ಒಂದು ರಾಷ್ಟ್ರ- ಒಂದು ಚುನಾವಣೆ| ಜಾರಿ ಅಸಾಧ್ಯ- ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದನೆ

ಒಂದು ರಾಷ್ಟ್ರ- ಒಂದು ಚುನಾವಣೆ ಯೋಜನೆ ಜಾರಿಗಾಗಿ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಅದು ಅಸಾಧ್ಯವಾದ ಸಂಗತಿ ಎಂದು ಖರ್ಗೆ ಹೇಳಿದರು.;

Update: 2024-10-31 16:42 GMT

ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯ ʼಒಂದು ರಾಷ್ಟ್ರ-ಒಂದು ಚುನಾವಣೆʼ ಜಾರಿ ಅಸಾಧ್ಯವಾದ ಸಂಗತಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಂದು ರಾಷ್ಟ್ರ- ಒಂದು ಚುನಾವಣೆ ಯೋಜನೆ ಜಾರಿಗಾಗಿ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಅದು ಅಸಾಧ್ಯವಾದ ಸಂಗತಿ ಎಂದು ಖರ್ಗೆ ಹೇಳಿದರು.

ಪ್ರಧಾನಿ ಮೋದಿ ಅವರು ಗುಜರಾತಿನ ಕೆವಾಡಿಯಾದಲ್ಲಿ ಮಾತನಾಡುವ ವೇಳೆ, ದೇಶವು ಈಗ ಒಂದು ರಾಷ್ಟ್ರ, ಒಂದು ಚುನಾವಣೆಯತ್ತ ಸಾಗುತ್ತಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಪ್ರಜಾಪ್ರಭುತ್ವ ಬಲಗೊಳ್ಳಲಿದೆ. ಅಭಿವೃದ್ಧಿ ಹೊಂದಿದ ದೇಶವಾಗುವತ್ತ ಭಾರತ ಸಾಗಬೇಕಾದರೆ ಇದು ಅನಿವಾರ್ಯ ಎಂದು ಹೇಳಿದ್ದರು.

ಇಂದು ಭಾರತವು ಒಂದು ರಾಷ್ಟ್ರ-ಒಂದು ನಾಗರಿಕ ಸಂಹಿತೆಯ ಕಡೆ ತಿರುಗಿ ನೋಡುತ್ತಿದೆ. ಅದು ಜಾತ್ಯತೀತ ನಾಗರಿಕ ಸಂಹಿತೆಯಾಗಲಿದೆ ಎಂದು ಹೇಳಿದ್ದರು.

ಕಳೆದ ತಿಂಗಳಷ್ಟೇ ಕೇಂದ್ರ ಸಚಿವ ಸಂಪುಟವು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ನೀಡಿದ್ದ ಒಂದು ರಾಷ್ಟ್ರ-ಒಂದು ಚುನಾವಣೆ ವರದಿಯನ್ನು ಅನುಮೋದಿಸಿತ್ತು. ಇದು ಸಾರ್ವತ್ರಿಕ ಮತ್ತು ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ನಡೆಸುವ ಸರ್ಕಾರದ ಪ್ರಯತ್ನಕ್ಕೆ ದಾರಿ ಮಾಡಿಕೊಟ್ಟಿತ್ತು.

Tags:    

Similar News