ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ: ಮತದಾರರ ಒಲವು ಅಸ್ಮಿತೆಗೋ, ವಿಭಜನೆಗೊ?

ರಾಜಕೀಯ ಪಕ್ಷಗಳು ನೀಡಿರುವ ಭರವಸೆಗಳು, ಅವರ ಕಾರ್ಯತಂತ್ರಗಳು ಮತ್ತು ವಿವಾದಗಳ ನಡುವೆ ಯಾವ ಮೈತ್ರಿ ಮೇಲುಗೈ ಸಾಧಿತ್ತದೆ ಎಂಬ ಕುತೂಹಲ ಮತದಾರರು ಮತ್ತು ರಾಜಕೀಯ ವಿಶ್ಲೇಷಕರಿಗೆ ಮೂಡಿದೆ. ಪ್ರಮುಖವಾಗಿ ಇಲ್ಲಿ ವಿಭಜನೆ ಮತ್ತು ಅಸ್ಮಿತೆಯ ತಂತ್ರಗಳು ಮೇಲಾಟವಾಡಿವೆ.

Update: 2024-11-19 06:29 GMT
ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ: ಮತದಾರರ ಒಲವು ಅಸ್ಮಿತೆಗೋ, ವಿಭಜನೆಗೊ?
ಮಹಾರಾಷ್ಟ್ರ ಜಾರ್ಖಂಡ್‌ ಚುನಾವಣೆ.

ಮಹಾರಾಷ್ಟ್ರದಲ್ಲಿ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ಎರಡನೇ ಹಂತದ ಪ್ರಚಾರ ಕೊನೆಗೊಂಡಿದೆ. ಎರಡೂ ರಾಜ್ಯಗಳಲ್ಲಿ ರಾಜಕೀಯ ಜಿದ್ದಾಜಿದ್ದು ಎದ್ದು ಕಾಣುತ್ತಿದೆ. ಮತದಾನಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಏತನ್ಮಧೆ, ರಾಜಕೀಯ ಪಕ್ಷಗಳು ನೀಡಿರುವ ಭರವಸೆಗಳು ಅವರ ಕಾರ್ಯತಂತ್ರಗಳು ಮತ್ತು ವಿವಾದಗಳ ನಡುವೆ ಯಾವ ಮೈತ್ರಿ ಮೇಲುಗೈ ಸಾಧಿಸುತ್ತದೆ ಎಂಬ ಕುತೂಹಲ ಮತದಾರರು ಮತ್ತು ರಾಜಕೀಯ ವಿಶ್ಲೇಷಕರಿಗೆ ಮೂಡಿದೆ.


Full View

ಮಹಾರಾಷ್ಟ್ರ ಬಿಗಿ ಪಟ್ಟು

ಮಹಾರಾಷ್ಟ್ರದಲ್ಲಿ, ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಒಳಗೊಂಡ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟವು ಬಿಜೆಪಿ ನೇತೃತ್ವದ ಮಹಾ ಯುತಿ ಮೈತ್ರಿಕೂಟದ ವಿರುದ್ಧ ಜಿದ್ದಿಗೆ ಬಿದ್ದಿದೆ. ಈ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ವಿವೇಕ್ ದೇಶಪಾಂಡೆ. ಬಿಜೆಪಿಯ ಆಡಳಿತದ ಬಗ್ಗೆ ದೀರ್ಘಕಾಲದ ಮತದಾರರ ಅಸಮಾಧಾನವು ಮಹಾ ವಿಕಾಸ್‌ ಅಘಾಡಿ ಮುನ್ನಡೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ʼʼಶಿವಾಜಿ, ಅಂಬೇಡ್ಕರ್ ಮತ್ತು ಪ್ರಗತಿಪರ ಚಿಂತಕರ ಪರಂಪರೆಯಿಂದ ರೂಪುಗೊಂಡ ಮಹಾರಾಷ್ಟ್ರದ ಸಾಮಾಜಿಕ ರಾಜಕೀಯ ಚಿತ್ರಣವು ವಿಭಜಕ ಕಾರ್ಯಸೂಚಿಗಳನ್ನು ವಿರೋಧಿಸಿದ ಇತಿಹಾಸ ಹೊಂದಿದೆ ಎಂಬುದಾಗಿ ದೇಶಪಾಂಡೆ ಹೇಳಿದ್ದಾರೆ. ಹಿಂದೂ-ಮುಸ್ಲಿಂ ವಿಭಜನೆಯ ನಿರೂಪಣೆಯನ್ನು ಮುನ್ನೆಲೆಗೆ ತರುವ ಬಿಜೆಪಿ ಪ್ರಯತ್ನ ಕೈಗೂಡುವುದಿಲ್ಲ,ʼʼ ಎಂದು ವಿವೇಕ್‌ ಅವರು ವಿಶ್ಲೇಷಿಸಿದ್ದಾರೆ .

