Exit Poll : ಚುನಾವಣೋತ್ತರ ಸಮೀಕ್ಷೆಯ ವಿಶ್ಲೇಷಣೆ ಎಷ್ಟು ನಿಖರ?

ಮತದಾರರು ಮತ್ತು ಪಕ್ಷಗಳು ನವೆಂಬರ್ 23ರಂದು ಅಧಿಕೃತ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಇದು ಭಾರತೀಯ ಚುನಾವಣೆಗಳ ಅನಿರೀಕ್ಷಿತ ಸ್ವರೂಪವನ್ನು ಮತ್ತೊಂದು ಬಾರಿ ಪ್ರಕಟಿಸಬಹುದು.

Update: 2024-11-21 12:03 GMT
Maharashtra and Jharkhand exit polls: Who wins where?

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಮತದಾನ ಪ್ರಕ್ರಿಯೆ ಮುಗಿದ ತಕ್ಷಣ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡವು. ಈ ಸಮೀಕ್ಷೆಗಳ ವಿವರಗಳು ಮಾಧ್ಯಮ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿವೆ. ಈ ಸಂಭಾವ್ಯ ಫಲಿತಾಂಶಗಳ ನಿಖರತೆಯ ಕುರಿತು ನಡೆಸಿದ ವಿಶೇಷ ಚರ್ಚೆಯಲ್ಲಿ ಸಮೀಕ್ಷೆಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳು ಎದುರಾದವು.


Full View

ಮಹಾರಾಷ್ಟ್ರದಲ್ಲಿ ನಿಕಟ ಸ್ಪರ್ಧೆ

288 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಮ್ಯಾಜಿಕ್‌ ನಂಬರ್‌ 145. ಚುನಾವಣೋತ್ತರ ಸಮೀಕ್ಷೆಗಳು ಮಹಾಯುತಿ (ಬಿಜೆಪಿ ನೇತೃತ್ವದ ಮೈತ್ರಿಕೂಟ) ಮತ್ತು ಕಾಂಗ್ರೆಸ್, ಎನ್‌ಸಿಪಿ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣವನ್ನು ಒಳಗೊಂಡ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ಜಿದ್ದಾಜಿದ್ದಿನ ಸ್ಪರ್ಧೆಯಿದೆ ಎಂದು ಹೇಳಿದೆ.

ಚುನಾವಣೋತ್ತರ ಸಮೀಕ್ಷೆಗಳ ವಿವರ

ಪೀಪಲ್ಸ್ ಪಲ್ಸ್: ಎಂವಿಎ (85–112), ಮಹಾಯುತಿ (175–195)

ಚಾಣಕ್ಯ: ಎಂವಿಎ (130–138), ಮಹಾಯುತಿ (152–160)

ರಿಪಬ್ಲಿಕ್ ಪಿ-ಮಾರ್ಕ್: ಎಂವಿಎ (110–130), ಮಹಾಯುತಿ (137–157)

