ಶಿಂಧೆ- ಬಿಜೆಪಿ ಹಗ್ಗಜಗ್ಗಾಟ; ತೀವ್ರವಾದ ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು
ಹಣಕಾಸು ಮತ್ತು ಗೃಹ ಸೇರಿದಂತೆ ಪ್ರಮುಖ ಖಾತೆಗಳ ಹಂಚಿಕೆಯು ವಿವಾದಕ್ಕೆ ಮೂಲಕ ಕಾರಣವಾಗಿದೆ. ಮಾಜಿ ಸಿಎಂ ಏಕನಾಥ ಶಿಂಧೆ ತಮ್ಮ ಪಕ್ಷಕ್ಕೆ ನಿರ್ಣಾಯಕ ಇಲಾಖೆಗಳನ್ನು ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾಗಿ ಏಳು ದಿನಗಳು ಕಳೆದಿವೆ. ಆದರೂ ಸರ್ಕಾರ ರಚನೆಯ ಬಿಕ್ಕಟ್ಟು ಇನ್ನೂ ಮುಂದುವರಿದಿದೆ. ಬಿಕ್ಕಟ್ಟಿನ ಕೇಂದ್ರ ಬಿಂದು ಸಿಎಂ ಹುದ್ದೆ. ಆಡಳಿತಾರೂಢ ಮಹಾಯುತಿ ಮೈತ್ರಿಕೂಟದೊಳಗೆ ವಿಶೇಷವಾಗಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ನಡುವೆ ಸಿಎಂ ಆಯ್ಕೆ ವಿಚಾರದಲ್ಲಿ ಬಿರುಕು ಮೂಡಿದೆ. ತಮ್ಮ ತವರು ಸತಾರಾದಲ್ಲಿರುವ ಶಿಂಧೆ ಅವರು ಬಿಜೆಪಿ ನಾಯಕರೊಂದಿಗೆ ಮಾತುಕತೆಗಳನ್ನು ಮುಂದುವರಿಸಲು ಸಿದ್ಧರಿಲ್ಲ ಎಂದು ವರದಿಗಳು ಸೂಚಿಸುತ್ತವೆ. ಇದು ಈಗಾಗಲೇ ಉದ್ವಿಗ್ನಗೊಂಡಿರುವ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.
ಸಂಘರ್ಷದ ಕೇಂದ್ರಬಿಂದು
ಹಣಕಾಸು ಮತ್ತು ಗೃಹ ಸೇರಿದಂತೆ ಪ್ರಮುಖ ಖಾತೆಗಳ ಹಂಚಿಕೆಯು ವಿವಾದಕ್ಕೆ ಮೂಲಕ ಕಾರಣವಾಗಿದೆ. ಮಾಜಿ ಸಿಎಂ ಏಕನಾಥ ಶಿಂಧೆ ತಮ್ಮ ಪಕ್ಷಕ್ಕೆ ನಿರ್ಣಾಯಕ ಇಲಾಖೆಗಳನ್ನು ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಬಿಜೆಪಿ ನಕಾರಾತ್ಮಕ ಉತ್ತರ ಕೊಡುತ್ತಿದೆ. ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವ ಬಿಜೆಪಿಯ ಒತ್ತಡದ ಬಗ್ಗೆಯೂ ಶಿಂಧೆ ಅಸಮಾಧಾನ ಹೊಂದಿದ್ದಾರೆ ಎಂಬ ಊಹಾಪೋಹಗಳೂ ಇವೆ.