ಮುಂದುವರಿದ ದೇಶಪಾಂಡೆ ಅವರು, ʼʼವಿಭಜನೆಯ ಹೇಳಿಕೆಯ ಹೊರತಾಗಿಯೂ ಮಹಿಳೆಯರಿಗೆ ಆರ್ಥಿಕ ಸಹಾಯದಂತಹ ಉಚಿತ ಯೋಜನೆಗಳು ಆಡಳಿತ ವಿರೋಧಿ ಭಾವ ಹೊಂದಿದ್ದ ಕೆಲವು ಮತದಾರರ ಅಸಮಾಧಾನ ನಿವಾರಿಸಬಹುದು. ಇದು ಬಿಜೆಪಿಗೆ ವರವಾಗಬಹುದು ಎಂದಿದ್ದಾರೆ. ಇದರ ನಡುವೆ ಬೆಲೆ ಏರಿಕೆ ಮತ್ತು ರೈತರ ಸಂಕಷ್ಟಗಳಂತಹ ಸವಾಲುಗಳು ಕಾಳಜಿಯಾಗಿಯೇ ಉಳಿಯಲಿದೆ,ʼʼ ಎಂದು ಅವರು ನುಡಿದಿದ್ದಾರೆ.

ಜಾರ್ಖಂಡ್‌ನಲ್ಲಿ ವಿಭಜನೆ ಮತ್ತು ಅಸ್ಮಿತೆಯ ಪ್ರಶ್ನೆ

ಹೇಮಂತ್ ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಸರ್ಕಾರವಿದ್ದ ಜಾರ್ಖಂಡ್‌ನಲ್ಲಿ ಬಿಜೆಪಿ ತನ್ನ ಯುಕ್ತಿ ಪ್ರದರ್ಶಿಸಲು ಯತ್ನಿಸಿದೆ. ಆದಾಗ್ಯೂ ಅಲ್ಲಿನ ರಾಜಕೀಯ ನೆಲೆ ಅನಿರೀಕ್ಷಿತ. ನೆಲದ ಅಸ್ಮಿತೆಯ ರಾಜಕೀಯ ಮತ್ತು ಬುಡಕಟ್ಟು ಜನರ ಹಕ್ಕುಗಳೇ ಇಲ್ಲಿ ಪ್ರಾಬಲ್ಯ ಸಾಧಿಸುತ್ತವೆ. ಇದು ನಿರ್ಣಾಯಕ ಅಭಿವೃದ್ಧಿ ಕುರಿತ ಕೊರತೆಗಳನ್ನು ಮರೆಮಾಚುತ್ತವೆ ಎಂದು ಪತ್ರಕರ್ತ ಮನೋಜ್ ಪ್ರಸಾದ್ ಗಮನ ಸೆಳೆದಿದ್ದಾರೆ.

ಸಣ್ಣ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಬುಡಕಟ್ಟು ಮತದಾರರರು ಜೆಎಂಎಂ ಜತೆಗೆ ಹೋಗದಂತೆ ನೋಡಿಕೊಂಡಿದ್ದು ಸ್ವಲ್ಪ ವೇಗ ಪಡೆದುಕೊಂಡಿದೆ. ಬುಡಕಟ್ಟು ಮತಗಳಲ್ಲಿ, ವಿಶೇಷವಾಗಿ ಸಂತಾಲ್ ಮತ್ತು ಕೊಲ್ಹಾನ್ ಸಮುದಾಯಗಳ ನಡುವೆ ಮತ ವಿಭಜನೆಯು ಬಿಜೆಪಿಗೆ ಲಾಭ ಮಾಡುವ ಸಾಧ್ಯತೆಯಿದೆ. ಬುಡಕಟ್ಟು ಮತಗಳು ನಿರ್ಣಾಯಕ ಅಂಶವಾಗಿವೆ ಎಂದು ಐತಿಹಾಸಿಕ ಅಂಕಿ ಅಂಶಗಳು ಬಹಿರಂಗಪಡಿಸುತ್ತದೆ. ನಿಷ್ಠೆಯಲ್ಲಿನ ಸಣ್ಣ ಬದಲಾವಣೆಗಳು ಸಹ ಫಲಿತಾಂಶಗಳನ್ನು ಗಮನಾರ್ಹವಾಗಿ ಬದಲಾಯಿಸಬಹುದು ಎಂದು ಅವರು ಹೇಳುತ್ತಾರೆ.

