಂದೆಡೆ, ಈ ವಿಚಾರ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಬೆಂಗಳೂರಿನ ಈ ತೆರವು ಕಾರ್ಯಾಚರಣೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಖಂಡಿಸಿದ್ದು, ಅಂತಾರಾಜ್ಯ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ದ ಫೆಡರಲ್ ಕರ್ನಾಟಕ ತಂಡವು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಕಷ್ಟಗಳನ್ನು ಆಲಿಸಿದೆ. ಅಲ್ಲಿನ ನೈಜ ಪರಿಸ್ಥಿತಿ ಏನು? ಸಂತ್ರಸ್ತರು ಏನಂತಾರೆ? ಇಲ್ಲಿದೆ ನೋಡಿ ಗ್ರೌಂಡ್ ರಿಪೋರ್ಟ್.