ನಳಿನ್ ಪ್ರಭಾತ್ ಎನ್‌ಎಸ್‌ಜಿ ಮುಖ್ಯಸ್ಥ

Update: 2024-04-19 08:15 GMT

ನವದೆಹಲಿ, ಏ.19- ಹಿರಿಯ ಐಪಿಎಸ್ ಅಧಿಕಾರಿ ನಳಿನ್ ಪ್ರಭಾತ್ ಅವರನ್ನು ಭಯೋತ್ಪಾದನಾ ನಿಗ್ರಹ ದಳವಾದ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯ ಹೇಳಿದೆ. 

ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದ ಮುಖ್ಯಸ್ಥ ದಲ್ಜಿತ್ ಸಿಂಗ್ ಚೌಧರಿ ಅವರು ಎನ್‌ಎಸ್‌ಜಿಯ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿ ದ್ದರು. ಆಗಸ್ಟ್ 31, 2028 ರವರೆಗೆ ಎನ್‌ಎಸ್‌ಜಿ ಮಹಾನಿರ್ದೇಶಕರಾಗಿ ಪ್ರಭಾತ್‌ ಅವರ ನೇಮಕವನ್ನು ಕ್ಯಾಬಿನೆಟ್ ನೇಮಕ ಸಮಿತಿ(ಎಸಿಸಿ) ಅನುಮೋದಿಸಿದೆ. 

ಆಂಧ್ರಪ್ರದೇಶ ಕೇಡರ್‌ನ 1992 ರ ಬ್ಯಾಚಿನ ಭಾರತೀಯ ಪೊಲೀಸ್ ಸೇವೆ ಅಧಿಕಾರಿಯಾಗಿರುವ ಅವರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ನ‌ ಹೆಚ್ಚುವರಿ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಗಸ್ಟ್ 31, 2028 ರವರೆಗೆ ಎನ್‌ಎಸ್‌ಜಿ ಮಹಾನಿರ್ದೇಶಕರಾಗಿ ಪ್ರಭಾತ್‌ ಅವರ ನೇಮಕವನ್ನು ಕ್ಯಾಬಿನೆಟ್ ನೇಮಕ ಸಮಿತಿ(ಎಸಿಸಿ) ಅನುಮೋದಿಸಿದೆ. ಬ್ಲ್ಯಾಕ್‌ ಕ್ಯಾಟ್ಸ್‌ ಎಂದು ಹೆಸರಾದ ಎನ್‌ಎಸ್‌ಜಿ ಯನ್ನು 1984 ರಲ್ಲಿ ಆರಂಭಿಸಲಾಯಿತು. 

ಇಂಟೆಲಿಜೆನ್ಸ್ ಬ್ಯೂರೋ (ಐಬಿ) ವಿಶೇಷ ನಿರ್ದೇಶಕಿಯಾಗಿ ಸಪ್ನಾ ತಿವಾರಿ ಅವರ ನೇಮಕವನ್ನು ಎಸಿಸಿ ಅನುಮೋದಿಸಿದೆ. ಒಡಿಶಾ ಕೇಡ ರ್‌ನ 1992 ಬ್ಯಾಚ್‌ನ ಐಪಿಎಸ್ ಅಧಿಕಾರಿ ತಿವಾರಿ, ಐಬಿಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿದ್ದಾರೆ. ಏಪ್ರಿಲ್ 30, 2026 ರವರೆಗೆ ಅವರು ಹುದ್ದೆಯಲ್ಲಿರಲಿದ್ದಾರೆ.

Tags:    

Similar News