
ಅಂತರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆಯ ಸಂತೋಷ್ ಕೆಂಜಾಂಬ ಮಾತನಾಡಿದರು.
ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನೆಸ್ ಕಾಂಕ್ಲೇವ್: ಜ. 29ರಿಂದ ಅರಮನೆ ಮೈದಾನದಲ್ಲಿ ಉದ್ಯಮ ಸಮ್ಮೇಳನ
ಯುವ ಉದ್ಯಮಿಗಳ ಅನುಕೂಲಕ್ಕೆ ನೆಟ್ ವರ್ಕಿಂಗ್ ಜೋನ್ ಆರಂಭಿಸಿ ಕೈಗಾರಿಕೆ, ವೈದ್ಯಕೀಯ, ಬ್ಯಾಕಿಂಗ್, ಐಟಿಬಿಟಿ ಉದ್ಯಮಗಳ ಕುರಿತು ಮಾಹಿತಿ ಸಿಗಲಿದೆ ಎಂದು ಸಂತೋಷ್ ಕೆಂಜಾಂಬ ತಿಳಿಸಿದರು.
ವೀರಶೈವ ಸಮುದಾಯದ ಜನರು ಸ್ವಾವಲಂಭಿ, ಸ್ವಾಭಿಮಾನಿಯಾಗಿ ಬದುಕಬೇಕು ಹಾಗೂ ಸಂಘಟಿತರಗಾಬೇಕು ಎಂಬ ಉದ್ದೇಶದಿಂದ ಅಂತರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಕಾಂಕ್ಲೇವ್ ಆಯೋಜಿಸಲಾಗಿದೆ ಎಂದು ಸಂತೋಷ್ ಕೆಂಜಾಂಬ ತಿಳಿಸಿದರು.
ಶುಕ್ರವಾರ(ಜ.16) ಬೆಂಗಳೂರಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಮಾತಬಾಡಿದ ಅವರು, ಜನವರಿ 29ರಿಂದ ಫೆಬ್ರವರಿ 1ರವರಗೆ ಬೆಂಗಳೂರಿನ ಅರಮನೆ ಮೈದಾನ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಗ್ಲೋಬಲ್ ಬಿಸಿನಸ್ ಕಾಂಕ್ಲೇವ್ ಜರುಗಲಿದ್ದು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಾ ಮಹಾಸ್ವಾಮಿಗಳು ಉದ್ಘಾಟಿಸಲಿದ್ದು, ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ ಹಾಗೂ ಶರಣಗೌಡ ದರ್ಶನಪೂರ್ ಭಾಗವಹಿಸಲಿದ್ದಾರೆ ಎಂದರು.
ಸಭಾಗಂಣದಲ್ಲಿ 230ಕ್ಕೂ ಹೆಚ್ಚು ಮಳಿಗೆಗಳು ಇರಲಿದೆ. ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಮುದಾಯದವರು ಮಳಿಗೆಗಳನ್ನು ಹಾಕಲಿದ್ದಾರೆ. ಯುವ ಉದ್ಯಮಿಗಳ ಅನುಕೂಲಕ್ಕೆ ನೆಟ್ ವರ್ಕಿಂಗ್ ಜೋನ್ ಆರಂಭಿಸಿ ಕೈಗಾರಿಕೆ, ವೈದ್ಯಕೀಯ, ಬ್ಯಾಕಿಂಗ್, ಐಟಿಬಿಟಿ ಉದ್ಯಮಗಳ ಕುರಿತು ಮಾಹಿತಿ ಸಿಗಲಿದೆ. ಉತ್ತರ ಕರ್ನಾಟಕ, ದಕ್ಷಿಣ, ಮೈಸೂರು ಭಾಗದ ವಿಶೇಷ ಖಾದ್ಯ ತಿನಿಸುಗಳ ಫುಡ್ ಫೆಸ್ಟ್ ಆಯೋಜಿಸಲಾಗಿದ್ದು, ಅಂದಾಜು ಒಂದು ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.
ಫೆಬ್ರವರಿ 1ರಂದು ಸಮಾರೋಪ ಸಮಾರಂಭದಲ್ಲಿ ಚಿಕ್ಕಮಗಳೂರಿನ ಬಸವತತ್ವ ಪೀಠದ ಡಾ.ಬಸವಮರಳಸಿದ್ದಪ್ಪ ಸ್ವಾಮೀಜಿಗಳು ಮತ್ತು ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಮುರುಗೇಶ್ ನಿರಾಣಿ ಮಾಜಿ ಶಾಸಕಿ ರಾಣಿ ಸತೀಶ್, ವಿಧಾನಪರಿಷತ್ ನವೀನ್ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಭಾಗವಹಿಸಲಿದ್ದಾರೆ ಎಂದರು.