ಮೈತ್ರಿಕೂಟದ ಗೆಲುವಿನಲ್ಲಿ ಶಿಂಧೆ ಪ್ರಮುಖ ಪಾತ್ರ ವಹಿಸಿದ್ದರೂ ಅವರ ಅಸಮಾಧಾನ ಹೊಸ ಸಮಸ್ಯೆ ಹುಟ್ಟು ಹಾಕಿದೆ. ಶಿಂಧೆ ನಾಯಕತ್ವದಲ್ಲಿ ಶಿವಸೇನೆ ಉತ್ತಮ ಸಾಧನೆ ಮಾಡಿದೆ. ಹೀಗಾಗಿ ತಮ್ಮ ಪಕ್ಷಕ್ಕೂ ತಕ್ಕುದಾದ ಸ್ಥಾನಮಾನ ಸಿಗಬೇಕು ಎಂದು ಅವರು ಹಠ ಹಿಡಿದು ಕುಳಿತಿದ್ದಾರೆ.
ಬೆಳೆಯುತ್ತಿರುವ ವಿಭಜನೆ
ನೀಲು ವ್ಯಾಸ್ ಆಯೋಜಿಸಿದ್ದ ''ದ ಫೆಡರಲ್'ನ ವಿಶೇಷ ಕಾರ್ಯಕ್ರಮ ಕ್ಯಾಪಿಟಲ್ ಬೀಟ್ನಲ್ಲಿ , ರಾಜಕೀಯ ತಜ್ಞರು ಪಾಲ್ಗೊಂಡು ಮಹಾರಾಷ್ಟ್ರ ಚುನಾವಣೆ ವಿಚಾರವನ್ನು ಚರ್ಚಿಸಿದರು. ಇದೇ ವೇಲೆ ಶಿವಸೇನೆ ವಕ್ತಾರ ಸುಶೀಲ್ ವ್ಯಾಸ್ ಮಾತನಾಡಿ. ಶಿಂಧೆ ಕೋಪ ಮಾಡಿಕೊಂಡಿದ್ದಾರೆ ಎಂಬ ವರದಿಗಳನ್ನು ಮಾಧ್ಯಮ ಊಹಾಪೋಹ ಎಂದಿದ್ದಾರೆ. ಶಿಂಧೆ ಅವರು ಮೈತ್ರಿಗೆ ಬದ್ಧರಾಗಿದ್ದಾರೆ ಮತ್ತು ಯಾವುದೇ ಭಿನ್ನಾಭಿಪ್ರಾಯದ ಧ್ವನಿ ಎತ್ತಿಲ್ಲ ಎಂದು ಅವರು ಹೇಳಿದರು.
ರಾಜಕೀಯ ವಿಶ್ಲೇಷಕರಾದ ಅನುರಾಗ್ ಚತುರ್ವೇದಿ ಮತ್ತು ಸಂಜಯ್ ಜೋಗ್ ಇಬ್ಬರೂ ಮೈತ್ರಿಯಲ್ಲಿ ಗೋಚರಿಸುವ ಬಿರುಕುಗಳನ್ನು ಬೊಟ್ಟು ಮಾಡಿ ತೋರಿಸಿದರು.
ತಮ್ಮ ಬಣಕ್ಕೆ ಪ್ರಭಾವಿ ಖಾತೆಗಳು ಮತ್ತುತಮ್ಮ ಪುತ್ರನಿಗೆ ಉಪಮುಖ್ಯಮಂತ್ರಿ ಹುದ್ದೆ ಸೇರಿದಂತೆ ಶಿಂಧೆ ಅವರ ಬೇಡಿಕೆಗಳು ಬಿಕಟ್ಟು ಸೃಷ್ಟಿಸಿವೆ ಎಂದು ಚತುರ್ವೇದಿ ಅಭಿಪ್ರಾಯಪಟ್ಟರು. ಶಿಂಧೆ ಅಸಮಾಧಾನವು ಮಿತ್ರಪಕ್ಷಗಳನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿಯಲ್ಲೂ ಸೇರಿಕೊಂಡಿದೆ. ಶಿಂಧೆ ಅವರ ಅಸಮಾಧಾನವು ಕೇವಲ ಖಾತೆ ಮಾತುಕತೆಗಳಿಂದ ಮಾತ್ರವಲ್ಲ, ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯದಿಂದ ತಮ್ಮ ಖ್ಯಾತಿಗೆ ಕುತ್ತಾಗಬಹುದು ಎಂಬ ಕಾಳಜಿಯಿಂದಲೂ ಕೂಡಿದೆ,
ಮುಂದೇನು?
