ರಾಮನ ಹೆಸರಲ್ಲಿ ಹೊಸ ಯೋಜನೆ ತನ್ನಿ, ಸಚಿವ ರಾಮಲಿಂಗಾರೆಡ್ಡಿ ಕೇಂದ್ರಕ್ಕೆ ಸಲಹೆ ಕೊಟ್ಟಿದ್ಯಾಕೆ?

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಯ ಹೆಸರು ಬದಲಾವಣೆ ಚರ್ಚೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ. "ನಮಗೂ ರಾಮನ ಮೇಲೆ ಗೌರವವಿದೆ, ಆದರೆ ಅದಕ್ಕಾಗಿ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆಯುವುದು ಸರಿಯಲ್ಲ. ನಿಮಗೆ ರಾಮನ ಹೆಸರಲ್ಲಿ ಯೋಜನೆ ತರಬೇಕೆಂಬ ಇಚ್ಛೆಯಿದ್ದರೆ, ಅದಕ್ಕಾಗಿಯೇ ಹೊಸ ಯೋಜನೆಯನ್ನು ಜಾರಿಗೊಳಿಸಿ. ಅದನ್ನು ಬಿಟ್ಟು, ರಾಷ್ಟ್ರಪಿತನ ಹೆಸರಿನಲ್ಲಿರುವ ಯೋಜನೆಯನ್ನು ಬದಲಿಸುವುದು ಬೇಡ" ಎಂದು ರಾಮಲಿಂಗಾರೆಡ್ಡಿ ಅವರು ಆಗ್ರಹಿಸಿದ್ದಾರೆ. ಗಾಂಧೀಜಿಯ ಹೆಸರನ್ನು ಉಳಿಸಿಕೊಂಡು, ರಾಮನ ಹೆಸರಿನಲ್ಲಿ ಪರ್ಯಾಯ ಯೋಜನೆ ರೂಪಿಸುವಂತೆ ಅವರು ನೀಡಿರುವ ಈ ಸಲಹೆ, ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.

Update: 2025-12-17 09:47 GMT


Tags:    

Similar News