Maha Kumbh : ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಭಕ್ತರಿಂದ ʼಅಮೃತ ಸ್ನಾನʼ

Maha Kumbh : ಶ್ರೀ ಪಂಚಾಯತ್ ಅಖಾಡ ಮಹಾನಿರ್ವಾಣಿ ಮತ್ತು ಶ್ರೀ ಶಂಭು ಪಂಚಾಯತ್ ಅಟಲ್ ಅಖಾಡ. 'ಅಮೃತ ಸ್ನಾನ' ಕೈಗೊಂಡವರಲ್ಲಿ ಮೊದಲಿಗರು.;

Update: 2025-01-14 05:07 GMT
ಅಮೃತ ಸ್ವಾನ ಮಾಡಿದ ಭಕ್ತರು.

2025 ರ ಮಹಾ ಕುಂಭ ಮೇಳದಲ್ಲಿ ಮಂಗಳವಾರ ಬೆಳಿಗ್ಗೆ 11.30ರ ವರೆಗೆ 1.38 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ (ಅಮೃತ ಸ್ನಾನ) ಮಾಡಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಮಹಾಕುಂಭಕ್ಕೆ ಬರುವವರಿಗೆ ಶುಭ ಕೋರಿದ್ದಾರೆ. "ಇಂದು ಮಹಾ ಕುಂಭದ ಮೊದಲ ಅಮೃತ ಸ್ನಾನದ  ದಿನ. ದೇಶ ಮತ್ತು ಜಗತ್ತಿನ ಎಲ್ಲೆಡೆಯಿಂದ ಮಹಾ ಕುಂಭದತ್ತ ಬರುವುದನ್ನು ನೋಡುವುದು ಖುಷಿಯ ವಿಚಾರ.  ಸೋಮವಾರ ಸುಮಾರು 1.75 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ " ಎಂದು ಯೋಗಿ ಆದಿತ್ಯನಾಥ್ ಹೇಳಿದರು.

144 ವರ್ಷಗಳಿಗೊಮ್ಮೆ ನಡೆಯುವ 'ಮಹಾ ಕುಂಭ'ದಲ್ಲಿ ಜನರು ತ್ರಿವೇಣಿ ಸಂಗಮ ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಇದರಿಂದ ಪಾಪಗಳು ತೊಳೆಯುತ್ತವೆ,  ಆತ್ಮ ಶುದ್ಧವಾಗುತ್ತದೆ ಎಂಬ ನಂಬಿಕೆಯಿದೆ.

ಶ್ರೀ ಪಂಚಾಯತ್ ಅಖಾಡ ಮಹಾನಿರ್ವಾಣಿ ಮತ್ತು ಶ್ರೀ ಶಂಭು ಪಂಚಾಯತ್ ಅಟಲ್ ಅಖಾಡ. 'ಅಮೃತ ಸ್ನಾನ' ಕೈಗೊಂಡವರಲ್ಲಿ ಮೊದಲಿಗರು.

13 ಅಖಾಡಗಳು ಭಾಗಿ 

ಮೊದಲ 'ಅಮೃತ ಸ್ನಾನ' ಅನೇಕ ರೀತಿಯಲ್ಲಿ ವಿಶೇಷ. 'ಪುಷ್ಯ ಪೂರ್ಣಿಮೆ' ಸಂದರ್ಭದಲ್ಲಿ ಸಂಗಮ ಪ್ರದೇಶದಲ್ಲಿ ಸೋಮವಾರ ಮೊದಲ ಪ್ರಮುಖ 'ಸ್ನಾನ' ನಡೆದ ಒಂದು ದಿನದ ನಂತರ ಇದು ನಡೆಯುತ್ತದೆ.

ವಿವಿಧ ಪಂಥಗಳ ಹದಿಮೂರು ಅಖಾಡಗಳು ಮಹಾ ಕುಂಭದಲ್ಲಿ ಭಾಗವಹಿಸುತ್ತಿವೆ.

ಚಳಿಗಾಲದಲ್ಲಿ ಹೆಪ್ಪುಗಟ್ಟುವ ನೀರಿನ ಹೊರತಾಗಿಯೂ ಭಕ್ತರು ಗುಂಪುಗಳಾಗಿ ಸ್ನಾನದ ಪ್ರದೇಶದತ್ತ ಸಾಗುತ್ತಿದ್ದಂತೆ 'ಹರ ಹರ ಮಹಾದೇವ್', 'ಜೈ ಶ್ರೀ ರಾಮ್' ಮತ್ತು 'ಜೈ ಗಂಗಾ ಮೈಯ್ಯಾ' ಘೋಷಣೆಗಳು ಕೇಳಿಬಂದವು.