ಡಿಸೆಂಬರ್ 5 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಿಜೆಪಿ ಘೋಷಿಸಿದೆ. ಆದರೆ ಅನಿಶ್ಚಿತತೆಗಳು ಇನ್ನೂ ಉಳಿದಿವೆ. ಕೇಂದ್ರ ಬಿಜೆಪಿ ನಾಯಕತ್ವವು ಶಿಂಧೆ ಅವರನ್ನು ದೂರವಿರಿಸುವ ಬಗ್ಗೆ ಎಚ್ಚರಿಕೆ ವಹಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ನಿರ್ಣಾಯಕವಾಗಿರುವ ಬಿಜೆಪಿಯ ಮೈತ್ರಿ ಯೋಜನೆಗೆ ಶಿಂಧೆ ಹೊರನಡೆದರೆ ತೊಂದರೆಯಾಗಬಹುದು ಎಂದು ಅವರು ಭಾವಿಸಿದ್ದಾರೆ.
ಶಿಂಧೆ ಸಮತೋಲನದ ಮನಸ್ಥಿತಿಯನ್ನು ತೋರಿಸುತ್ತಿದ್ದಾರೆ. ಬಿಜೆಪಿಯೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಳ್ಳಲು ಅವರಿಗೆ ಸಾಧ್ಯವಾಗದಿದ್ದರೂ ಅದು ಒದಗಿಸುವ ಆರ್ಥಿಕ ಮತ್ತು ರಾಜಕೀಯ ಸಂಪನ್ಮೂಲಗಳನ್ನು ಗಮನಿಸಿದರೆ ಒಪ್ಪಿಕೊಳ್ಳುವುದು ಅನಿವಾರ್ಯ. ಅವರ ಪಕ್ಷದೊಳಗೆ ಮತ್ತು ಅವರ ಬೆಂಬಲಿಗರಿಗೂ ಅದೇ ಬೇಕಾಗಿದೆ.
ಮಹಾಯುತಿಗೆ ಒಂದು ಪರೀಕ್ಷೆ
ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಮುಂದಿನ ಕೆಲವು ದಿನಗಳು ನಿರ್ಣಾಯಕವಾಗಿವೆ. ಜೋಗ್ ಅವರು ಹೇಳುವಂತೆ, "ಶಿಂಧೆ ತಮ್ಮದೇ ಆದ ಪ್ರಸ್ತುತತೆಯನ್ನು ಕಾಪಾಡಿಕೊಳ್ಳುವಾಗ ಬಿಜೆಪಿ ತನ್ನ ಪ್ರಾಬಲ್ಯವನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕು." ಬಿಜೆಪಿ ತನ್ನ ವಿಶಾಲ ರಾಜಕೀಯ ಉದ್ದೇಶಗಳನ್ನು ದುರ್ಬಲಗೊಳಿಸದೆ ಶಿಂಧೆ ಅವರ ಬೇಡಿಕೆಗಳಿಗೆ ಅವಕಾಶ ನೀಡಬಹುದೇ ಎಂಬುದರ ಮೇಲೆ ಮೈತ್ರಿಕೂಟದ ದೃಢತೆಯನ್ನು ಅವಲಂಬಿಸಿದೆ.
ಸದ್ಯಕ್ಕೆ, ಒಂದೇ ಪ್ರಶ್ನೆ ಉಳಿದಿದೆ. ಶಿಂಧೆ ಕಡಿಮೆ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆಯೇ ಅಥವಾ ಮೈತ್ರಿಯನ್ನು ಉಳಿಸಿಕೊಳ್ಳುವ ಅವರ ಬೇಡಿಕೆಗಳಿಗೆ ಬಿಜೆಪಿ ಮಣಿಯುತ್ತದೆಯೇ?