ಪೋಲ್‌ ಆಫ್‌ ಪೋಲ್ಸ್: ಎಂವಿಎ (130), ಮಹಾಯುತಿ (144), ಇತರರು (4)‌

ʼಮಹಾʼ ಸಮರದಲ್ಲಿ ಮಹಾಯುತಿ ಮೇಲುಗೈ ಸಾಧಿಸಿದಂತೆ ತೋರುತ್ತಿದ್ದರೂ, ವಿಶ್ಲೇಷಕರು ಈ ಸಂಖ್ಯೆಗಳನ್ನು ಸುಲಭವಾಗಿ ನಂಬಬಾರದು ಎಂದು ಹೇಳಿದ್ದಾರೆ. ಹಿರಿಯ ಪತ್ರಕರ್ತ ಗಿರೀಶ್ ಜೋಶಿ, "ಚುನಾವಣೋತ್ತರ ಸಮೀಕ್ಷೆಗಳು ಸಾಮಾನ್ಯವಾಗಿ ತಪ್ಪುಗಳ ಅಂತರವನ್ನು ಹೊಂದಿರುತ್ತವೆ. ಕೊನೇ ಕ್ಷಣದ ಮತದಾರರ ಒಲವಿನಂಥ ತಳಮಟ್ಟದ ಪ್ರಕ್ರಿಯೆಯನ್ನು ಯಾವಾಗಲೂ ಸೆರೆಹಿಡಿಯುವುದಿಲ್ಲ ಎಂದು ಹೇಳಿದರು. ಇದೇ ವೇಳೆ ಅವರು ಮಹಾರಾಷ್ಟ್ರದ ಪ್ರಾದೇಶಿಕ ರಾಜಕೀಯದ ಸಂಕೀರ್ಣತೆಯನ್ನು ಎತ್ತಿ ತೋರಿಸಿದರು. ಅಲ್ಲಿಕನ ವೈವಿಧ್ಯಮಯ ಪ್ರದೇಶಗಳಲ್ಲಿ ವಿಭಿನ್ನ ಸಮಸ್ಯೆಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಮಹಾರಾಷ್ಟ್ರದ ಪ್ರಮುಖ ಸಮಸ್ಯೆಗಳು

ಕೃಷಿ ಬಿಕ್ಕಟ್ಟು ಮತ್ತು ನಿರುದ್ಯೋಗವು ಮತದಾರರ ಕಾಳಜಿಯಾಗಿದ್ದವು .

ಬಿಜೆಪಿಯ ಪ್ರಚಾರವು ಅಭಿವೃದ್ಧಿ ಮತ್ತು ಹಿಂದುತ್ವ ನಿರೂಪಣೆಗಳ ಮೇಲೆ ಕೇಂದ್ರೀಕರಿಸಿದರೆ, ಎಂವಿಎ ಆಡಳಿತ, ರೈತರ ಸಮಸ್ಯೆಗಳು ಮತ್ತು ಪ್ರಾದೇಶಿಕ ಹೆಮ್ಮೆಗೆ ಒತ್ತು ನೀಡಿತ್ತು.

ಬಂಡಾಯ ಅಭ್ಯರ್ಥಿಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳ ಪಾತ್ರ, ವಿಶೇಷವಾಗಿ ಬಿಜೆಪಿ ಮತ್ತು ಎನ್‌ಸಿಪಿಯ ಪಾತ್ರವು ಅಂತಿಮ ಫಲಿತಾಂಶವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು.

ವಿಶ್ಲೇಷಕ ಸಿದ್ಧಾರ್ಥ್ ಶರ್ಮಾ ಅವರು. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು. ಆದರೆ ಸ್ಪಷ್ಟ ಬಹುಮತದ ಕೊರತೆ ಉಂಟಾಗಬಹುದು ಎಂದು ಊಹಿಸಿದ್ದಾರೆ. "ಎಂವಿಎಯ ಸಂಯೋಜಿತ ಶಕ್ತಿ, ವಿಶೇಷವಾಗಿ ಶರದ್ ಪವಾರ್ ಅವರ ಎನ್ಸಿಪಿ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ ಸರ್ಕಾರ ರಚಿಸುವ ಬಿಜೆಪಿಯ ಪ್ರಯತ್ನಕ್ಕೆ ಸವಾಲನ್ನು ಒಡ್ಡಬಹುದು ಎಂದು ಹೇಳಿದ್ದಾರೆ.

ಜಾರ್ಖಂಡ್: ಬಿಜೆಪಿಗೆ ಕಠಿಣ ಸವಾಲು

ಜಾರ್ಖಂಡ್‌ನ 81 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಹಾಲಿ ಸರ್ಕಾರಕ್ಕೆ ಸವಾಲೊಡ್ಡುವುದಾಗಿ ಸಮೀಕ್ಷೆಗಳು ಹೇಳಿವೆ. ಆದಾಗ್ಯೂ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟವು ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಸಮೀಕ್ಷೆಗಳು ವಿಭಜಿತ ಜನಾದೇಶವನ್ನು ಊಹಿಸುತ್ತವೆ. ಸ್ಪಷ್ಟ ವಿಜೇತರು ಯಾರೆಂದು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ.