ಮಕರ ಸಂಕ್ರಾಂತಿ ಮತ್ತು ಬಸಂತ್ ಪಂಚಮಿಯಂದು ಸನಾತನ ಧರ್ಮದ 13 ಅಖಾಡಗಳ 'ಅಮೃತ ಸ್ನಾನ'ದ ದಿನಾಂಕ, ಆದೇಶ ಮತ್ತು ಸಮಯದ ಬಗ್ಗೆ ಮಹಾ ಕುಂಭ ಮೇಳ ಆಡಳಿತವು ಆದೇಶ ಹೊರಡಿಸಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಮುಂಜಾನೆ ಆರಂಭ

ಈ ಮಹಾ ಕುಂಭದ ಮೊದಲ 'ಅಮೃತ ಸ್ನಾನ' ಮಂಗಳವಾರ ಬೆಳಿಗ್ಗೆ 5.30 ಕ್ಕೆ ಪ್ರಾರಂಭವಾಗಿದೆ ಎಂದು ಅಖಿಲ ಭಾರತೀಯ ಅಖಾರಾ ಪರಿಷತ್ (ಎಬಿಎಪಿ) ಅಧ್ಯಕ್ಷ ಮಹಂತ್ ರವೀಂದ್ರ ಪುರಿ ತಿಳಿಸಿದ್ದಾರೆ.

ಕುಂಭಮೇಳಕ್ಕೆ ಸಂಬಂಧಿಸಿದ ಸಾಮಾನ್ಯ ಪದಗಳಾದ 'ಶಾಹಿ ಸ್ನಾನ್' ಮತ್ತು 'ಪೇಶ್ವಾಯಿ' ಅನ್ನು ಕ್ರಮವಾಗಿ 'ಅಮೃತ್ ಸ್ನಾನ್' ಮತ್ತು 'ಚಾವ್ನಿ ಪ್ರವೇಶ್' ಎಂದು ಬದಲಾಯಿಸಲಾಗಿದೆ ಎಂದು ಅವರು ಹೇಳಿದರು.

ಸಂಸ್ಕೃತ ಹೆಸರು

ಹರಿದ್ವಾರದ ಮಾನಸ ದೇವಿ ದೇವಾಲಯ ಟ್ರಸ್ಟ್‌ ಅಧ್ಯಕ್ಷರೂ ಆಗಿರುವ ಮಹಂತ್ ಪುರಿ ಮಾತನಾಡಿ "ನಾವೆಲ್ಲರೂ ಹಿಂದಿ ಮತ್ತು ಉರ್ದು ಪದಗಳನ್ನು ಬಳಸುತಿದ್ದೆವು. ದೇವರುಗಳ ವಿಷಯಕ್ಕೆ ಬಂದಾಗ, ಸಂಸ್ಕೃತ ಭಾಷೆಯ ಪದಗಳನ್ನು ಬಳಸಲು ಮುಂದಾದೆವು. ಇದನ್ನು ಹಿಂದೂಗಳು ಮತ್ತು ಮುಸ್ಲಿಮರು ಎಂದು ಮಾಡುವುದು ನಮ್ಮ ಉದ್ದೇಶವಲ್ಲ" ಎಂದು ಅವರು ಹೇಳಿದರು.

ಕಾಕತಾಳೀಯ

"ಮಹಾ ಕುಂಭಮೇಳದಲ್ಲಿ ಎರಡು ಸ್ನಾನಗಳು ಸತತ ದಿನಗಳಲ್ಲಿ ನಡೆಯುತ್ತಿರುವುದು ದೈವಿಕ ಕಾಕತಾಳೀಯ. 'ಪುಷ್ಯ ಪೂರ್ಣಿಮಾ'ದ ಪ್ರಮುಖ 'ಸ್ನಾನ' ಸೋಮವಾರ ಮತ್ತು ಮಕರ ಸಂಕ್ರಾಂತಿ ಮಂಗಳವಾರ ನಡೆದಿದೆ ಎಂದು ಅವರು ಹೇಳಿದರು.

ಕುಂಭಮೇಳದ ಪ್ರಸ್ತುತ ಆವೃತ್ತಿಯು 12 ವರ್ಷಗಳ ನಂತರ ನಡೆಯುವ ಪೂರ್ಣ ಕುಂಭ. ಜತೆಗೆ 144  ವರ್ಷಗಳ ನಂತರ ನಡೆಯುತ್ತಿರುವ  ಮಹಾಕುಂಭವೂ (ನಾಲ್ಕು ಗ್ರಹಗಳು ಸರಳ ರೇಖೆಗೆ ಬರುವ ವರ್ಷ) ಹೌದು. 

Tags:    

Similar News