ವಿಮಾನ ದುರಂತ: ಏರ್‌ ಇಂಡಿಯಾದ ಎರಡನೆ ಬ್ಲ್ಯಾಕ್‌ ಬಾಕ್ಸ್‌ ಪತ್ತೆ

ಶುಕ್ರವಾರ (ಜೂ.12) ಒಂದು ಬ್ಲ್ಯಾಕ್‌ ಬಾಕ್ಸ್‌ ಪತ್ತೆಯಾಗಿತ್ತು. ಇದೀಗ ಎರಡನೆ ಬ್ಲ್ಯಾಕ್‌ ಬಾಕ್ಸ್‌ ಪತ್ತೆಯಾಗಿದ್ದು ವಿಮಾನದ ದುರಂತಕ್ಕೆ ನಿಖರವಾದ ಕಾರಣಗಳೇನು ಎಂಬುದು ಪತ್ತೆಹಚ್ಚಲು ಸಹಕಾರಿಯಾಗಿದೆ ಎಂದು ಪಿ.ಕೆ. ಮಿಶ್ರಾ ತಿಳಿಸಿದ್ದಾರೆ.;

Update: 2025-06-16 12:06 GMT
ಏರ್‌ ಇಂಡಿಯಾ ವಿಮಾನ (ಸಾಂದರ್ಭಿಕ ಚಿತ್ರ)

ಅಹಮದಾಬಾದ್‌ ವಿಮಾನ ನಿಲ್ದಾಣ ಬಳಿ ಪತನಗೊಂಡು ೨೭೦ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಏರ್‌ ಇಂಡಿಯಾ ವಿಮಾನದ ಎರಡನೆ ಬ್ಲ್ಯಾಕ್‌ ಬಾಕ್ಸ್‌ ಪತ್ತೆಯಾಗಿದೆ.  ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ ಅವರು ಸೋಮವಾರ ಈ ಮಾಹಿತಿ ನೀಡಿದ್ದಾರೆ. 

ಏರ್‌ ಇಂಡಿಯಾ ವಿಮಾನ ಬೋಯಿಂಗ್​​ ಡ್ರೀಮ್​​ಲೈನರ್ ವಿಮಾನದಲ್ಲಿ  ಬ್ಲ್ಯಾಕ್‌ ಬಾಕ್ಸ್‌ಗಳಿದ್ದವು. ಒಂದು ಕಳೆದ ಶುಕ್ರವಾರ (ಜೂ.12) ಒಂದು ಪತ್ತೆಯಾಗಿತ್ತು. ಇದೀಗ ಎರಡನೆ ಬಾಕ್ಸ್‌ ಪತ್ತೆಯಾಗಿದೆ. ಇದರಿಂದ ಸಂಗ್ರಹವಾದ ಮಾಹಿತಿಯ ಮೂಲಕ ಅವಘಡಕ್ಕೆ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಸಾಧ್ಯವಿದೆ. 

ಬ್ಲ್ಯಾಕ್‌ ಬಾಕ್ಸ್‌ ಎಂದರೇನು?

ವಿಮಾನಯಾನ ಕ್ಷೇತ್ರದಲ್ಲಿ ಇದು ಚಿರಪರಿಚಿತ ಸಾಧನ. ವಿಮಾನದೊಳಗೆ ಈ ಬಾಕ್ಸ್​ ಇಟ್ಟಿರುತ್ತಾರೆ ಹಾಗೂ ಈ ಬಾಕ್ಸ್​ನಲ್ಲಿ ವಿಮಾನ ಹಾರಾಟ ಸೇರಿದಂತೆ ಎಲ್ಲ ಕಾರ್ಯಾಚರಣೆ ವಿವರಗಳು ಈ ಪೆಟ್ಟಿಯಲ್ಲಿ ದಾಖಲಾಗುತ್ತವೆ. ಬಾಕ್ಸ್​ ಹೆಸರು ಬ್ಲ್ಯಾಕ್​​ (ಕಪ್ಪು) ಎಂದಾದರೂ  ಕಿತ್ತಳೆ ಬಣದಲ್ಲಿರುತ್ತದೆ. ಸ್ಫೋಟ, ಬೆಂಕಿ, ನೀರಿನ ಒತ್ತಡ ಮತ್ತು ಇನ್ಯಾವುದೇ ಕಠಿಣ ಪರಿಸ್ಥಿತಿಯನ್ನು ತಡೆದುಕೊಳ್ಳುವಂತೆ ನಿರ್ಮಿಸಲಾಗಿರುತ್ತದೆ. ವಿಮಾನಗಳು ಅವಘಡಕ್ಕೆ ಒಳಗಾದ ಬಳಿಕ ಅದರ ಬ್ಲ್ಯಾಕ್​​ ಬಾಕ್ಸ್​ ಪಡೆದು ಅದರ ಮೂಲಕ ಕಾರಣಗಳನ್ನು ತಿಳಿದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಒಂದು ವಿಮಾನವಿಮಾನದಲ್ಲಿ ಎರಡು ಬ್ಲ್ಯಾಕ್‌ ಬಾಕ್ಸ್‌ಗಳಿರುತ್ತವೆ.  ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್​CVR) ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ (FDR)  ಇದರ ಪ್ರಮುಖ ಕಾರ್ಯ. 

ಪೈಲಟ್‌ಗಳ ನಡುವಿನ ಸಂಭಾಷಣೆ, ಎಂಜಿನ್ ಸದ್ದು, ಫ್ಲೈಟ್ ಡೇಟಾ, ವಿಮಾನದ ಎತ್ತರ,  ಗಾಳಿ ಬೀಸುವ ವೇಗ, ಹಾರಾಟದ ದಿಕ್ಕು ಸೂಚಕ, ಆಟೋಪೈಲಟ್ ಸ್ಥಿತಿ ಇತ್ಯಾದಿ 80ಕ್ಕೂ ಹೆಚ್ಚು ವಿವಿಧ ರೀತಿಯ ಮಾಹಿತಿಗಳನ್ನು ದಾಖಲಿಸುತ್ತದೆ.

 

ಏನಿದು ಏರ್ ಇಂಡಿಯಾ ವಿಮಾನ ದುರಂತ? 

ಗುರುವಾರ (ಜೂ. 12) ರಂದು ಸರ್ದಾರ್‌ ವಲ್ಲಭಭಾಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಟೇಕಾಫ್‌ ಆದ ಕೆಲವೇ ಸೆಕೆಂಡುಗಳಲ್ಲಿ ಸಮೀಪದ ವೈದ್ಯಕೀಯ ವಸತಿ ನಿಲಯಕ್ಕೆ ಅಪ್ಪಳಿಸಿ ಸ್ಪೋಟಗೊಂಡಿತ್ತು. ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಸೇರಿದಂತೆ 270 ಕ್ಕೂ ಅಧಿಕ ಮಂದಿ ಮೃತಪಟ್ಟು ಹಲವಾರು ಜನ ಗಾಯಗೊಂಡಿದ್ದರು. ಇದು ಭಾರತ ಕಂಡಿರುವ ಅತ್ಯಂತ ಭೀಕರ ವಿಮಾನ ದುರಂತಗಳಲ್ಲಿ ಒಂದು. ಈ ಘಟನೆ ವಿಮಾನ ಯಾನ ಕ್ಷೇತ್ರದಲ್ಲಿ ಆಘಾತ ಮೂಡಿಸಿದ್ದು ವಿಶ್ವಾದ್ಯಂತ ಜನರು ಸಂತಾಪ ಸೂಚಿಸಿದ್ದಾರೆ.  

Tags:    

Similar News