ಚುನಾವಣೋತ್ತರ ಸಮೀಕ್ಷೆ:

ಪೀಪಲ್ಸ್ ಪಲ್ಸ್: ಬಿಜೆಪಿ (44–53), ಜೆಎಂಎಂ-ಕಾಂಗ್ರೆಸ್ (25–37)

ರಿಪಬ್ಲಿಕ್ ಪಿ-ಮಾರ್ಕ್: ಬಿಜೆಪಿ (31-40), ಜೆಎಂಎಂ-ಕಾಂಗ್ರೆಸ್ (37-47)

ಪೋಲ್‌ ಆಫ್‌ ಪೋಲ್‌ : ಬಿಜೆಪಿ (42), ಜೆಎಂಎಂ-ಕಾಂಗ್ರೆಸ್ (37)

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಜಾರ್ಖಂಡ್‌ನಲ್ಲಿ ಬಿಜೆಪಿ ಆಕ್ರಮಣಕಾರಿ ಪ್ರಚಾರ ನಡೆಸಿದೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ ಬುಡಕಟ್ಟು ಅಸ್ಮಿತೆ, ಸ್ಥಳೀಯ ಸಮಸ್ಯೆಗಳು ಮತ್ತು ಬಿಜೆಪಿಯ ಅಧಿಕಾರಾವಧಿಯ ಬಗ್ಗೆ ಅಸಮಾಧಾನದ ಮೇಲೆ ಗಮನ ಕೇಂದ್ರೀಕರಿಸಿತು.

ಜಾರ್ಖಂಡ್‌ನ ಪ್ರಮುಖ ಸಮಸ್ಯೆಗಳು

ವಿವಾದಾಸ್ಪದ ಬುಡಕಟ್ಟು ಹಕ್ಕುಗಳು ಮತ್ತು ಭೂಸ್ವಾಧೀನ ನೀತಿಗಳು.

ಬುಡಕಟ್ಟು ಕಲ್ಯಾಣ ಯೋಜನೆಗಳನ್ನು ಬಿಜೆಪಿ ನಿರ್ವಹಿಸಿದ ರೀತಿ ಮತ್ತು ಆ ಪಕ್ಷ ದೇಶಾದ್ಯಂತ ಜಾರಿಗೆ ತರುತ್ತೇವೆ ಎನ್ನವು ಎನ್‌ಆರ್‌ಸಿ -ಸಿಎಎಯಿಂದ ಬುಡಕಟ್ಟು ಸಮುದಾಯಕ್ಕೆ ಆಗುವ ಸಮಸ್ಯೆಗಳನ್ನೇ ಬಂಡವಾಳ ಮಾಡಿಕೊಂಡಿದೆ.

ಜಾರ್ಖಂಡ್ ಸ್ಟೇಟ್ ನ್ಯೂಸ್‌ನ ಸಂಪಾದಕ ಮನೋಜ್ ಪ್ರಸಾದ್, "ಬಿಜೆಪಿಯ ಕಾರ್ಯತಂತ್ರವು ಬುಡಕಟ್ಟು ಬೆಂಬಲವನ್ನು ಗಳಿಸುವುದರ ಮೇಲೆ ಅವಲಂಬಿತವಾಗಿದೆ. ಆದರೆ ಸ್ಥಳೀಯ ಹೆಗ್ಗುರುತು ಮತ್ತು ಸ್ವಾಯತ್ತತೆಗೆ ಜೆಎಂಎಂ ಪರವಾಗಿರಬಹುದು" ಎಂದು ಹೇಳಿದರು. ಬುಡಕಟ್ಟು ಮತಗಳಲ್ಲಿನ ಅಲ್ಪ ಬದಲಾವಣೆಯು ಫಲಿತಾಂಶಗಳನ್ನು ಗಮನಾರ್ಹವಾಗಿ ಬದಲಾಯಿಸಬಹುದು ಎಂದು ಅವರು ಹೇಳಿದ್ದಾರೆ.

