PM Modi: ನಾಳೆ ಮಹಾಕುಂಭಮಳಕ್ಕೆ ಮೋದಿ ಭೇಟಿ, ಪುಣ್ಯಸ್ನಾನ
PM Modi: 10.50ಕ್ಕೆ ಏರಿಯಲ್ ಘಾಟ್‌ನಿಂದ ಬೋಟ್ ಮೂಲಕ ಮಹಾಕುಂಭ ಸ್ಥಳಕ್ಕೆ ತೆರಳಲಿದ್ದಾರೆ. 11ರಿಂದ 11.30ರವರೆಗೆ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ.;
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ(ಬುಧವಾರ) ಭೇಟಿ ನೀಡಲಿದ್ದು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆ ನಾಳೆಯೇ ನಡೆಯಲಿದೆ. ದೆಹಲಿಯಲ್ಲಿ ಪ್ರಚಾರ ಕಾರ್ಯ ಮುಗಿಸಿರುವ ಅವರು ಪುಣ್ಯ ಸ್ನಾನಕ್ಕೆ ಬರುತ್ತಿದ್ದಾರೆ.
ಬುಧವಾರ ಬೆಳಗ್ಗೆ 10.05 ಗಂಟೆಗೆ ಪ್ರಧಾನಿ ಮೋದಿ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ಅವರು 10.10ಕ್ಕೆ ಡಿಪಿಎಸ್ ಹೆಲಿಪ್ಯಾಡ್‌ಗೆ ಹೋಗಿ ಅಲ್ಲಿಂದ ಏರಿಯಲ್ ಘಾಟ್‌ಗೆ ಹೋಗಲಿದ್ದಾರೆ. 10.50ಕ್ಕೆ ಏರಿಯಲ್ ಘಾಟ್‌ನಿಂದ ಬೋಟ್ ಮೂಲಕ ಮಹಾಕುಂಭ ಸ್ಥಳಕ್ಕೆ ತೆರಳಲಿದ್ದಾರೆ. 11ರಿಂದ 11.30ರವರೆಗೆ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ.
ಮೋದಿ ಅವರು 11.45ಕ್ಕೆ ಮತ್ತೆ ಮತ್ತೆ ಸುರಕ್ಷಿತ ಬೋಟ್ ಮೂಲಕ ಏರಿಯಲ್ ಘಾಟ್ ಗೆ ಬಂದು, ಡಿಪಿಎಸ್ ಹೆಲಿಪ್ಯಾಡ್‌ಗೆ ಮರಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಪ್ರಯಾಗ್ ರಾಜ್ ಏರ್ಪೋರ್ಟ್‌ನಿಂದ ದೆಹಲಿಗೆ ವಾಪಸಾಗಲಿದ್ದಾರೆ.
ಕುಂಭಮೇಳಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮೋದಿಯವರು ಸಾಧು-ಸಂತರೊಂದಿಗೆ ಸಂವಾದ ನಡೆಸುವ ಮತ್ತು ಮಹಾಕುಂಭದಲ್ಲಿ ಮಾಡಿರುವ ವ್ಯವಸ್ಥೆಗಳನ್ನು ಪರಿಶೀಲಿಸುವ ನಿರೀಕ್ಷೆಯಿದೆ.
ಫೆ.5ರ ವಿಶೇಷತೆಯೇನು?
ಫೆಬ್ರವರಿ 5ರಂದು ಮಾಘ ಅಷ್ಟಮಿ ಮತ್ತು ಭೀಷ್ಮ ಅಷ್ಟಮಿ ಆಚರಣೆ ನಡೆಯುತ್ತದೆ. ಮಾಘ ಮಾಸದ 8ನೇ ದಿನ ಮಾಘ ಅಷ್ಟಮಿ. ಮಹಾ ಕುಂಭ ಮೇಳದ ಹಿನ್ನೆಲೆಯಲ್ಲಿ ಈ ದಿನ ಪ್ರಯಾಗ್‌ರಾಜ್‌ನಲ್ಲಿ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡುತ್ತಾರೆ. ಅಂದು ಗುಪ್ತ ನವರಾತ್ರಿಯೂ ಹೌದು. ಇನ್ನು ಮಹಾಭಾರತದ ಭೀಷ್ಮನ ಸ್ಮರಣಾರ್ಥ ಭೀಷ್ಮಾಷ್ಟಮಿಯನ್ನುಎಂದೂ ಆಚರಿಸಲಾಗುತ್ತದೆ. ಸೂರ್ಯನು ಉತ್ತರಾಯಣ ಮತ್ತು ಶುಕ್ಲಪಕ್ಷದೆಡೆಗೆ ಸಾಗುವವರೆಗೂ ಭೀಷ್ಮ ಬಾಣಗಳ ಹಾಸಿಗೆಯಲ್ಲಿ ಮಲಗಿದ್ದರು ಎಂಬ ಪ್ರತೀತಿ ಇದೆ.