
ಸಾಂದರ್ಭಿಕ ಚಿತ್ರ
ಕರ್ನಾಟಕ ಸರ್ಕಾರಿ ನೌಕರಿ ಹುಡುಕ್ತಾ ಇದೀರಾ?, ಪಿಯುಸಿ, ಡಿಗ್ರಿ ಆದವರಿಗೆ 52,000 ರೂ ಸಂಬಳದ ಕೆಲಸ
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (KSCCF) ಖಾಲಿ ಇರುವ ಹುದ್ದೆಗಳಿಗೆ ರೆಡ್ ಕಾರ್ಪೆಟ್ ಹಾಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
"ಸರ್ಕಾರಿ ಕೆಲಸ ದೇವರ ಕೆಲಸ" ಅನ್ನೋ ಹಾಗೆ, ಒಂದು ಸರ್ಕಾರಿ ಹುದ್ದೆ ಗಿಟ್ಟಿಸಬೇಕೆಂಬುದು ನಿಮ್ಮ ಕನಸೇ? ಹಾಗಾದರೆ ಆ ಕನಸು ನನಸಾಗುವ ಸಮಯ ಬಂದಿದೆ. ಪರೀಕ್ಷಾ ಶುಲ್ಕದ ಟೆನ್ಷನ್ ಇಲ್ಲದೆ, ಬೆಂಗಳೂರಿನಲ್ಲಿ ಕೆಲಸ ಮಾಡುವ ಸುವರ್ಣಾವಕಾಶವೊಂದನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆ ನಿಮ್ಮ ಮುಂದಿಟ್ಟಿದೆ.
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (KSCCF) ಖಾಲಿ ಇರುವ ಹುದ್ದೆಗಳಿಗೆ ರೆಡ್ ಕಾರ್ಪೆಟ್ ಹಾಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಯಾಕೆ ಈ ಉದ್ಯೋಗ ಬೆಸ್ಟ್?
ಆಯ್ಕೆಯಾದವರಿಗೆ ಹುದ್ದೆಗೆ ಅನುಗುಣವಾಗಿ ತಿಂಗಳಿಗೆ ಬರೋಬ್ಬರಿ 52,650 ರೂಪಾಯಿ ರವರೆಗೂ ವೇತನ ಸಿಗಲಿದೆ. ಹೌದು, ನೀವು ನಂಬಲೇಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿಲ್ಲ (No Application Fee)! ಉಚಿತವಾಗಿ ಅಪ್ಲೈ ಮಾಡಿ, ಕೆಲಸ ಗಿಟ್ಟಿಸಿಕೊಳ್ಳಿ.
ಯಾವೆಲ್ಲಾ ಹುದ್ದೆಗಳಿವೆ?
ಒಟ್ಟು 34 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಯಾರಿಗೆ ಯಾವ ಹುದ್ದೆ ಸೂಕ್ತ?
1. ಫಾರ್ಮಾಸಿಸ್ಟ್ (Pharmacist): 07 ಹುದ್ದೆಗಳು (ಫಾರ್ಮಸಿ ಡಿಪ್ಲೋಮಾ ಆದವರಿಗೆ).
2. ಪ್ರಥಮ ದರ್ಜೆ ಸಹಾಯಕರು (FDA): 10 ಹುದ್ದೆಗಳು (ಯಾವುದೇ ಪದವಿ ಮುಗಿಸಿದವರಿಗೆ).
3. ಸೇಲ್ಸ್ ಅಸಿಸ್ಟಂಟ್ (Sales Assistant): 17 ಹುದ್ದೆಗಳು (ಪಿಯುಸಿ ಪಾಸಾದವರಿಗೆ).
ಯಾರೆಲ್ಲಾ ಅರ್ಜಿ ಹಾಕಬಹುದು?
ನೀವು ಪಿಯುಸಿ, ಡಿಗ್ರಿ ಅಥವಾ ಡಿಪ್ಲೋಮಾ ಇನ್ ಫಾರ್ಮಸಿ ಮುಗಿಸಿದ್ದೀರಾ? ನಿಮ್ಮ ವಯಸ್ಸು 35 ವರ್ಷದ ಒಳಗಿದೆಯೇ? ಹಾಗಾದರೆ ತಡ ಮಾಡಬೇಡಿ, ಈ ಹುದ್ದೆಗಳು ನಿಮಗಾಗಿಯೇ ಇವೆ.
ಆಯ್ಕೆ ಹೇಗೆ?
ನಿಮ್ಮ ವಿದ್ಯಾರ್ಹತೆ ಮತ್ತು ಅರ್ಜಿಯನ್ನು ಪರಿಶೀಲಿಸಿ, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇಂದೇ ಅಧಿಕೃತ ವೆಬ್‌ಸೈಟ್ [ksccsf.org](http://ksccsf.org/index.html) ಗೆ ಭೇಟಿ ನೀಡಿ. ಅಲ್ಲಿರುವ ಮಾಹಿತಿಯನ್ನು ಓದಿಕೊಂಡು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಫೆಬ್ರವರಿ 7, 2026 ಕೊನೆಯ ದಿನಾಂಕ. ಕೊನೆ ಕ್ಷಣದ ರಶ್ ಬೇಡ, ಇಂದೇ ಅರ್ಜಿ ಹಾಕಿ ನಿಶ್ಚಿಂತರಾಗಿ!