ಚುನಾವಣೋತ್ತರ ಸಮೀಕ್ಷೆ ವಿಶ್ವಾಸಾರ್ಹತೆ: ಭಿನ್ನಾಭಿಪ್ರಾಯಗಳು

ದಿ ಫೆಡರಲ್‌ನ ಹಿರಿಯ ಸಂಪಾದಕ ಪುನೀತ್ ನಿಕೋಲಸ್ ಯಾದವ್ ಅವರು ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ದೋಷಪೂರಿತ ವಿಧಾನಗಳಿಂದ ಪ್ರಭಾವಿತಗೊಂಡು ಸಮೀಕ್ಷೆಗಳನ್ನು ʼʼ"ಊಹೆಗಳು" ಎಂದು ಕರೆದಿದ್ದಾರೆ. "ಸಮೀಕ್ಷೆಗಳನ್ನು ಪರಂಪರೆಯ ಸಂಸ್ಥೆಗಳು ಅಥವಾ ಹೊಸ ಸಂಸ್ಥೆಗಳು ನಡೆಸಿದರೂ ಬಹುಕೋನ ಸ್ಪರ್ಧೆಗಳು ಮತ್ತು ಪ್ರಾದೇಶಿಕ ವ್ಯತ್ಯಾಸಗಳನ್ನು ಪತ್ತೆ ಹಚ್ಚಲು ವಿಫಲವಾಗುತ್ತವೆ" ಎಂದು ಅವರು ಹೇಳಿದರು.

ಸಮೀಕ್ಷೆ ಅಂಕಿ ಅಂಶದಲ್ಲಿ ವಿವರದ ಕೊರತೆಯನ್ನು ಶರ್ಮಾ ಟೀಕಿಸಿದರು. ಅಂಕಿಅಂಶಗಳು ಕ್ಷೇತ್ರ-ನಿರ್ದಿಷ್ಟ ಸಂಗತಿಗಳನ್ನು ಮರೆ ಮಾಚುತ್ತವೆ ಎಂದು ಹೇಳಿದರು.


Full View

ಮಹಾರಾಷ್ಟ್ರ ಮತ್ತು ಜಾರ್ಖಂಡ್ ಎರಡೂ ಕುತೂಹಲಕಾರಿ ಫಲಿತಾಂಶಗಳಿಗೆ ಸಜ್ಜಾಗಿವೆ, ಸಂಭಾವ್ಯ ಚುನಾವಣೋತ್ತರ ತಂತ್ರಗಳು ಮತ್ತು ಮೈತ್ರಿಗಳು ಅಂತಿಮ ಚಿತ್ರವನ್ನು ರೂಪಿಸುತ್ತವೆ. ಎರಡೂ ರಾಜ್ಯಗಳಲ್ಲಿ ಸ್ವತಂತ್ರರು ಮತ್ತು ಸಣ್ಣ ಪಕ್ಷಗಳು ಕಿಂಗ್ ಮೇಕರ್‌ಗಳಾಗಬಹುದು ಎಂಬುದನ್ನು ವಿಶ್ಲೇಷಕರು ಒಪ್ಪುತ್ತಾರೆ.

ಮತದಾರರು ಮತ್ತು ಪಕ್ಷಗಳು ನವೆಂಬರ್ 23ರಂದು ಅಧಿಕೃತ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಇದು ಭಾರತೀಯ ಚುನಾವಣೆಗಳ ಅನಿರೀಕ್ಷಿತ ಸ್ವರೂಪವನ್ನು ಮತ್ತೊಂದು ಬಾರಿ ಪ್ರಕಟಿಸಬಹುದು. 

Tags:    

Similar News