ಧ್ರುವ ಸರ್ಜಾ ಎದುರು ಬಾಸ್ ಬಾಸ್ ಡಿ ಬಾಸ್ ಎಂದು ಕೂಗಿದ ದರ್ಶನ್ ಅಭಿಮಾನಿಗಳು
x
ಚಿತ್ರದುರ್ಗಕ್ಕೆ ನಟ ಧ್ರುವ ಸರ್ಜಾ ಭೇಟಿ ನೀಡಿದ್ದಾರೆ.

ಧ್ರುವ ಸರ್ಜಾ ಎದುರು 'ಬಾಸ್ ಬಾಸ್ ಡಿ ಬಾಸ್' ಎಂದು ಕೂಗಿದ ದರ್ಶನ್ ಅಭಿಮಾನಿಗಳು

ನಟ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಸುದ್ದಿಗೋಷ್ಟಿಗೆ ಚಿತ್ರತಂಡ ಮುಂಬೈಗೆ ಹೊರಟಿದೆ.


ನಟ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದ್ದು, ಈ ಸಿನಿಮಾದ ಸುದ್ದಿಗೋಷ್ಟಿಗೆ ಚಿತ್ರತಂಡ ಮುಂಬೈಗೆ ಹೊರಟಿದೆ. ಮಾರ್ಗಮಧ್ಯೆ ಹಿರಿಯೂರಿನ ಬಳಿ ಧ್ರುವ ಸರ್ಜಾ ಎದುರು ʻಬಾಸ್ ಬಾಸ್ ಡಿ ಬಾಸ್ʼ ಎಂದು ದರ್ಶನ್ ಅಭಿಮಾನಿಗಳು ಘೋಷಣೆ ಕೂಗಿದ ಘಟನೆ ನಡೆದಿದೆ.

'ಮಾರ್ಟಿನ್' ಸಿನಿಮಾ ತಂಡ ಮುಂಬೈಗೆ ತೆರಳುತ್ತಿರುವ ಸಂದರ್ಭದಲ್ಲಿ ಮಾರ್ಗಮಧ್ಯೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ಈ ವೇಳೆ ಅವರನ್ನು ನೋಡಲು ಅಪಾರ ಸಂಖ್ಯೆ ಜನರು ಜಮಾಯಿಸಿದ್ದರು. ಸಿದ್ಧಗಂಗಾ ಮಠದ ಬಳಿಕ ಚಿತ್ರದುರ್ಗದ ಮುರುಘಾ ಮಠಕ್ಕೂ ಧ್ರುವ ಸರ್ಜಾ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಇನ್ನು ಹಿರಿಯೂರಿನ ಬಳಿಕ ಧ್ರುವ ಸರ್ಜಾ ಕಾರ್ ಏರುವ ಮುನ್ನ ಬಾಸ್ ಬಾಸ್ ಡಿಬಾಸ್ ಎಂದು ದರ್ಶನ್ ಅಭಿಮಾನಿಗಳು ಕೂಗಿದ ಘಟನೆಯೂ ನಡೆಯಿತು. ಕೆಲ ದಿನಗಳಿಂದ ದರ್ಶನ್ ಹಾಗೂ ಧ್ರುವ ಸರ್ಜಾ ನಡುವಿನ ಶೀತರಸಮರ ನಡೆಯುತ್ತಿದೆ. ಹಿರಿಯೂರಿನ ಬಳಿ ಧ್ರುವ ಸರ್ಜಾ ಎದುರು ʻಬಾಸ್ ಬಾಸ್ ಡಿ ಬಾಸ್, ನಮ್‌ ಬಾಸ್‌ ಯಾರು ಚಾಲೆಂಜಿಂಗ್ ಸ್ಟಾರ್ʼ ಎಂದು ಕೂಗಿದ್ದಾರೆ. ಆ ವೀಡಿಯೋ ವೈರಲ್ ಆಗುತ್ತಿದೆ.

ದರ್ಶನ್ ಹಾಗೂ ಧ್ರುವ ಅಭಿಮಾನಿಗಳ ನಡುವೆಯೂ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕೆಸರೆರಚಾಟ ನಡೆಯುತ್ತಲೇ ಇದೆ. ಇತ್ತೀಚೆಗೆ ರಾಮನಗರ ಕರಗ ಉತ್ಸವದಲ್ಲಿ ಕೂಡ ಅಭಿಮಾನಿಗಳು ʻಜೈ ಡಿ ಬಾಸ್ʼ ಎಂದು ಕೂಗಿದ್ದರು. ಇದೀಗ ಹಿರಿಯೂರಿನ ಬಳಿ ಧ್ರುವ ಸರ್ಜಾ ಎದುರು ದರ್ಶನ್‌ ಅಭಿಮಾನಿಗಳು ದರ್ಶನ್‌ ಪರ ಘೋಷಣೆ ಕೂಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಧ್ರುವ ಸರ್ಜಾ ಪ್ರತಿಕ್ರಿಯಿಸಿ, ʻʻಯಾರೋ ಒಬ್ಬರು ನೋವಲ್ಲಿದ್ದಾರೆ, ಕುಗ್ಗಿದ್ದಾರೆ ಎಂದು ನಾವು ಏನೇನೋ ಮಾತನಾಡೋಕೆ ಆಗಲ್ಲ. ಗುಂಪಲ್ಲಿ ಗೋವಿಂದ ಅನ್ನೋ ರೀತಿಯಲ್ಲಿ ನಾನೇನೇನೋ ಮಾತನಾಡಲ್ಲ. ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ಅವರಿಗೂ ಒಂದು ಫ್ಯಾಮಿಲಿ ಇದೆ.. ರೇಣುಕಾ ಸ್ವಾಮಿ ಅವರಿಗೂ ಒಂದು ಕುಟುಂಬ ಇದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ , ಮೊದಲು ತನಿಖೆಯಾಗಲಿ, ನಾವು ಏನೇನೋ ಮಾತನಾಡುವುದು ಬೇಡ. ರೇಣುಕಾಸ್ವಾಮಿ ಅವರಿಗೆ ನ್ಯಾಯ ಸಿಗಬೇಕುʼʼ ಅವರು ಹೇಳಿದ್ದರು.

Read More
Next Story