ಮಹಾದೇವ್ ಆ್ಯಪ್ ಹಗರಣ: ದುಬೈ ಮೂಲದ 'ಹವಾಲಾ ಆಪರೇಟರ್' ಆಸ್ತಿ ಸ್ಥಗಿತ

Update: 2024-03-01 14:46 GMT

ನವದೆಹಲಿ, ಮಾರ್ಚ್ 1- ಮಹಾದೇವ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದುಬೈ ಮೂಲದ ʻಹವಾಲಾ ಆಪರೇಟರ್ʼ ನ 580 ಕೋಟಿ ರೂ. ಹೆಚ್ಚು ಭದ್ರತಾ ಹಿಡುವಳಿಗಳನ್ನು ಸ್ಥಗಿತಗೊಳಿಸಿದೆ ಮತ್ತು 3.64 ಕೋಟಿ ರೂ. ಮೌಲ್ಯದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ಫೆಬ್ರವರಿ 28 ರಂದು ಕೋಲ್ಕತ್ತಾ, ಗುರುಗ್ರಾಮ್, ದೆಹಲಿ, ಇಂದೋರ್, ಮುಂಬೈ ಮತ್ತು ರಾಯ್‌ಪುರದ ವಿವಿಧ ಆವರಣಗಳಲ್ಲಿ ದಾಳಿ ನಡೆಯಿತು. ಇಡಿ ತನಿಖೆಯು ಛತ್ತೀಸ್‌ಗಢದ ರಾಜಕಾರಣಿಗಳು ಮತ್ತು ಅಧಿಕಾರಗಳ ಪಾಲ್ಗೊಳ್ಳುವಿಕೆಯನ್ನು ತೋರಿಸಿದೆ. 

ಹರಿಶಂಕರ್ ತಿಬ್ರೆವಾಲ್ ಎಂಬ ʻಹವಾಲಾ ಆಪರೇಟರ್ʼ ನ್ನು ಇಡಿ ಗುರುತಿಸಿದ್ದು, ಕೋಲ್ಕತ್ತಾ ಮೂಲದ ಅವರು ದುಬೈನಲ್ಲಿ ನೆಲೆಸಿದ್ದಾರೆ. ಅವರು ಮಹಾದೇವ್ ಆ್ಯಪ್‌ನ ಪ್ರವರ್ತಕರೊಂದಿಗೆ ಪಾಲುದಾರಿಕೆ ಹೊಂದಿದ್ದರು ಮತ್ತು ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್(ಸ್ಕೈ ಎಕ್ಸ್‌ಚೇಂಜ್) ಹೊಂದಿದ್ದರು ಎಂದು ಇಡಿ ಹೇಳಿದೆ. ಅವರ 580.78 ಕೋಟಿ ರೂ.ಮೌಲ್ಯದ ಭದ್ರತಾ ಹೋಲ್ಡಿಂಗ್‌ಗಳನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಯಡಿ ಸ್ಥಗಿತಗೊಳಿಸಲಾಗಿದೆ. ಪ್ರಕರಣ ದಲ್ಲಿ ಈವರೆಗೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.

ಮಹಾದೇವ್ ಆ್ಯಪ್‌ನಿಂದ ಗಳಿಸಿದ ಅಕ್ರಮ ಹಣವನ್ನು ಛತ್ತೀಸ್‌ಗಢದ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚ ನೀಡಲು ಬಳಸಲಾಗಿದೆ ಎಂದು ಸಂಸ್ಥೆ ಈ ಹಿಂದೆ ಹೇಳಿತ್ತು. ಪ್ರಕರಣದಲ್ಲಿ ಇಡಿ ಎರಡು ಚಾರ್ಜ್ ಶೀಟ್‌ ಸಲ್ಲಿಸಿದ್ದು, ಪ್ರಮುಖ ಪ್ರವರ್ತಕರಾದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಸೇರಿದ್ದಾರೆ. 

ಇಡಿ ಪ್ರಕಾರ ಈ ಹಗರಣದ ಮೊತ್ತ ಸುಮಾರು 6,000 ಕೋಟಿ ರೂ. 

Tags:    

Similar News