ಕೆಎಸ್ಸಿಎ ಅಧ್ಯಕ್ಷನಾಗಿ ಕ್ರಿಕೆಟ್‌ಗೆ ಕೊಡುಗೆ ಕೊಡುವುದೇ ನನ್ನ ಉದ್ದೇಶ: ಮಾಜಿ ವೇಗಿ ವೆಂಕಟೇಶ್ ಪ್ರಸಾದ್
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಚುನಾವಣಾ ಕಣ ರಂಗೇರಿದ್ದು, ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. "ಬ್ರಿಜೇಶ್ ಪಟೇಲ್ ಅವರ ಹಿಡಿತದಿಂದ ಕೆಎಸ್‌ಸಿಎಯನ್ನು ಮುಕ್ತಗೊಳಿಸುವುದೇ ನಮ್ಮ ಪ್ರಮುಖ ಗುರಿ" ಎಂದು ಪ್ರಸಾದ್ ನೇರವಾಗಿ ಸವಾಲು ಹಾಕಿದ್ದಾರೆ. "ಬ್ಯಾಕ್ ಸೀಟ್ ಡ್ರೈವಿಂಗ್ ನಿಲ್ಲಬೇಕು, ಕ್ರಿಕೆಟ್‌ಗೆ ಮೊದಲ ಆದ್ಯತೆ ಸಿಗಬೇಕು," ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವೆಂಕಟೇಶ್ ಪ್ರಸಾದ್ ಅವರೊಂದಿಗೆ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಕೂಡ ಕೈಜೋಡಿಸಿದ್ದು, ಕರ್ನಾಟಕ ಕ್ರಿಕೆಟ್‌ನ ಘನತೆಯನ್ನು ಮರುಸ್ಥಾಪಿಸುವ ಪಣ ತೊಟ್ಟಿದ್ದಾರೆ. ದ ಫೆಡರಲ್ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಗುರಿಯನ್ನು ವಿವರಿಸಿದ್ದಾರೆ.
By : The Federal
Update: 2025-11-13 09:50 GMT