ಪ್ರಶಾಂತ್ ಕಿಶೋರ್ ಪಕ್ಷದ ವಕ್ತಾರರಲ್ಲ: ಬಿಜೆಪಿ

Update: 2024-05-23 12:10 GMT

ʻಪ್ರಶಾಂತ್ ಕಿಶೋರ್ ಅವರು ಪಕ್ಷದ ರಾಷ್ಟ್ರೀಯ ವಕ್ತಾರರಲ್ಲʼ ಎಂದು ಬಿಜೆಪಿ ಹೇಳಿದೆ. 

ಪಿಕೆ ಕುರಿತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆ ನಕಲಿ ಎಂದು ಜಾನ್ ಸುರಾಜ್ ಸ್ಪಷ್ಟನೆ ನೀಡಿದ್ದಾರೆ. ಗೊಂದಲಕ್ಕೆ ಕಾಂಗ್ರೆಸ್ ಮತ್ತು ಅದರ ನಾಯಕ ಜೈರಾಮ್ ರಮೇಶ್ ಕಾರಣ ಎಂದು ಆರೋಪಿಸಿದ್ದಾರೆ. 

ಜಾನ್‌ ಹೇಳಿದ್ದೇನು?: ಪಕ್ಷದ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಜಾನ್ ಸುರಾಜ್ ಅವರು ವಾಟ್ಸಾಪ್‌ನಲ್ಲಿ ಜೈರಾಮ್ ರಮೇಶ್ ಅವರ ಸ್ಕ್ರೀನ್‌ಶಾಟ್‌ ನ್ನು ಹಂಚಿಕೊಂಡಿದ್ದಾರೆ. ʻವಿಪರ್ಯಾಸ ನೋಡಿ! ಕಾಂಗ್ರೆಸ್, ರಾಹುಲ್ ಗಾಂಧಿ ಸೇರಿದಂತೆ ನೀವೆಲ್ಲರೂ ನಕಲಿ ಸುದ್ದಿ ಬಗ್ಗೆ ಮಾತನಾಡುತ್ತೀರಿ ಮತ್ತು ಬಲಿಪಶು ಎಂದು ಹೇಳಿಕೊಳ್ಳುತ್ತೀರಿ. ಆದರೆ, ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ನಕಲಿ ದಾಖಲೆಯನ್ನು ಪ್ರಸಾರ ಮಾಡುತ್ತಿದ್ದಾರೆ,ʼ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. 

ನಡ್ಡಾ ಅವರು ಕಿಶೋರ್ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದ್ದಾರೆ ಎಂದಿರುವ ಬಿಜೆಪಿ ಲೆಟರ್ ಹೆಡ್ ನ್ನು ಹಲವರು ಎಕ್ಸ್ ಮತ್ತು ಫೇಸ್‌ಬುಕ್‌ ನಲ್ಲಿ ಹಂಚಿಕೊಂಡಿದ್ದಾರೆ. 

ಕಿಶೋರ್ ಭವಿಷ್ಯ: ಮಂಗಳವಾರ ಕಿಶೋರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಗೆಲುವಿನ ಭವಿಷ್ಯ ನುಡಿದ ನಂತರ ಚಿತ್ರ ವೈರಲ್ ಆಗಿದೆ. 2014 ರ ಚುನಾವಣೆಯಲ್ಲಿ ಕಿಶೋರ್, ಮೋದಿ ಅವರೊಂದಿಗೆ ಕೆಲಸ ಮಾಡಿದ್ದರು. ಕಿಶೋರ್ ಪ್ರಕಾರ, ಈ ಚುನಾವಣೆಯಲ್ಲಿ ಬಿಜೆಪಿ 303 ಅಥವಾ ಅದಕ್ಕಿಂತ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತದೆ. 

Tags:    

Similar News