ಬಿಜೆಪಿಯ ಬಲವಾದ ಪ್ರಚಾರದ ಹೊರತಾಗಿಯೂ, ಹೇಮಂತ್ ಸೊರೆನ್ ಜೆಎಂಎಂ-ಕಾಂಗ್ರೆಸ್ ಮೈತ್ರಿ ಬಲಪಡಿಸಿಕೊಳ್ಳುವುದಕ್ಕೆ ಯಶಸ್ವಿಯಾಗಿದೆ. ಆದರೂ ಕಾಂಗ್ರೆಸ್ ತಳಮಟ್ಟದಲ್ಲಿ ದುರ್ಬಲ ಎಂಬುದು ಸಾಬೀತಾಗಿದೆ. ಕೇಂದ್ರದ ತನ್ನ ಶಕ್ತಿಯನ್ನು ಬಳಸಿಕೊಂಡು ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಪ್ರಸಾದ್ ಭವಿಷ್ಯ ನುಡಿದಿದ್ದಾರೆ.

ಪರಿಣಾಮಗಳು, ದೀರ್ಘಕಾಲೀನ ಪ್ರಶ್ನೆಗಳು

ಎರಡೂ ರಾಜ್ಯಗಳಲ್ಲಿ ಅಸ್ಮಿತೆಯ ರಾಜಕೀಯ ಮತ್ತು ಭಾವನಾತ್ಮಕ ವಿಷಯವೇ ಪ್ರಚಾರದಲ್ಲಿ ಮೇಲುಗೈ ಸಾಧಿಸಿದ್ದವು. ಹೀಗಾಗಿ ಬಡತನ, ನಿರುದ್ಯೋಗ ಮತ್ತು ರೈತರ ಸಂಕಷ್ಟದಂತಹ ಪ್ರಮುಖ ಸಮಸ್ಯೆಗಳನ್ನು ಮೂಲೆಗುಂಪಾಗಿವೆ. ಜಾರ್ಖಂಡ್‌ನಲ್ಲಿ ಇರುವ ಖನಿಜ ಸಂಪತ್ತಿನ ಹೊರತಾಗಿಯೂ, ನಗರದಲ್ಲಿನ ಬಡತನ ಮತ್ತು ತಲಾ ಆದಾಯದಂತಹ ಅಭಿವೃದ್ಧಿ ವಿಚಾರಗಳಲ್ಲಿ ಹಿಂದುಳಿದಿದೆ. ಅದೇ ರಿತಿ ಕೃಷಿ ಬಿಕ್ಕಟ್ಟು ಸೇರಿದಂತೆ ಮಹಾರಾಷ್ಟ್ರದ ಆರ್ಥಿಕ ಸವಾಲುಗಳು ಇನ್ನೂ ಬಗೆಹರಿದಿಲ್ಲ.

ಮತದಾರರು ಮತದಾನ ಮಾಡಲು ಮುಂದಾಗುತ್ತಿದ್ದಂತೆಯೇ ಅಪಾಯಗಳು ಹೆಚ್ಚಾಗಿವೆ. ಮಹಾರಾಷ್ಟ್ರದ ಮತದಾರರು ಮಹಾ ವಿಕಾಸ್‌ ಅಘಾಡಿಯ ಸ್ಥಿರತೆಗೆ ಮತ ನೀಡುತ್ತಾರೆಯೇ ಅಥವಾ ಬಿಜೆಪಿಯ ಕಾರ್ಯತಂತ್ರಕ್ಕೆ ಮುಚ್ಚುತ್ತಾರೆಯೇ ನೋಡಬೇಕು. ಜಾರ್ಖಂಡ್‌ನಲ್ಲಿ ಸೊರೆನ್ ಸರ್ಕಾರವು ಬಿಜೆಪಿಯ ಸಂಘಟಿತ ಪ್ರಭಾವ ತಡೆದುಕೊಳ್ಳಬಹುದೇ ಎಂಬುದು ಎಲ್ಲರ ಮುಂದಿರುವ ಪ್ರಶ್ನೆ. ನವೆಂಬರ್ 23ರ ಫಲಿತಾಂಶ ರಾಜ್ಯ ರಾಜಕಾರಣಕ್ಕೊಂದು ಸ್ಪಷ್ಟ ನಿಲುವು ನೀಡಲಿದೆ.

Tags:    

Similar News