ಇಸಿಯಿಂದ ಪಕ್ಷಪಾತ ವರ್ತನೆ: ಪಿಣರಾಯಿ ವಿಜಯನ್

Update: 2024-04-23 06:35 GMT

ಕಣ್ಣೂರು (ಕೇರಳ), ಏಪ್ರಿಲ್‌ 23 - ಚುನಾವಣೆ ಆಯೋಗವು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದೆ ಇರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಹೇಳಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿಯವರು ಮುಸ್ಲಿಮರ ವಿರುದ್ಧದ ಹೇಳಿಕೆಗಳ ಕುರಿತು ಇಸಿ ತಕ್ಷಣ ಕ್ರಮಕೈಗೊಳ್ಳಬೇಕು.ಆದರೆ, ಇದುವರೆಗೆ ಮೌನವಾಗಿದೆ. ಇದು ದುರದೃಷ್ಟಕರʼ ಎಂದು ಹೇಳಿದರು. 

ʻಇದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪವಾಗಬೇಕಾದ ವಿಷಯ. ಪ್ರಧಾನಿಯವರ ಇಂತಹ ಹೇಳಿಕೆಗಳಿಂದ ರಾಷ್ಟ್ರದಲ್ಲಿ ಬಿಜೆಪಿ ವಿರೋಧಿ ಭಾವನೆ ಬಲಗೊಳ್ಳುತ್ತಿದೆ. ಕೇಸರಿ ಪಕ್ಷವು ಮತ್ತಷ್ಟು ಪ್ರತ್ಯೇಕಗೊಳ್ಳುತ್ತದೆ,ʼ ಎಂದು ಹೇಳಿದರು. 

ರಾಜಸ್ಥಾನದ ಬನ್ಸ್ವಾರಾದಲ್ಲಿ ಭಾನುವಾರ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ನುಸುಳುಕೋರರಿಗೆ ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ನೀಡುತ್ತದೆ ಎಂದು ಆರೋಪಿಸಿದ್ದರು. ಪ್ರಧಾನಿ ಕಾಲ್ಪನಿಕ ಕಥೆಗಳ ಮೂಲಕ ಜನರಲ್ಲಿ ಮುಸ್ಲಿಂ ವಿರೋಧ ದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆ ಎಂದು ವಿಜಯನ್ ಒಂದು ದಿನದ ಹಿಂದೆ ಆರೋಪಿಸಿದ್ದರು.

Similar News